Mukesh Ambani: ಮುಕೇಶ್​ ಅಂಬಾನಿ ಹಾಗೂ ಕುಟುಂಬಕ್ಕೆ ದೇಶ, ವಿದೇಶದಲ್ಲಿ ಝಡ್​ಪ್ಲಸ್ ಭದ್ರತೆ, ವೆಚ್ಚ ಅವರೇ ಭರಿಸುತ್ತಾರೆ: ಸುಪ್ರೀಂ

|

Updated on: Mar 01, 2023 | 2:07 PM

ಉದ್ಯಮಿ ಮುಕೇಶ್‌ ಅಂಬಾನಿ(Mukesh Ambani) ಮತ್ತು ಅವರ ನಾಲ್ವರು ನಿಕಟ ಕುಟುಂಬ ಸದಸ್ಯರಿಗೆ ದೇಶದ ಜೊತೆಗೆ ವಿದೇಶದಲ್ಲೂ ಝಡ್‌ ಪ್ಲಸ್‌ ಭದ್ರತೆ ಒದಗಿಸಬೇಕು ಹಾಗೆಯೇ ವೆಚ್ಚವನ್ನು ಅಂಬಾನಿಯೇ ಭರಿಸಬೇಕೆಂದು ಸುಪ್ರೀಂಕೋರ್ಟ್​ ಹೇಳಿದೆ.

Mukesh Ambani: ಮುಕೇಶ್​ ಅಂಬಾನಿ ಹಾಗೂ ಕುಟುಂಬಕ್ಕೆ ದೇಶ, ವಿದೇಶದಲ್ಲಿ ಝಡ್​ಪ್ಲಸ್ ಭದ್ರತೆ, ವೆಚ್ಚ ಅವರೇ ಭರಿಸುತ್ತಾರೆ: ಸುಪ್ರೀಂ
ಮುಕೇಶ್ ಅಂಬಾನಿ
Follow us on

ಉದ್ಯಮಿ ಮುಕೇಶ್‌ ಅಂಬಾನಿ(Mukesh Ambani) ಮತ್ತು ಅವರ ನಾಲ್ವರು ನಿಕಟ ಕುಟುಂಬ ಸದಸ್ಯರಿಗೆ ದೇಶದ ಜೊತೆಗೆ ವಿದೇಶದಲ್ಲೂ ಝಡ್‌ ಪ್ಲಸ್‌ ಭದ್ರತೆ ಒದಗಿಸಬೇಕು ಹಾಗೆಯೇ ವೆಚ್ಚವನ್ನು ಅಂಬಾನಿಯೇ ಭರಿಸಬೇಕೆಂದು ಸುಪ್ರೀಂಕೋರ್ಟ್​ ಹೇಳಿದೆ. ಅವರ ಕುಟುಂಬವೇ ಭದ್ರತಾ ವೆಚ್ಚ ಭರಿಸುತ್ತಿರುವಾಗ ಅವರಿಗೆ ಒದಗಿಸಲಾಗುತ್ತಿರುವ ರಕ್ಷಣೆಯನ್ನು ಅವರು ವಾಸಿಸುವ ರಾಜ್ಯಕ್ಕೆ (ಮಹಾರಾಷ್ಟ್ರ) ಮಾತ್ರವೇ ನಿರ್ಬಂಧಿಸಲಾಗದು. ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರ ದೇಶದೊಳಗಿನ ಮತ್ತು ದೇಶದಾಚೆಗಿನ ವ್ಯಾಪಾರ ಚಟುವಟಿಕೆಯನ್ನು ಗಮನಿಸಿ ಅಲ್ಲಿಯೂ ರಕ್ಷಣೆ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಹೇಳಿದೆ.

ಮುಕೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ, ಅನಂತ್ ಅಂಬಾನಿ ಮತ್ತು ಇಶಾ ಅಂಬಾನಿ ಅವರಿಗೆ ಭಾರೀ ಭದ್ರತೆ ಒದಗಿಸಬೇಕು ಹಾಗೂ ಅದಕ್ಕೆ ಸಂಬಂಧಿಸಿದ ವೆಚ್ಚವನ್ನು ಅಂಬಾನಿ ಕುಟುಂಬವೇ ಭರಿಸಬೇಕು ಎಂದು ಕೋರ್ಟ್ ಸೂಚಿಸಿತು.

ಭದ್ರತೆ ಒದಗಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಮಹಾರಾಷ್ಟ್ರ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.
ಹಾಗಾಗಿ, ಅಂಬಾನಿ ಮತ್ತವರ ಕುಟುಂಬದ ವ್ಯಾಪಾರ ಚಟುವಟಿಕೆಗಳು ದೇಶದೊಳಗೆ ಹಾಗೂ ಹೊರಗೆ ವ್ಯಾಪಿಸಿವೆ. ಇದರಿಂದಾಗಿ ಅವರಿಗೆ ನೀಡಲಾಗಿರುವ ಭದ್ರತೆಯನ್ನು ಕೇವಲ ನಿರ್ದಿಷ್ಟ ಸ್ಥಳ ಅಥವಾ ಪ್ರದೇಶಕ್ಕೆ ಮಾತ್ರವೇ ಸೀಮಿತಗೊಳಿಸಿದರೆ ಭದ್ರತೆಯ ಉದ್ದೇಶವೇ ವಿಫಲವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಮತ್ತಷ್ಟು ಓದಿ: Bomb Threat Call: ಅಮಿತಾಭ್​, ಅಂಬಾನಿ, ಧರ್ಮೇಂದ್ರ ಮನೆಯಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ ಕಿಡಿಗೇಡಿ

ಅಂಬಾನಿ ಕುಟುಂಬದ ಪರವಾಗಿ ಹಿರಿಯ ನ್ಯಾಯವಾದಿ ಮುಕುಲ್‌ ರೋಹಟ್ಗಿ ಅವರು ಮಂಡಿಸಿದ ವಾದ ಆಲಿಸಿದ ನ್ಯಾಯಾಲಯ ನೀಡಿರುವ ಸೂಚನೆಗಳು ಹೀಗಿವೆ

-ಭಾರತದೊಳಗೆ ಮತ್ತು ವಿದೇಶದಲ್ಲಿ ಇಡಿಯಾಗಿ ಒದಗಿಸಲಾಗುವ ಝಡ್‌ ಪ್ಲಸ್‌ ಭದ್ರತೆಯ ವೆಚ್ಚವನ್ನು ಮುಕೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ, ಅನಂತ್ ಅಂಬಾನಿ ಹಾಗೂ ಇಶಾ ಅಂಬಾನಿ ಅವರು ಒದಗಿಸಬೇಕು.

-ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಭದ್ರತೆ ನೀಡುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ವೇಳೆ ಈ ಆದೇಶ ನೀಡಲಾಗಿದೆ. ಕುಟುಂಬಕ್ಕೆ ಒದಗಿಸಿರುವ ಭದ್ರತೆ ಮುಂದುವರಿಸಲು ಸುಪ್ರೀಂ ಕೋರ್ಟ್ ಜುಲೈ 2022ರಲ್ಲಿ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿತ್ತು.

-ಮುಕೇಶ್‌ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಒದಗಿಸಲಾಗಿರುವ ಜಡ್‌ ಪ್ಲಸ್‌ ಭದ್ರತೆ ದೇಶದಾದ್ಯಂತ ಇದೆಯೇ ಎಂಬುದನ್ನು ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯ ಖಚಿತಪಡಿಸಿಕೊಳ್ಳಬೇಕು.

-ಮುಕೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ, ಅನಂತ್ ಅಂಬಾನಿ ಮತ್ತು ಇಶಾ ಅಂಬಾನಿ ಅವರು ವಿದೇಶದಲ್ಲಿ ಪ್ರಯಾಣಿಸುವಾಗ ಭಾರತ ಸರ್ಕಾರದ ನೀತಿಯ ಪ್ರಕಾರ ಒದಗಿಸಲಾಗುವ ಅತ್ಯುನ್ನತ ಮಟ್ಟದ ಜಡ್‌ ಪ್ಲಸ್‌ ಭದ್ರತೆಯನ್ನು ಸಹ ಒದಗಿಸಬೇಕು. ಇದನ್ನು ಕೂಡ ಗೃಹ ವ್ಯವಹಾರಗಳ ಸಚಿವಾಲಯ ಖಾತ್ರಿಪಡಿಸಿಕೊಳ್ಳಬೇಕು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ