AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೆ ಡಿಯೋಡರೆಂಟ್ ಬಳಸುವ ಅಭ್ಯಾಸ ಇದ್ರೆ ಮಿಸ್ ಮಾಡ್ದೆ ಈ ಸ್ಟೋರಿ ಓದಿ

ಇತ್ತೀಚಿನ ದಿನಗಳಲ್ಲಿ, ಅನೇಕರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಅದರಲ್ಲಿಯೂ ಸುಂದರವಾಗಿ ಕಾಣಲು ವಿವಿಧ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಅವುಗಳಲ್ಲಿ ಒಂದು ಡಿಯೋಡರೆಂಟ್. ನಿಮಗೆ ತಿಳಿದಿರುವಂತೆ ಇದು ಒಳ್ಳೆಯ ಪರಿಮಳವನ್ನು ಹರಡುತ್ತದೆ. ಸಾಮಾನ್ಯವಾಗಿ ಇವುಗಳನ್ನು ದೇಹದಿಂದ ಬರುವ ವಾಸನೆಯನ್ನು ಹಲವಾರು ಗಂಟೆಗಳ ಕಾಲ ತಡೆಯಲು ಬಳಸಲಾಗುತ್ತದೆ. ಆದರೆ ಇವುಗಳ ಬಳಕೆಯಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ ಇದು ಎಷ್ಟು ನಿಜ? ಸುಗಂಧ ದ್ರವ್ಯಗಳನ್ನು ಬಳಸುವುದರಿಂದ ನಿಜವಾಗಿಯೂ ಕ್ಯಾನ್ಸರ್ ಉಂಟಾಗುತ್ತದೆಯೇ ಎಂಬ ಅನುಮಾನ ಹಲವರಲ್ಲಿ ಮೂಡಬಹುದು. ಇಂತಹ ಪ್ರಶ್ನೆಗಳಿಗೆ ಉತ್ತರ ಈ ಸ್ಟೋರಿಯಲ್ಲಿದೆ.

ನಿಮಗೆ ಡಿಯೋಡರೆಂಟ್ ಬಳಸುವ ಅಭ್ಯಾಸ ಇದ್ರೆ ಮಿಸ್ ಮಾಡ್ದೆ ಈ ಸ್ಟೋರಿ ಓದಿ
Deodorant Cancer Risk
ಪ್ರೀತಿ ಭಟ್​, ಗುಣವಂತೆ
|

Updated on: Nov 15, 2025 | 10:40 AM

Share

ನಮ್ಮ ಮಧ್ಯೆ ಆರೋಗ್ಯಕ್ಕಿಂತಲೂ ಹೆಚ್ಚು ಸೌಂದರ್ಯದ ಬಗ್ಗೆ ಗಮನ ಹರಿಸುವವರಿದ್ದಾರೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಇಂತವರು ಹೆಚ್ಚಾಗಿ ಕಾಣಲು ಸಿಗುತ್ತಾರೆ. ಸುಂದರವಾಗಿ ಕಾಣಲು ವಿವಿಧ ರೀತಿಯ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಾರೆ. ಅವುಗಳಲ್ಲಿ ಒಂದು ಡಿಯೋಡರೆಂಟ್ (deodorant). ನಿಮಗೆ ತಿಳಿದಿರುವಂತೆ ಇದು ಒಳ್ಳೆಯ ಪರಿಮಳವನ್ನು ಹರಡುತ್ತದೆ. ಸಾಮಾನ್ಯವಾಗಿ ಇವುಗಳನ್ನು ದೇಹದಿಂದ ಬರುವ ವಾಸನೆಯನ್ನು ಹಲವಾರು ಗಂಟೆಗಳ ಕಾಲ ತಡೆಯಲು ಬಳಸಲಾಗುತ್ತದೆ. ಈ ಪರಿಮಳಯುಕ್ತ ಡಿಯೋಡರೆಂಟ್‌ಗಳನ್ನು ತಯಾರಿಸಲು ವಿವಿಧ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಆದರೂ ಕೂಡ ಇವುಗಳ ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲಿಯೂ ಇಂತಹ ಉತ್ಪನ್ನಗಳ ಬಳಕೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಾತ್ರವಲ್ಲ, ಕೆಲವು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಆದರೆ ಇದು ಎಷ್ಟು ನಿಜ? ಸುಗಂಧ ದ್ರವ್ಯಗಳನ್ನು ಬಳಸುವುದರಿಂದ ನಿಜವಾಗಿಯೂ ಕ್ಯಾನ್ಸರ್ (cancer) ಉಂಟಾಗುತ್ತದೆಯೇ ಎಂಬ ಅನುಮಾನ ಹಲವರಲ್ಲಿ ಮೂಡಬಹುದು. ಇಂತಹ ಪ್ರಶ್ನೆಗಳಿಗೆ ಉತ್ತರ ಈ ಸ್ಟೋರಿಯಲ್ಲಿದೆ.

ನಿರ್ದಿಷ್ಟವಾಗಿ ಹೇಳುವುದಾದರೆ, ಅಲ್ಯೂಮಿನಿಯಂ ಆಧಾರಿತ ಸಂಯುಕ್ತಗಳು ಮತ್ತು ಪ್ಯಾರಾಬೆನ್‌ಗಳನ್ನು ಹೊಂದಿರುವ ಸುಗಂಧ ದ್ರವ್ಯಗಳು ಈ ಅಪಾಯವನ್ನು ಹೆಚ್ಚಿಸುತ್ತವೆ ಎಂಬ ವಾದವಿದೆ. ಏಕೆಂದರೆ ಅಲ್ಯೂಮಿನಿಯಂ ಆಧಾರಿತ ಸಂಯುಕ್ತಗಳು ತಾತ್ಕಾಲಿಕವಾಗಿ ಬೆವರು ಗ್ರಂಥಿಗಳನ್ನು ನಿರ್ಬಂಧಿಸುತ್ತವೆ. ಕೆಲವು ಸಂಶೋಧಕರು ಆರ್ಮ್ಪಿಟ್‌ಗಳು ಮತ್ತು ಎದೆಗೆ ಸುಗಂಧ ದ್ರವ್ಯಗಳನ್ನು ಆಗಾಗ ಅನ್ವಯಿಸುವುದರಿಂದ ಸ್ತನ ಅಂಗಾಂಶದಲ್ಲಿನ ಹಾರ್ಮೋನ್ ಸಮತೋಲನಕ್ಕೆ ಅಡ್ಡಿಯಾಗಬಹುದು ಮತ್ತು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ನಂಬುತ್ತಾರೆ. ಇದಲ್ಲದೆ, ಪ್ಯಾರಾಬೆನ್‌ಗಳನ್ನು ಹೊಂದಿರುವ ಸುಗಂಧ ದ್ರವ್ಯಗಳು ದೇಹದ ಕೆಲವು ಜೀವಕೋಶಗಳಲ್ಲಿ ಈಸ್ಟ್ರೊಜೆನ್ ಹಾರ್ಮೋನ್ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಕಂಡುಬಂದಿದೆ.

ಡಿಯೋಡರೆಂಟ್ ಬಳಸುವುದರಿಂದ ಕ್ಯಾನ್ಸರ್ ಬರುತ್ತದೆಯೇ?

ಸುಗಂಧ ದ್ರವ್ಯಗಳನ್ನು ಬಳಸುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬ ಹೇಳಿಕೆ ಕೇವಲ ಹೇಳಿಕೆಯಷ್ಟೇ. ಅದಕ್ಕೆ ಯಾವುದೇ ಸೈದ್ಧಾಂತಿಕ ಆಧಾರವಿಲ್ಲ ಮತ್ತು ಅಂತಹ ಭಯಗಳು ಕಾಲ್ಪನಿಕ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಜೊತೆಗೆ ಸಂಶೋಧನೆ ಮತ್ತು ಅಧ್ಯಯನಗಳು ನಿಯಮಿತ ಡಿಯೋಡರೆಂಟ್ ಬಳಕೆಯನ್ನು ಸ್ತನ ಕ್ಯಾನ್ಸರ್ ಅಥವಾ ಯಾವುದೇ ರೀತಿಯ ಕ್ಯಾನ್ಸರ್‌ಗೆ ಸಂಪರ್ಕ ಹೊಂದಿದೆ ಎಂಬುದಕ್ಕೆ ಯಾವುದೇ ದೃಢವಾದ ಪುರಾವೆಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಅಂದರೆ ಈ ರೀತಿ ಜನರಲ್ಲಿ ಉಂಟಾಗಿರುವ ಭಯವನ್ನು ಸಾಬಿತುಪಡಿಸಲು ಯಾವುದೇ ಪುರಾವೆಗಳಿಲ್ಲ. ಡಿಯೋಡರೆಂಟ್ ಅನ್ನು ಪ್ರತಿದಿನ ಬಳಸುವುದು ಅಪಾಯಕಾರಿ ಅಲ್ಲ ಎಂಬುದು ತಜ್ಞರ ವಾದವಾಗಿದೆ. ಹಾಗಾಗಿ ದಿನನಿತ್ಯ ಬಳಸುವ ಡಿಯೋಡರೆಂಟ್ ಬಗ್ಗೆ ಅನಗತ್ಯವಾಗಿ ಚಿಂತಿಸುವ ಅಗತ್ಯವಿಲ್ಲ. ಆದರೆ ಯಾವಾಗಲೂ ಇಂತಹ ಉತ್ಪನ್ನಗಳನ್ನು ಖರೀದಿಸುವ ಮೊದಲು ಸುಗಂಧ ದ್ರವ್ಯಗಳಲ್ಲಿ ಯಾವ ಪದಾರ್ಥಗಳಿವೆ ಎಂಬುದನ್ನು ಪರಿಶೀಲಿಸುವುದು ಒಳ್ಳೆಯದು. ಅಲ್ಯೂಮಿನಿಯಂ- ಮುಕ್ತ ಮತ್ತು ಪ್ಯಾರಾಬೆನ್- ಮುಕ್ತ ಸುಗಂಧ ದ್ರವ್ಯಗಳನ್ನು ಆರಿಸುವುದರಿಂದ ಯಾವುದೇ ರೀತಿಯ ಅಪಾಯವಿರುವುದಿಲ್ಲ.

ಇದನ್ನೂ ಓದಿ: ಗೃಹ ಆರೋಗ್ಯದಡಿ ಸ್ಕ್ರೀನಿಂಗ್ ಮಾಡಿದಾಗ ಹೊರಬಿತ್ತು ಆಘಾತಕಾರಿ ಮಾಹಿತಿ: 2 ತಿಂಗಳಲ್ಲಿ 5 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ಪತ್ತೆ

ಕ್ಯಾನ್ಸರ್ ನಿಂದ ದೂರವಿರಲು ಇಲ್ಲಿದೆ ಸಲಹೆ:

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು, ಸಮತೋಲಿತ ಆಹಾರವನ್ನು ಸೇವಿಸುವುದು, ವ್ಯಾಯಾಮ ಮಾಡುವುದು ಮತ್ತು ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು ಒಳ್ಳೆಯದು. ನೈಸರ್ಗಿಕ, ರಾಸಾಯನಿಕ- ಮುಕ್ತ ಉತ್ಪನ್ನಗಳನ್ನು ಬಳಸುವುದು ಸುರಕ್ಷಿತವಾಗಿದೆ. ಅನೇಕ ನೈಸರ್ಗಿಕವಾಗಿ ತಯಾರಿಸಿದ ಸುಗಂಧ ದ್ರವ್ಯಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಅವುಗಳನ್ನು ಖರೀದಿಸಿ ಭಯವಿಲ್ಲದೆ ಬಳಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ