COVID-19: ಭಾರತದಲ್ಲಿ 24 ಗಂಟೆಗಳಲ್ಲಿ 180 ಕೋವಿಡ್ ಪತ್ತೆ
ಕೊರೊನಾ ಮುಗಿಯದ ಅಧ್ಯಾಯ ಎಂಬಂತಿದೆ. ಕೇಂದ್ರ ಆರೋಗ್ಯ ಇಲಾಖೆ ಒಂದು ಶಾಕಿಂಗ್ ವರದಿಯನ್ನು ನೀಡಿದೆ. ಇಂದು ಕೇಂದ್ರ ಆರೋಗ್ಯ ಸಚಿವಾಲಯ ಕೊರೊನಾದ ಬಗ್ಗೆ ಹೊಸ ಅಪ್ಡೇಟ್ನ್ನು ನೀಡಿದೆ. ಸಚಿವಾಲಯ ನೀಡಿದ ಅಂಕಿಅಂಶದ ಪ್ರಕಾರ 24 ಗಂಟೆಗಳಲ್ಲಿ 180 ಕೊರೊನಾ ಪ್ರಕರಣ ಪತ್ತೆಯಾಗಿದೆ. ಇದೀಗ ಕೊರೊನಾ ಸಕ್ರಿಯ ಪ್ರಕರಣದ ಸಂಖ್ಯೆ 744ಕ್ಕೆ ಏರಿಕೆಯಾಗಿದೆ.

ಸಾವಿನ ಸಂಖ್ಯೆ 5,33,306 ದಾಖಲಾಗಿದೆ ಎಂದು ಇಂದು ಬೆಳಿಗ್ಗೆ 8.00 ಗಂಟೆಗೆ ಆರೋಗ್ಯ ಸಚಿವಾಲಯ ನೀಡಿದ ಡೇಟಾದಲ್ಲಿ ತಿಳಿಸಲಾಗಿದೆ. ದೇಶದಲ್ಲಿ ಕೋವಿಡ್ ಪ್ರಕರಣಗಳು ಸಂಖ್ಯೆ 4.50 ಕೋಟಿ ಎಂದು ಹೇಳಲಾಗಿದೆ.
ಆರೋಗ್ಯ ಸಚಿವಾಲಯದ ವೆಬ್ ಸೈಟ್ ಪ್ರಕಾರ, ಕೊರೊನಾದಿಂದ ಚೇತರಿಕೆಗೊಂಡವರ ಸಂಖ್ಯೆ 4,44,68,619ಕ್ಕೆ ಏರಿಕೆಯಾಗಿದೆ. ಹಾಗೂ ರಾಷ್ಟ್ರದಲ್ಲಿ ಚೇತರಿಕೆ ಪ್ರಮಾಣ 98.81 ಪ್ರತಿಶತದಷ್ಟಿದೆ ಎಂದು ಹೇಳಲಾಗಿದೆ. ಸಾವಿನ ಪ್ರಮಾಣ ಶೇಕಡಾ 1.19ರಷ್ಟಿದೆ.
ಇದನ್ನೂ ಓದಿ: ಆರ್ಕ್ಟುರಸ್ ಎಂದರೇನು? ರೋಗ ಉಲ್ಬಣಕ್ಕೆ ಹೇಗೆ ಕಾರಣವಾಗುತ್ತಿದೆ? ರೋಗಲಕ್ಷಣಗಳೇನು? ತಡೆಗಟ್ಟುವಿಕೆ ಹೇಗೆ? ಇಲ್ಲಿದೆ ಮಾಹಿತಿ
ಸಚಿವಾಲಯದ ವೆಬ್ಸೈಟ್ ಪ್ರಕಾರ ಒಟ್ಟಾರೆಯಾಗಿ ದೇಶದಲ್ಲಿ 220.67 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ