Kolkata murder case: ಆರ್‌ಜಿ ಕರ್ ಆಸ್ಪತ್ರೆಗೆ ಸಿಐಎಸ್ಎಫ್ ಭದ್ರತೆ ನೀಡಲು ಸುಪ್ರೀಂಕೋರ್ಟ್ ಆದೇಶ

|

Updated on: Aug 20, 2024 | 1:49 PM

ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆಯಾದ ಆರ್‌ಜಿ ಕರ್ ಘಟನೆಗೆ ಸಂಬಂಧಿಸಿದ ವಿಚಾರಣೆಯ ಸಂದರ್ಭದಲ್ಲಿ ಸಿಜೆಐ, ಈ ಸ್ಥಿತಿ ಬದಲಾಗಲು ರಾಷ್ಟ್ರವು ಮತ್ತೊಂದು ಅತ್ಯಾಚಾರಕ್ಕಾಗಿ ಕಾಯಲು ಸಾಧ್ಯವಿಲ್ಲ. ಪಿತೃಪ್ರಭುತ್ವದ ಪಕ್ಷಪಾತದಿಂದಾಗಿ ಮಹಿಳೆಯರು ಹೆಚ್ಚಾಗಿ ಗುರಿಯಾಗುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.

Kolkata murder case: ಆರ್‌ಜಿ ಕರ್ ಆಸ್ಪತ್ರೆಗೆ ಸಿಐಎಸ್ಎಫ್ ಭದ್ರತೆ ನೀಡಲು ಸುಪ್ರೀಂಕೋರ್ಟ್ ಆದೇಶ
ಸುಪ್ರೀಂಕೋರ್ಟ್
Follow us on

ದೆಹಲಿ ಆಗಸ್ಟ್ 20: ವೈದ್ಯೆಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ವೈದ್ಯರು (Kolkata murder case) ಪ್ರತಿಭಟನೆ ನಡೆಸುತ್ತಿರುವಾಗಲೇ ಗುಂಪು ದಾಳಿ ನಡೆದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF ) ನಿಯೋಜಿಸುವಂತೆ ಸುಪ್ರೀಂಕೋರ್ಟ್ (Supreme Court) ಮಂಗಳವಾರ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ಪಶ್ಚಿಮ ಬಂಗಾಳದ ವೈದ್ಯರ ಸಂಘಟನೆಯ ಪರವಾಗಿ ಹಾಜರಾದ ವಕೀಲರು ಘಟನೆಗಳ ವಿವರಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಆಗಸ್ಟ್ 14ರಂದು ” Reclaiming the night ” ಪ್ರತಿಭಟನೆಯಲ್ಲಿ ವೈದ್ಯರು ಭಾಗವಹಿಸುತ್ತಿದ್ದಾಗ, ಆರ್‌ಜಿ ಕರ್ ಆಸ್ಪತ್ರೆಯ ಮಹಿಳಾ ವೈದ್ಯರಿಗೆ ಪ್ರತಿಭಟನೆಯನ್ನು ಮುಂದುವರೆಸಿದರೆ ಅತ್ಯಾಚಾರ ಸಂತ್ರಸ್ತರಿಗೆ ಆದ ಅದೇ ಗತಿ ಬರಲಿದೆ ಎಂದು ಬೆದರಿಕೆ ಹಾಕಲಾಗಿತ್ತು ಎಂದು ವಕೀಲರು ತಿಳಿಸಿದ್ದಾರೆ.

ಆಗಸ್ಟ್ 14 ರ ಮಧ್ಯರಾತ್ರಿ ಆಸ್ಪತ್ರೆಯ ಸಿಬ್ಬಂದಿಗಳು ಪ್ರತಿಭಟನಾನಿರತರಾಗಿದ್ದಾಗ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಅನಾಮಧೇಯ ಇಮೇಲ್ ಅನ್ನು ಪರಿಗಣಿಸಿದ ಸುಪ್ರೀಂಕೋರ್ಟ್, ಆಸ್ಪತ್ರೆಯಲ್ಲಿ ಸಿಐಎಸ್ಎಫ್ ಅನ್ನು ನಿಯೋಜಿಸಬೇಕು ಎಂಬ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಪ್ರಸ್ತಾಪವನ್ನು ಒಪ್ಪಿಕೊಂಡಿತು.  ಅನಾಮಧೇಯ ದೂರನ್ನು ಪರಿಶೀಲಿಸಿದ ನಂತರ ನ್ಯಾಯಾಲಯವು ಶಾಂತಿಯುತ ಪ್ರತಿಭಟನಾಕಾರರ ಮೇಲೆ ಗುಂಪು ದಾಳಿ ಮಾಡಿದಾಗ ಪಶ್ಚಿಮ ಬಂಗಾಳ ಪೊಲೀಸರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂಬ ಆರೋಪದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿತು.

“ಈ ಪೊಲೀಸರು ವೈದ್ಯರಿಗೆ ರಕ್ಷಣೆ ನೀಡುತ್ತಾರೆಯೇ?” ಎಂದು ನ್ಯಾಯಮೂರ್ತಿ ಪರ್ದಿವಾಲಾ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಒಟ್ಟು 700 ಸಿಬ್ಬಂದಿ ಇದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಆದಾಗ್ಯೂ, ದಾಳಿ  ನಂತರ, ಹೆಚ್ಚಿನ ವೈದ್ಯರು ಆಸ್ಪತ್ರೆ ತೊರೆದಿದ್ದು ಸುಮಾರು 100 ಮಂದಿ ಮಾತ್ರ ಉಳಿದಿದ್ದಾರೆ. 700 ಸಿಬ್ಬಂದಿಗಳು ಮತ್ತು 250 ಮಹಿಳೆಯರು ಇದ್ದಾರೆ. 30 ರಿಂದ 40 ಮಹಿಳಾ ಸಿಬ್ಬಂದಿ ಮತ್ತು 60-70 ಪುರುಷ ನಿವಾಸಿಗಳು ಉಳಿದಿದ್ದಾರೆ. ಉಳಿದವರು ಆಸ್ಪತ್ರೆ ತೊರೆದಿದ್ದಾರೆ ಎಂದು ಹೇಳಲಾಗಿದೆ.

ವೈದ್ಯರಿಗೆ ಆಸ್ಪತ್ರೆಯಲ್ಲಿ ಇಲ್ಲ ಸರಿಯಾದ ಸೌಲಭ್ಯ

ವೈದ್ಯರಿಗೆ ವಿಶ್ರಾಂತಿಯ ಸ್ಥಳವಿಲ್ಲ ಎಂದು ಸಿಬಿಐ ಗಮನಿಸಿದೆ, ಅವರಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡಿಲ್ಲ. ವೈದ್ಯಕೀಯ ಆರೋಗ್ಯ ಘಟಕಗಳಲ್ಲಿ ಭದ್ರತೆಯ ಕೊರತೆಯಿದೆ. ಅಶಿಸ್ತಿನ ರೋಗಿಗಳನ್ನು ಕೂಡಾ ವೈದ್ಯರೇ ನೋಡಿಕೊಳ್ಳಬೇಕು.ಆಸ್ಪತ್ರೆಯಲ್ಲಿ ವೈದ್ಯರಿಗೆ ಒಂದೇ ಒಂದು ಸಾಮಾನ್ಯ ಶೌಚಾಲಯವಿದೆ. ಇವರು ವಾಶ್ ರೂಂ ಬಳಸಲು ದೂರ ಹೋಗಬೇಕಾಗಿದೆ ಎಂದು ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಆರ್ ಜೆ ಕರ್ ಆಸ್ಪತ್ರೆಯಲ್ಲಿ ಸೌಕರ್ಯಗಳ ಕೊರತೆ ಬಗ್ಗೆ ಗಮನಿಸಿದೆ.

ಮುಂದಿನ ವಿಚಾರಣೆ ಆಗಸ್ಟ್ 22ಕ್ಕೆ

ವೈದ್ಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂಕೋರ್ಟ್ ರಾಷ್ಟ್ರೀಯ ಕಾರ್ಯಪಡೆ ರಚನೆಗೆ ಆದೇಶಿಸಿದ ನಂತರ ನ್ಯಾಯಾಲಯವು ಅದರ ಮುಂದಿನ ವಿಚಾರಣೆಯನ್ನು ಆಗಸ್ಟ್ 22ಕ್ಕೆ ನಡೆಸಲಿದೆ. ಪಶ್ಚಿಮ ಬಂಗಾಳ ಸರ್ಕಾರವು ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಗುಂಪು ಹಿಂಸಾಚಾರದ ಸಂದರ್ಭಗಳನ್ನು ವಿವರಿಸುವ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.

ಮತ್ತೊಂದು ಅತ್ಯಾಚಾರಕ್ಕಾಗಿ ಕಾಯಲು ಸಾಧ್ಯವಿಲ್ಲ: ಸಿಜೆಐ

ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆಯಾದ ಆರ್‌ಜಿ ಕರ್ ಘಟನೆಗೆ ಸಂಬಂಧಿಸಿದ ವಿಚಾರಣೆಯ ಸಂದರ್ಭದಲ್ಲಿ ಸಿಜೆಐ, ಈ ಸ್ಥಿತಿ ಬದಲಾಗಲು ರಾಷ್ಟ್ರವು ಮತ್ತೊಂದು ಅತ್ಯಾಚಾರಕ್ಕಾಗಿ ಕಾಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಪಿತೃಪ್ರಭುತ್ವದ ಪಕ್ಷಪಾತದಿಂದಾಗಿ ಮಹಿಳೆಯರು ಹೆಚ್ಚಾಗಿ ಗುರಿಯಾಗುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಗಮನಿಸಿದರು. ಅಸ್ತಿತ್ವದಲ್ಲಿರುವ ಕಾನೂನುಗಳು ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರ ಸಾಂಸ್ಥಿಕ ಸುರಕ್ಷತಾ ಮಾನದಂಡಗಳನ್ನು ಸಮರ್ಪಕವಾಗಿ ಪರಿಹರಿಸುವುದಿಲ್ಲ. “ಹೆಚ್ಚು ಹೆಚ್ಚು ಮಹಿಳೆಯರು ಕೆಲಸಕ್ಕೆ ಸೇರುತ್ತಿದ್ದಂತೆ, ವಾಸ್ತವ ವಿಷಯಗಳು ಬದಲಾಗಲು ರಾಷ್ಟ್ರವು ಮತ್ತೊಂದು ಅತ್ಯಾಚಾರಕ್ಕಾಗಿ ಕಾಯಲು ಸಾಧ್ಯವಿಲ್ಲ ಎಂದು ಸಿಜೆಐ ಹೇಳಿದ್ದಾರೆ.

ಆಸ್ಪತ್ರೆ ಮೇಲೆ ದಾಳಿ; 50 ಎಫ್‌ಐಆರ್‌ ದಾಖಲು

ಆರ್‌ಜಿ ಕರ್ ಘಟನೆಯ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ, ಆಗಸ್ಟ್ 14 ರಂದು ಗುಂಪು ದಾಳಿ ಪ್ರಕರಣದಲ್ಲಿ 37 ಜನರನ್ನು ಬಂಧಿಸಲಾಗಿದೆ ಮತ್ತು 50 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 50 ಎಫ್‌ಐಆರ್‌ಗಳನ್ನು ದಾಖಲಿಸುವುದು ತನಿಖೆ ಚುರುಕಾಗಿದೆ ಎಂದು ಹೇಳುತ್ತಿಲ್ಲ ಎಂದಿದ್ದಾರೆ. ಆಗಸ್ಟ್ 22 ರಂದು ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಗುಂಪು ದಾಳಿ ಘಟನೆಯ ಬಗ್ಗೆ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶಿಸಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವಿಷಯಗಳು ಉಲ್ಬಣಗೊಂಡಿವೆ: ಸಿಬಲ್

ಆರ್‌ಜಿ ಕರ್ ಘಟನೆಯಲ್ಲಿ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಪಾತ್ರವನ್ನು ಚರ್ಚಿಸುವಾಗ ಸಾಮಾಜಿಕ ಮಾಧ್ಯಮವು ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ ಎಂದು ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆಯೇ ? ಇನ್ನೊಂದು ಆಸ್ಪತ್ರೆಗೆ ಅವರನ್ನು ಶೀಘ್ರವಾಗಿ ನೇಮಿಸಲಾಗಿದೆಯೇ ಎಂದು ಪ್ರಶ್ನಿಸಿದಾಗ, ಸಿಬಲ್ ಈ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ ಮತ್ತು ಅವರನ್ನು ಹೈಕೋರ್ಟ್ ರಜೆಗೆ ಹೋಗುವಂತೆ ಹೇಳಿದೆ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: ಕೋಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ: ಸುರಕ್ಷತೆಗಾಗಿ ರಾಷ್ಟ್ರೀಯ ಕಾರ್ಯಪಡೆ ರಚನೆಗೆ ಸುಪ್ರೀಂ ಸೂಚನೆ

ಆಸ್ಪತ್ರೆಗಳ ಮಾಹಿತಿ ಸಂಗ್ರಹಿಸಿ, ಒಂದು ತಿಂಗಳಲ್ಲಿ ವರದಿ ಸಲ್ಲಿಸಿ

ಸಿಜೆಐ ಡಿವೈ ಚಂದ್ರಚೂಡ್ ಅವರು ಪ್ರತಿ ಆಸ್ಪತ್ರೆಯಲ್ಲಿ ನೇಮಕಗೊಂಡಿರುವ ಭದ್ರತಾ ಸಿಬ್ಬಂದಿಯ ಸಂಖ್ಯೆಯ ಡೇಟಾವನ್ನು ಸಂಗ್ರಹಿಸಲು ಎಲ್ಲಾ ರಾಜ್ಯಗಳನ್ನು ಹೇಳಿದ್ದಾರೆ. ರಾಜ್ಯಗಳು ಒಂದು ತಿಂಗಳಲ್ಲಿ ವರದಿ ಸಲ್ಲಿಸಬೇಕು. ಸಿಬಿಐ ಕೂಡ ಆಗಸ್ಟ್ 22 ರೊಳಗೆ ಮಧ್ಯಂತರ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಪಶ್ಚಿಮ ಬಂಗಾಳ ರಾಜ್ಯವು ಆರ್ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವಿಧ್ವಂಸಕ ಕೃತ್ಯದ ಬಗ್ಗೆ ಆಗಸ್ಟ್ 22 ರೊಳಗೆ ವರದಿಯನ್ನು ಸಲ್ಲಿಸಬೇಕಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ