
ನವದೆಹಲಿ, ನವೆಂಬರ್ 12: ಬಾಡಿಗೆದಾರರು(Tenants) ಎಂದಿಗೂ ಆ ಮನೆಯ ಮಾಲೀಕನಾಗಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. ಭೂಮಾಲೀಕರ ಹಕ್ಕುಗಳನ್ನು ಬಲಪಡಿಸುವ ತೀರ್ಪನ್ನು ನ್ಯಾಯಾಲಯ ನೀಡಿದೆ. ಅವರು 5 ವರ್ಷಗಳಿಂದ ಇಲ್ಲವೇ 50 ವರ್ಷಗಳಿಂದಲೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೂ ಆ ಆಸ್ತಿಯ ಮಾಲೀಕತ್ವವನ್ನು ಪಡೆಯಲು ಎಂದಿಗೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಲೀಕರ ಒಪ್ಪಿಗೆಯ ಮೇರೆಗೆ ಅವರು ಹೇಳುವವರೆಗೆ ಆ ಜಾಗವನ್ನು ಬಳಸುವ ಅಧಿಕಾರವಷ್ಟೇ ಬಾಡಿಗೆದಾರನಿಗೆ ಇರುತ್ತದೆ. ಈ ತೀರ್ಪು ಭೂಮಾಲೀಕರ ಹಕ್ಕುಗಳನ್ನು ಬಲಪಡಿಸುವ ಜೊತೆಗೆ, ದಶಕಗಳಿಂದ ನಡೆದುಕೊಂಡು ಬಂದ ಬಾಡಿಗೆದಾರ-ಮಾಲೀಕ ವಿವಾದಗಳಿಗೆ ದೃಢವಾದ ತಡೆಯೊಡ್ಡಿದೆ.
ದೆಹಲಿಯಲ್ಲಿ ಆರಂಭವಾದ ಈ ಪ್ರಕರಣವು ಆಸ್ತಿ ಮಾಲೀಕ ಜ್ಯೋತಿ ಶರ್ಮಾ ಮತ್ತು ಬಾಡಿಗೆದಾರ ವಿಷ್ಣು ಗೋಯಲ್ ನಡುವಿನ ದೀರ್ಘಕಾಲೀನ ವಿವಾದವಾಗಿತ್ತು.
1980ರ ದಶಕದಿಂದಲೂ ವಿಷ್ಣು ಗೋಯಲ್ ಜ್ಯೋತಿ ಶರ್ಮಾ ಅವರ ಆಸ್ತಿಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. 30 ವರ್ಷಗಳಿಗೂ ಹೆಚ್ಚು ಕಾಲ ಯಾವುದೇ ಅಡೆತಡೆಯಿಲ್ಲದೆ ಅಲ್ಲಿ ವಾಸವಿದ್ದ ಅವರು, ಬಾಡಿಗೆ ಪಾವತಿಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು.
ಮಾಲೀಕರು ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದನ್ನು ಆಧಾರವಾಗಿಟ್ಟುಕೊಂಡು, ಗೋಯಲ್ ಪ್ರತಿಕೂಲ ಸ್ವಾಧೀನದ ಸಿದ್ಧಾಂತದಡಿ ಆ ಆಸ್ತಿಯ ಮೇಲೆ ತಮ್ಮ ಹಕ್ಕು ಸ್ಥಾಪಿಸಿದ್ದರು. ಆದರೆ, ಜ್ಯೋತಿ ಶರ್ಮಾ ಅವರು ಆಸ್ತಿಯನ್ನು ತೆರವುಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಮೊಕದ್ದಮೆ ಕೂಡಾ ಹೂಡಿದ್ದರು.
ಮತ್ತಷ್ಟು ಓದಿ: ಬೆಂಗಳೂರು: ಒಂದು ತಿಂಗಳ ವಾಟರ್ ಬಿಲ್ ಇಷ್ಟೊಂದಾ? ರೊಚ್ಚಿಗೆದ್ದ ಬಾಡಿಗೆದಾರ, ಪೋಸ್ಟ್ ವೈರಲ್
ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, ಏಳು ದಶಕಗಳಷ್ಟು ಹಳೆಯದಾದ (1953 ರ ಹಿಂದಿನ) ಭೂಮಾಲೀಕ-ಬಾಡಿಗೆದಾರರ ವಿವಾದವನ್ನು ಇತ್ಯರ್ಥಪಡಿಸುತ್ತಾ ಈ ತೀರ್ಪು ನೀಡಿತು. ಸುಪ್ರೀಂ ಕೋರ್ಟ್ ಈ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿತು. ಸುಪ್ರೀಂ ಕೋರ್ಟ್‌ನ ಈ ತೀರ್ಪು ಆಸ್ತಿ ಮಾಲೀಕರಿಗೆ ದೊಡ್ಡ ಗೆಲುವು ಎಂದೇ ಹೇಳಬಹುದು. ಬಾಡಿಗೆದಾರರು ಎಂದಿಗೂ, ಯಾವ ಕಾರಣಕ್ಕೂ, ಎಷ್ಟೇ ವರ್ಷಗಳ ಕಾಲ ವಾಸಿಸಿದರೂ ಮನೆಯ ಮಾಲೀಕತ್ವವನ್ನು ಪಡೆಯಲು ಸಾಧ್ಯವಿಲ್ಲ ಎಂಬುದು ಈ ತೀರ್ಪಿನ ಮೂಲ ಸಂದೇಶವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ