AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆರಿಗೆ ಕಟ್ಟದೆ ವಂಚನೆ: RTO ಅಧಿಕಾರಿಗಳಿಂದ 10ಕ್ಕೂ ಹೆಚ್ಚು ಐಷಾರಾಮಿ ಖಾಸಗಿ ಬಸ್​ಗಳು ಸೀಜ್​

ತೆರಿಗೆ ಕಟ್ಟದೆ ವಂಚನೆ: RTO ಅಧಿಕಾರಿಗಳಿಂದ 10ಕ್ಕೂ ಹೆಚ್ಚು ಐಷಾರಾಮಿ ಖಾಸಗಿ ಬಸ್​ಗಳು ಸೀಜ್​

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Nov 16, 2025 | 2:53 PM

Share

ಪರ್ಮಿಟ್ ಇಲ್ಲದೆ, ತೆರಿಗೆ ಕಟ್ಟದೆ ರಾಜ್ಯದಲ್ಲಿ ಸಂಚರಿಸುತ್ತಿದ್ದ ಐಷಾರಾಮಿ ಖಾಸಗಿ ಬಸ್​ಗಳಿಗೆ ಆರ್​​ಟಿಒ ಅಧಿಕಾರಿಗಳು ಶಾಕ್​ ಕೊಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರದ ಬಳಿ ನಡೆದ ಕಾರ್ಯಾಚರಣೆಯಲ್ಲಿ ಹತ್ತಕ್ಕೂ ಹೆಚ್ಚು ಬಸ್​​ಗಳನ್ನ ಸೀಜ್​ ಮಾಡಲಾಗಿದೆ. ನಾಗಾಲ್ಯಾಂಡ್ ಅರುಣಾಚಲ ಪ್ರದೇಶ ಸೇರಿ ವಿವಿಧ ರಾಜ್ಯಗಳ ನೋಂದಣಿ ಇರುವ ಬಸ್​ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಚಿಕ್ಕಬಳ್ಳಾಪುರ, ನವೆಂಬರ್​ 16: ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರದ ಬಳಿ ಕಾರ್ಯಾಚರಣೆ ನಡೆಸಿರುವ ಆರ್​ಟಿಒ ಅಧಿಕಾರಿಗಳು ಪರ್ಮಿಟ್ ಇಲ್ಲದೆ, ತೆರಿಗೆ ಕಟ್ಟದೆ ರಾಜ್ಯದಲ್ಲಿ ಸಂಚರಿಸುತ್ತಿದ್ದ 10ಕ್ಕೂ ಹೆಚ್ಚು ಐಷಾರಾಮಿ ಖಾಸಗಿ ಬಸ್​ಗಳನ್ನ ಸೀಜ್​ ಮಾಡಿದ್ದಾರೆ. ಹೈದರಾಬಾದ್​ ಸೇರಿದಂತೆ ಬೇರೆ ಬೇರೆ ಸ್ಥಳಗಳಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್​​ಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಲಾಗಿದೆ.  ನಾಗಾಲ್ಯಾಂಡ್ ಅರುಣಾಚಲ ಪ್ರದೇಶ ಸೇರಿ ವಿವಿಧ ರಾಜ್ಯಗಳ ನೋಂದಣಿ ಇರುವ ಬಸ್​ಗಳನ್ನು ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 16, 2025 02:45 PM