AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KPCC ಅಧ್ಯಕ್ಷರ ಬದಲಾವಣೆ ಬಗ್ಗೆ ಡಿಕೆ ಸುರೇಶ್ ಶಾಕಿಂಗ್ ಮಾತು!

KPCC ಅಧ್ಯಕ್ಷರ ಬದಲಾವಣೆ ಬಗ್ಗೆ ಡಿಕೆ ಸುರೇಶ್ ಶಾಕಿಂಗ್ ಮಾತು!

ಭಾವನಾ ಹೆಗಡೆ
|

Updated on: Nov 16, 2025 | 2:52 PM

Share

ಪಕ್ಷದ ಎಲ್ಲ ಹುದ್ದೆಗಳಿಗೂ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಡಿಕೆ ಸುರೇಶ್ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಕುರಿತ ಪ್ರಶ್ನೆಗೆ, ಡಿಕೆ ಶಿವಕುಮಾರ್ ಹೈಕಮಾಂಡ್ ಮಾತು ಕೇಳುತ್ತಾರೆ ಎಂದು ಸ್ಪಷ್ಟಪಡಿಸಿದರು. ಶಿವಕುಮಾರ್ ಅವರಿಗೆ ಪಿಸಿಸಿ ಹುದ್ದೆಯಲ್ಲಿ ಮುಂದುವರಿಯುವ ಆಸೆ ಇಲ್ಲ; ಪಕ್ಷ ಅವಕಾಶ ನೀಡಿದಷ್ಟು ದಿನ ಕೆಲಸ ಮಾಡುವುದಾಗಿ ಹಿಂದೆ ಹೇಳಿದ್ದರು.

ಬೆಂಗಳೂರು, ನವೆಂಬರ್ 16: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಮಾತನಾಡಿದ ಮಾಜಿ ಸಂಸದ ಡಿಕೆ ಸುರೇಶ್, ಪಕ್ಷದ ಹೈಕಮಾಂಡ್ ನಿರ್ಧಾರವೇ ಎಲ್ಲದಕ್ಕೂ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ, ಶಾಸಕರು, ಮಂತ್ರಿಮಂಡಲದ ಸದಸ್ಯರು ಹಾಗೂ ಡಿಕೆ ಶಿವಕುಮಾರ್ ಸೇರಿದಂತೆ ಪ್ರತಿಯೊಬ್ಬರಿಗೂ ಹೈಕಮಾಂಡ್ ನಿರ್ಧಾರವೇ ಅನ್ವಯಿಸುತ್ತದೆ. ಸಿಎಂ ಕುರ್ಚಿಗೆ ಹಿಂದೆ ಸ್ಪರ್ಧಿಸಿದ್ದವರು ಈಗ ಹಿಂದೆ ಸರಿದಿದ್ದಾರೆ. ಡಿಕೆ ಶಿವಕುಮಾರ್ ಅವರ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆ ಕುರಿತು ತನಗೆ ಯಾವುದೇ ಮಾಹಿತಿ ಇಲ್ಲ. ಸಚಿವ ಸಂಪುಟ ಪುನಾರಚನೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು, ಹೈಕಮಾಂಡ್ ಅಪ್ಪಣೆ ಪಡೆದು ಅವರು ಕಾರ್ಯನಿರ್ವಹಿಸುತ್ತಾರೆ. ಪಕ್ಷದ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಪಕ್ಷದ ಸಂಘಟನೆಗೆ ಅಗತ್ಯ ಸಲಹೆಗಳನ್ನು ಹೈಕಮಾಂಡ್‌ಗೆ ನೀಡುತ್ತಾರೆ ಎಂದು ಹೇಳಿದರು.

 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.