Delhi Mayor Polls ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುವಂತಿಲ್ಲ: ಸುಪ್ರೀಂಕೋರ್ಟ್

|

Updated on: Feb 17, 2023 | 5:53 PM

ನಾಮನಿರ್ದೇಶಿತ ಸದಸ್ಯರಿಗೆ ಮತ ಚಲಾಯಿಸಲು ಅವಕಾಶ ನೀಡಬಾರದು ಎಂದು ಆಮ್ ಆದ್ಮಿ ಪಕ್ಷ ಪಟ್ಟು ಹಿಡಿದಿದ್ದು, ಎಎಪಿ ಮತ್ತು ಬಿಜೆಪಿ ಸದಸ್ಯರ ಜಗಳದಿಂದಾಗಿ  ಈ ಹಿಂದೆ ಮೂರು ಸಂದರ್ಭಗಳಲ್ಲಿ ಈ ಸ್ಥಾನಕ್ಕೆ ಚುನಾವಣೆ ವಿಳಂಬವಾಗಿತ್ತು.

Delhi Mayor Polls ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುವಂತಿಲ್ಲ: ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್​
Follow us on

ದೆಹಲಿ ಮೇಯರ್ ಚುನಾವಣೆಯಲ್ಲಿ (Delhi Mayoral Polls) ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುವಂತಿಲ್ಲ ಎಂದು  ಸುಪ್ರೀಂಕೋರ್ಟ್ (Supreme Court)  ಹೇಳಿದ್ದು, 24 ಗಂಟೆಗಳಲ್ಲಿ ಚುನಾವಣೆಗೆ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ನಾಮನಿರ್ದೇಶಿತ ಸದಸ್ಯರಿಗೆ ಮತ ಚಲಾಯಿಸಲು ಅವಕಾಶ ನೀಡಬಾರದು ಎಂದು ಆಮ್ ಆದ್ಮಿ ಪಕ್ಷ (AAP) ಪಟ್ಟು ಹಿಡಿದಿದ್ದು, ಎಎಪಿ ಮತ್ತು ಬಿಜೆಪಿ ಸದಸ್ಯರ ಜಗಳದಿಂದಾಗಿ  ಈ ಹಿಂದೆ ಮೂರು ಸಂದರ್ಭಗಳಲ್ಲಿ ಈ ಸ್ಥಾನಕ್ಕೆ ಚುನಾವಣೆ ವಿಳಂಬವಾಗಿತ್ತು.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ದೆಹಲಿ ಮೇಯರ್ ಆಯ್ಕೆಯನ್ನು ಮೊದಲ ಎಂಸಿಡಿ ಸಭೆಯಲ್ಲಿ ನಡೆಸಬೇಕು ಎಂದು ನಿರ್ದೇಶಿಸಿದೆ. ಒಮ್ಮೆ ಚುನಾಯಿತರಾದ ಮೇಯರ್ ಅವರು ಉಪಮೇಯರ್ ಚುನಾವಣೆಯ ಅಧ್ಯಕ್ಷತೆ ವಹಿಸುತ್ತಾರೆ. ಈ ಆದೇಶ ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. “ಎರಡೂವರೆ ತಿಂಗಳ ನಂತರ ದೆಹಲಿಗೆ ಈಗ ಮೇಯರ್ ಸಿಗುತ್ತಾರೆ. ಎಲ್‌ಜಿ ಮತ್ತು ಬಿಜೆಪಿ ಒಟ್ಟಾಗಿ ದೆಹಲಿಯಲ್ಲಿ ಹೇಗೆ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಆದೇಶಗಳನ್ನು ಜಾರಿಗೊಳಿಸುತ್ತಿವೆ ಎಂಬುದು ಸಾಬೀತಾಗಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.


ದೆಹಲಿ ಮೇಯರ್ ಚುನಾವಣೆಯ ಕುರಿತು ಸುಪ್ರೀಂ ಹೇಳಿದ್ದು

ದೆಹಲಿ ಮೇಯರ್ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆಪ್ ಮತ್ತು ಬಿಜೆಪಿ ಸದಸ್ಯರೊಂದಿಗೆ ಸದನದಲ್ಲಿ ಗದ್ದಲದಿಂದಾಗಿ ಮೂರು ಬಾರಿ ಚುನಾವಣೆ ವಿಳಂಬವಾಗಿದೆ. ಅಂದಹಾಗೆ ಮೇಯರ್ ಚುನಾವಣೆ ಬಗ್ಗೆ ನ್ಯಾಯಾಲಯ ಹೇಳಿದ್ದು ಏನು?

ಇದನ್ನೂ ಓದಿ:ರೈಸಿನಾ ಸಂವಾದ ಪ್ರಚಾರ ವಿಡಿಯೊ ಬಗ್ಗೆ ಅಸಮಾಧಾನ; ಭಾರತ ಭೇಟಿ ರದ್ದುಗೊಳಿಸಿದ ಇರಾನ್‌ನ ವಿದೇಶಾಂಗ ಸಚಿವ

“ನಾವು ಕಕ್ಷಿದಾರರ ವಕೀಲರನ್ನು ಕೇಳಿದ್ದೇವೆ. ನಗರಸಭೆಯ ಪರವಾಗಿ ಸಲ್ಲಿಕೆಯನ್ನು ಸ್ವೀಕರಿಸಲು ನಮಗೆ ಸಾಧ್ಯವಾಗುತ್ತಿಲ್ಲ. ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂಬ ವಿಷಯದಲ್ಲಿ ಸಂವಿಧಾನವು ನಿರ್ಬಂಧವನ್ನು ವಿಧಿಸಿದೆ. ನಾಮನಿರ್ದೇಶಿತ ಸದಸ್ಯರ ಮೇಲೆ ನಿಷೇಧ ಮತದಾನದ ಹಕ್ಕನ್ನು ಚಲಾಯಿಸುವುದು ಮೊದಲ ಸಭೆಗೆ ಅನ್ವಯಿಸುತ್ತದೆ.

ಮೇಯರ್ ಚುನಾವಣೆ ಮತ್ತು ಎಂಸಿಡಿಯ ಮೊದಲ ಸಭೆಯನ್ನು 24 ಗಂಟೆಗಳ ಒಳಗೆ ಹೊರಡಿಸಲಾಗುವುದು. ಮೇಯರ್, ಉಪಮೇಯರ್ ಮತ್ತು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಡೆಯುವ ದಿನಾಂಕವನ್ನು ನೋಟಿಸ್ ನಿಗದಿಪಡಿಸಬೇಕು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Fri, 17 February 23