AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಸಿನಾ ಸಂವಾದ ಪ್ರಚಾರ ವಿಡಿಯೊ ಬಗ್ಗೆ ಅಸಮಾಧಾನ; ಭಾರತ ಭೇಟಿ ರದ್ದುಗೊಳಿಸಿದ ಇರಾನ್‌ನ ವಿದೇಶಾಂಗ ಸಚಿವ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಚಿತ್ರದೊಂದಿಗೆ ಇರಾನ್ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ಶಾಟ್ ಅನ್ನು ಒಳಗೊಂಡಿರುವ ರೈಸಿನಾ ಡೈಲಾಗ್‌ನ ಪ್ರಚಾರದ ವೀಡಿಯೊದ ಬಗ್ಗೆ ಟೆಹ್ರಾನ್ ಅಸಮಾಧಾನಗೊಂಡಿದೆ ಎಂದು ಎಕ್ಸ್‌ಪ್ರೆಸ್ ವರದಿ ಮಾಡಿದೆ.

ರೈಸಿನಾ ಸಂವಾದ ಪ್ರಚಾರ ವಿಡಿಯೊ ಬಗ್ಗೆ ಅಸಮಾಧಾನ; ಭಾರತ ಭೇಟಿ ರದ್ದುಗೊಳಿಸಿದ ಇರಾನ್‌ನ ವಿದೇಶಾಂಗ ಸಚಿವ
ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್
ರಶ್ಮಿ ಕಲ್ಲಕಟ್ಟ
|

Updated on:Feb 17, 2023 | 4:34 PM

Share

ದೆಹಲಿ: ಇರಾನ್‌ನ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ (Hossein Amir-Abdollahian) ಭಾರತ ಭೇಟಿ ರದ್ದು ಮಾಡಿದ್ದಾರೆ. ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಇರಾನ್ (Iran) ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುತ್ತಿರುವ ವಿಡಿಯೊ ನೋಡಿದ ಮೇಲೆ ಅವರು ಭಾರತಕ್ಕೆ ಭೇಟಿ ನೀಡುವುದನ್ನು ರದ್ದುಗೊಳಿಸಿದ್ದಾರೆ ಎಂದು ವರದಿಯಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಆಯೋಜಿಸಿದ್ದ ರೈಸಿನಾ ಸಂವಾದದಲ್ಲಿ (Raisina Dialogue) ಭಾಗವಹಿಸಲು ಇರಾನ್ ವಿದೇಶಾಂಗ ಸಚಿವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಬೇಕಿತ್ತು. ತಮ್ಮ ಸಚಿವರು ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಇರಾನ್ ಸಂಘಟಕರಿಗೆ ತಿಳಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಶುಕ್ರವಾರ ವರದಿ ಮಾಡಿದೆ.

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಚಿತ್ರದೊಂದಿಗೆ ಇರಾನ್ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ಶಾಟ್ ಅನ್ನು ಒಳಗೊಂಡಿರುವ ರೈಸಿನಾ ಡೈಲಾಗ್‌ನ ಪ್ರಚಾರದ ವೀಡಿಯೊದ ಬಗ್ಗೆ ಟೆಹ್ರಾನ್ ಅಸಮಾಧಾನಗೊಂಡಿದೆ ಎಂದು ಎಕ್ಸ್‌ಪ್ರೆಸ್ ವರದಿ ಮಾಡಿದೆ. ರೈಸಿನಾ ಡೈಲಾಗ್‌ 2023 ಆವೃತ್ತಿಯನ್ನು ಘೋಷಿಸಲು ಸುಮಾರು ಒಂದು ತಿಂಗಳ ಹಿಂದೆ ವೀಡಿಯೊವನ್ನು ಹಾಕಲಾಗಿದೆ.

ಇದನ್ನೂ ಓದಿ:ಫ್ಲೋರಿಡಾದ ಜಿಮ್​​ನಲ್ಲಿ ದಾಳಿ ಮಾಡಲು ಬಂದವನಿಗೆ ಬುದ್ಧಿ ಕಲಿಸಿದ ಫಿಟ್​ನೆಸ್ ಮಾಡೆಲ್ ;ವಿಡಿಯೊ ನೋಡಿ

ಇರಾನ್ ರಾಯಭಾರ ಕಚೇರಿಯು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ORF) ಮತ್ತು ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದ್ದು ಪ್ರತಿಭಟನಾಕಾರರ ಜೊತೆಗೆ ಅವರ ಅಧ್ಯಕ್ಷರ ಚಿತ್ರವನ್ನು ವಿರೋಧಿಸಿತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಮೂಲಗಳನ್ನು ಉಲ್ಲೇಖಿಸಿದೆ. ಅವರು ವಿಡಿಯೊದ ಆ ಭಾಗವನ್ನು ಅಳಿಸಲು ಸಂಘಟಕರನ್ನು ಕೇಳಿದ್ದರೂ , ಅದು ಆಗಲಿಲ್ಲ ಎಂದು ಅವರು ಹೇಳಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಇರಾನ್‌ನಲ್ಲಿ ಯುವತಿ ಮಹ್ಸಾ ಅಮಿನಿ ಹೆಡ್ ಸ್ಕಾರ್ಫ್ ಧರಿಸಿದ್ದಕ್ಕಾಗಿ “ಅನುಚಿತ ಉಡುಗೆ” ಧರಿಸಿದ್ದಾರೆ ಎಂದು ಬಂಧಿಸಲ್ಪಟ್ಟ ನಂತರ ಬಂಧನದಲ್ಲಿ ಸಾವನ್ನಪ್ಪಿದ ನಂತರ ಪ್ರತಿಭಟನೆಗಳು ಭುಗಿಲೆದ್ದವು. ಕಸ್ಟಡಿಯಲ್ಲಿಯೇ ಅಮಿನಿ ಸಾವನ್ನಪ್ಪಿದ್ದಾಳೆ ಎಂಬ ಆರೋಪವನ್ನು ಇರಾನ್ ನಿರಾಕರಿಸಿತು ಮತ್ತು ಅನಾರೋಗ್ಯದಿಂದ ಆಕೆಯ ಸಾವು ಸಂಭವಿಸಿದೆ ಎಂದು ಹೇಳಿಕೊಂಡಿದೆ.

ಪ್ರತಿಭಟನೆಗಳ ಬಗ್ಗೆ ಭಾರತ ಮೌನವಾಗಿದೆ. ನವೆಂಬರ್‌ನಲ್ಲಿ, ಇರಾನ್‌ನಲ್ಲಿ ಆಪಾದಿತ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಸತ್ಯಶೋಧನಾ ಕಾರ್ಯಾಚರಣೆಯನ್ನು ಸ್ಥಾಪಿಸಲು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ಅಂಗೀಕರಿಸಿದ ನಿರ್ಣಯಕ್ಕೆ ಗೈರುಹಾಜರಾದ ದೇಶಗಳಲ್ಲಿ ಭಾರತವೂ ಸೇರಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Fri, 17 February 23