ಹೆಣ್ಣುಮಕ್ಕಳಿಗೆ ‘ಲೈಂಗಿಕ ಬಯಕೆ ನಿಯಂತ್ರಣಕ್ಕೆ’ ಸಲಹೆ ನೀಡಿದ ಕಲ್ಕತ್ತಾ ಹೈಕೋರ್ಟ್​​ಗೆ ಸುಪ್ರೀಂ ತರಾಟೆ

|

Updated on: Dec 08, 2023 | 5:29 PM

ಪ್ರತಿಯೊಬ್ಬ ಹೆಣ್ಣು ಲೈಂಗಿಕ ಬಯಕೆಯನ್ನು ನಿಯಂತ್ರಿಸಬೇಕು, ಏಕೆಂದರೆ ಅವಳು ಕೇವಲ ಎರಡು ನಿಮಿಷಗಳ ಲೈಂಗಿಕ ಆನಂದವನ್ನು ಅನುಭವಿಸಿದಾಗ ಸಮಾಜದ ದೃಷ್ಟಿಯಲ್ಲಿ ಸೋಲುವವಳು ಅವಳೇ. ಹೆಣ್ಣುಮಕ್ಕಳು ತಮ್ಮ ಘನತೆ ಮತ್ತು ಸ್ವಾಭಿಮಾನವನ್ನು ರಕ್ಷಿಸಿಕೊಳ್ಳಬೇಕು ಎಂದು ಕಲ್ಕತ್ತಾ ಹೈಕೋರ್ಟ್ ಹೇಳಿದ್ದು, ಸುಪ್ರೀಂಕೋರ್ಟ್ ಈ ಅಭಿಪ್ರಾಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಹೆಣ್ಣುಮಕ್ಕಳಿಗೆ ಲೈಂಗಿಕ ಬಯಕೆ ನಿಯಂತ್ರಣಕ್ಕೆ ಸಲಹೆ ನೀಡಿದ ಕಲ್ಕತ್ತಾ ಹೈಕೋರ್ಟ್​​ಗೆ ಸುಪ್ರೀಂ ತರಾಟೆ
ಸುಪ್ರೀಂಕೋರ್ಟ್
Follow us on

ದೆಹಲಿ ಡಿಸೆಂಬರ್ 08: ಯುವತಿಯರಿಗೆ ಲೈಂಗಿಕ ಬಯಕೆ ನಿಯಂತ್ರಿಸಲು ಸಲಹೆ ನೀಡುವ ಕಲ್ಕತ್ತಾ ಹೈಕೋರ್ಟ್‌ನ (Calcutta High Court)ಇತ್ತೀಚಿನ ಅವಲೋಕನಗಳನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್ (Supreme Court) ಇದು “ಆಕ್ಷೇಪಾರ್ಹ ಮತ್ತು ಅನಗತ್ಯ” ಎಂದು ಹೇಳಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (sexual assault case) ಹೈಕೋರ್ಟ್‌ನ ತೀರ್ಪಿನ ಭಾಗವಾಗಿರುವ ಅವಲೋಕನಗಳನ್ನು ಟೀಕಿಸಿದ ಸುಪ್ರೀಂಕೋರ್ಟ್, ವೈಯಕ್ತಿಕ ಅಭಿಪ್ರಾಯಗಳನ್ನು ಅಥವಾ ಬೋಧನೆಗಳನ್ನು ವ್ಯಕ್ತಪಡಿಸುವುದನ್ನು ತಡೆಯಲು ನ್ಯಾಯಾಧೀಶರನ್ನು ಕೇಳಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿಥಾಲ್ ಅವರ ಪೀಠವು ಹೇಳಿಕೆಗಳು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಹದಿಹರೆಯದವರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಮೊದಲನೆಯದಾಗಿ ನ್ಯಾಯಾಧೀಶರು ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ಅಥವಾ ಬೋಧಿಸುವುದನ್ನು ನಿರೀಕ್ಷಿಸುವುದಿಲ್ಲ ಎಂದು ನಾವು ಭಾವಿಸುತ್ತೇವ ಎಂದು ಪೀಠವು ಪಶ್ಚಿಮ ಬಂಗಾಳ ಸರ್ಕಾರ ಮತ್ತು ಪ್ರಕರಣದ ಇತರ ಕಕ್ಷಿದಾರರಿಗೆ ನೋಟಿಸ್ ಜಾರಿ ಮಾಡಿದೆ. ಪ್ರಕರಣದಲ್ಲಿ ಸಹಾಯ ಮಾಡುವಂತೆ ಹಿರಿಯ ವಕೀಲೆ ಮಾಧವಿ ದಿವಾನ್ ಅವರನ್ನು ನ್ಯಾಯಾಲಯ ಕೇಳಿದೆ.

ಅಕ್ಟೋಬರ್ 18, 2023 ರಂದು ಕಲ್ಕತ್ತಾ ಹೈಕೋರ್ಟ್‌ನ ಅವಲೋಕನಗಳನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ತೆಗೆದುಕೊಂಡಿತು.
ಆದೇಶದ ಪ್ರಕಾರ, ಸಿಜೆಐ ಡಿವೈ ಚಂದ್ರಚೂಡ್ ಅವರ ಆದೇಶದ ಮೇರೆಗೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಯಿತು. ನಂತರ ಈ ವಿಷಯವನ್ನು ಪೀಠಕ್ಕೆ ವಹಿಸಲಾಯಿತು.

ಹೈಕೋರ್ಟಿನ ವಿಭಾಗೀಯ ಪೀಠ, ಪೋಕ್ಸೋ ಕಾಯ್ದೆಯ ಪ್ರಕರಣದಲ್ಲಿ ಆದೇಶವನ್ನು ಪ್ರಕಟಿಸುವಾಗ, ಹದಿಹರೆಯದವರು ವಿರುದ್ಧ ಲಿಂಗದವರ ಸಹವಾಸವನ್ನು ಹುಡುಕುವುದು ಸಹಜ ಆದರೆ ಅವರು ಯಾವುದೇ ಬದ್ಧತೆ ಮತ್ತು ಸಮರ್ಪಣೆಯಿಲ್ಲದೆ ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ ಅಲ್ಲ.

ಇದನ್ನೂ ಓದಿ: ವಿಚಾರಣೆಗೂ ಮುನ್ನ ಜೈಲಿನಲ್ಲಿ ದೀರ್ಘಕಾಲ ಇರಿಸಲು ಸಾಧ್ಯವಿಲ್ಲ: ಮದ್ಯ ನೀತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್

“ಪ್ರತಿಯೊಬ್ಬ ಹೆಣ್ಣು ಲೈಂಗಿಕ ಬಯಕೆಯನ್ನು ನಿಯಂತ್ರಿಸಬೇಕು, ಏಕೆಂದರೆ ಅವಳು ಕೇವಲ ಎರಡು ನಿಮಿಷಗಳ ಲೈಂಗಿಕ ಆನಂದವನ್ನು ಅನುಭವಿಸಿದಾಗ ಸಮಾಜದ ದೃಷ್ಟಿಯಲ್ಲಿ ಸೋಲುವವಳು ಅವಳೇ. ಹೆಣ್ಣುಮಕ್ಕಳು ತಮ್ಮ ಘನತೆ ಮತ್ತು ಸ್ವಾಭಿಮಾನವನ್ನು ರಕ್ಷಿಸಿಕೊಳ್ಳಬೇಕು. ಹದಿಹರೆಯದ ಗಂಡು ಮಕ್ಕಳು “ಒಬ್ಬ ಯುವತಿ ಅಥವಾ ಮಹಿಳೆಯ ಮೇಲೆ ಹೇಳಿದ ಕರ್ತವ್ಯಗಳನ್ನು ಗೌರವಿಸಬೇಕು. ಅವನು ಅವಳ ಘನತೆ ಮತ್ತು ಗೌಪ್ಯತೆ ಮತ್ತು ಅವಳ ದೈಹಿಕ ಹಕ್ಕನ್ನು ಗೌರವಿಸಲು ಕಲಿಯಬೇಕು ಎಂದು ಹೇಳಿದೆ.

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯ ವಿರುದ್ಧ ಹದಿಹರೆಯದವರ ಕೋರಿಕೆಯ ವಿಚಾರಣೆಯ ಸಂದರ್ಭದಲ್ಲಿ ಕಲ್ಕತ್ತಾ ಹೈಕೋರ್ಟ್ ಈ ರೀತಿ ಹೇಳಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ