COVID-19 New Variant: ಆರ್ಕ್ಟುರಸ್ ಎಂದರೇನು? ರೋಗ ಉಲ್ಬಣಕ್ಕೆ ಹೇಗೆ ಕಾರಣವಾಗುತ್ತಿದೆ? ರೋಗಲಕ್ಷಣಗಳೇನು? ತಡೆಗಟ್ಟುವಿಕೆ ಹೇಗೆ? ಇಲ್ಲಿದೆ ಮಾಹಿತಿ

ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ. ದೆಹಲಿಯಲ್ಲಿ ಬುಧವಾರ 1,757 ಹೊಸ ಕೋವಿಡ್ -19 ಪ್ರಕರಣಗಳೊಂದಿಗೆ ಆರು ಸಾವು ದಾಖಲಾಗಿದ್ದು, ಪಾಸಿಟಿವಿಟಿ ದರ ಶೇ 28.63 ರಷ್ಟಿದೆ.

COVID-19 New Variant: ಆರ್ಕ್ಟುರಸ್ ಎಂದರೇನು? ರೋಗ ಉಲ್ಬಣಕ್ಕೆ ಹೇಗೆ ಕಾರಣವಾಗುತ್ತಿದೆ? ರೋಗಲಕ್ಷಣಗಳೇನು? ತಡೆಗಟ್ಟುವಿಕೆ ಹೇಗೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 20, 2023 | 3:43 PM

ಭಾರತದಲ್ಲಿ ಕೋವಿಡ್-19 (COVID-19) ಹೊಸ ರೂಪಾಂತರದ ಪ್ರಕರಣಗಳು ಹೆಚ್ಚುತ್ತಿವೆ. ದೆಹಲಿಯಲ್ಲಿ ಬುಧವಾರ 1,757 ಹೊಸ ಕೋವಿಡ್ -19  ಪ್ರಕರಣಗಳೊಂದಿಗೆ ಆರು ಸಾವುಗಳು ದಾಖಲಾಗಿದ್ದು, ಪಾಸಿಟಿವಿಟಿ ದರ ಶೇ. 28.63 ರಷ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇತ್ತೀಚೆಗೆ ಬಹುತೇಕ ಎಲ್ಲಾ ದೇಶಗಳು ನಿರ್ಬಂಧಗಳನ್ನು ತೆಗೆದುಹಾಕಿದ್ದು ಜನಜೀವನ ವಾಸ್ತವಕ್ಕೆ ಮರಳುತ್ತಿದೆ ಎನ್ನುವಾಗಲೇ ಮತ್ತೊಂದು ಕೋವಿಡ್ -19 ರೂಪಾಂತರಿತ ಮುನ್ನೆಲೆಗೆ ಬಂದಿದೆ.

ಈ ಬಾರಿ ಇದು ಓಮಿರ್ಕ್ರಾನ್, ಎಕ್ಸ್ಬಿಬಿ.1.16 ನ ರೂಪಾಂತರದಿಂದ ಹುಟ್ಟಿಕೊಂಡಿದೆ. ಇದನ್ನು ಆರ್ಕ್ಟುರಸ್ ಎಂದು ಕರೆಯಲಾಗುತ್ತದೆ. ಈ ರೂಪಾಂತರದಿಂದ ಸಾವುನೋವು ಹೆಚ್ಚಾಗುತ್ತಿದ್ದು, ದೆಹಲಿಯಲ್ಲಿ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ 26,578 ಕ್ಕೆ ಏರಿದೆ. ಕೋವಿಡ್ -19 ಸಾಂಕ್ರಾಮಿಕ ರೋಗವು ಜಗತ್ತಿಗೆ ಬಂದಾಗಿನಿಂದ, ಅದಕ್ಕೆ ಅಂತ್ಯವಿಲ್ಲ ಎಂಬಂತೆ ಮಾಡಿಬಿಟ್ಟಿದೆ. ಕೆಲವು ತಜ್ಞರು ಈ ಪ್ರಕರಣ ಸಾಮಾನ್ಯವಾಗಿದ್ದು ಜ್ವರದಂತೆ ಸರಳವಾಗುವತ್ತ ಸಾಗುತ್ತಿದೆ ಎಂದು ನಂಬಿದ್ದಾರೆ.

ಕೋವಿಡ್ ಉಲ್ಬಣಕ್ಕೆ ಆರ್ಕ್ಟುರಸ್ ಹೇಗೆ ಕಾರಣವಾಗುತ್ತಿದೆ?

ಇಲ್ಲಿಯವರೆಗೆ, ಈ ರೂಪಾಂತರವು ಹೆಚ್ಚಿನ ಪ್ರಮಾಣದಲ್ಲಿ ಪ್ರಸರಣವಾಗುತ್ತಾ ಹೋಗಿದೆ ಎಂದು ವರದಿಯಾಗಿದ್ದು ಅಲ್ಲದೆ ಹದಿಹರೆಯದವರು ಮತ್ತು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಆರ್ಕ್ಟುರಸ್ ಇತರ ಎರಡು ಕೋವಿಡ್ ರೂಪಾಂತರಗಳ ಸಂಯೋಜನೆಯಾಗಿದ್ದು, ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡಬಲ್ಲದು. ರೋಗನಿರೋಧಕ ಶಕ್ತಿ ಜಾಸ್ತಿ ಇರುವವರಿಗೆ ಹೆಚ್ಚಿನ ರೋಗಲಕ್ಷಣ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ:COVID-19 in Karnataka: ರಾಜ್ಯದಲ್ಲಿ ಮತ್ತೆ ಕೋವಿಡ್ ಭೀತಿ; ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ

ಹೊಸ ಕೋವಿಡ್ ರೂಪಾಂತರದ ರೋಗಲಕ್ಷಣಗಳು:

ಇಲ್ಲಿಯವರೆಗೆ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಈ ಸುಪ್ತ ರೂಪಾಂತರದ ಯಾವುದೇ ತೀವ್ರ ರೋಗಲಕ್ಷಣಗಳು ಕಂಡುಬಂದಿಲ್ಲ. ಇತರ ಕೋವಿಡ್-19 ರೂಪಾಂತರಗಳಂತೆ ಇದು ಕೆಲವು ಸಾಮಾನ್ಯ ಲಕ್ಷಣಗಳನ್ನು ಹೊಂದಿದೆ.

-ದೀರ್ಘಕಾಲದ ಜ್ವರ

-ಶೀತ

-ಉಸಿರಾಡಲು ಆಗದಂತೆ ಮೂಗಿನ ಹೊಳ್ಳೆ ಮುಚ್ಚಿಕೊಳ್ಳುವುದು

-ಗಂಟಲು ಕೆರತ

-ಕಂಜಂಕ್ಟಿವಿಟಿಸ್

-ತಲೆನೋವು

-ದೇಹದ ಆಯಾಸ

-ಸ್ನಾಯು ನೋವು

-ಪಿಂಕ್ ಐ ಅಥವಾ ಕಾಂಜುಕ್ಟಿವಿಟಿಗಳು

ಕೋವಿಡ್-19 ನೊಂದಿಗೆ ಹೇಗೆ ಸಂಬಂಧಿಸಿವೆ ಎಂಬುದರ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.

ಮುನ್ನೆಚ್ಚರಿಕೆಗಳು:

-ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತೆ ಮಾಸ್ಕ್ ಧರಿಸಲು ಪ್ರಾರಂಭಿಸಿ.

-ಜನದಟ್ಟಣೆಯ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಿ.

-ಹ್ಯಾಂಡ್ ಸ್ಯಾನಿಟೈಸರ್ ಅನ್ನು ಯಾವಾಗಲೂ ಇರಿಸಿಕೊಳ್ಳಿ.

-ಕೈ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.

-ನೀವು ಇನ್ನೂ ಲಸಿಕೆ ಪಡೆಯದಿದ್ದರೆ, ಅಗತ್ಯವಾದ ಚುಚ್ಚುಮದ್ದುಗಳನ್ನು ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:43 pm, Thu, 20 April 23

Nithya Bhavishya: ನವರಾತ್ರಿಯ ಐದನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಐದನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ