AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದ್ದಕ್ಕೆ ಸ್ಪಷ್ಟನೆ ನೀಡಿದ ರಾಜ್ ಬಿ. ಶೆಟ್ಟಿ

ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದ್ದಕ್ಕೆ ಸ್ಪಷ್ಟನೆ ನೀಡಿದ ರಾಜ್ ಬಿ. ಶೆಟ್ಟಿ

ಮದನ್​ ಕುಮಾರ್​
|

Updated on: Nov 16, 2025 | 11:43 AM

Share

‘ಸು ಫ್ರಮ್ ಸೋ’ ಸಿನಿಮಾ ಬಳಿಕ ರಾಜ್ ಬಿ. ಶೆಟ್ಟಿ ಅವರ ಜನಪ್ರಿಯತೆ ಹೆಚ್ಚಾಗಿದೆ. ಈ ನಡುವೆ ವಿಡಿಯೋ ವೈರಲ್ ಆಯಿತು. ಹೆಲ್ಮೆಟ್ ಧರಿಸದೇ ರಾಜ್ ಶೆಟ್ಟಿ ಬೈಕ್ ಓಡಿಸಿದ್ದನ್ನು ಕೆಲವರು ಟೀಕಿಸಿದ್ದರು. ಅದಕ್ಕೆ ಈಗ ರಾಜ್ ಬಿ. ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ.

ನಟ ರಾಜ್ ಬಿ. ಶೆಟ್ಟಿ (Raj B Shetty) ಅವರಿಗೆ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಸಿಕ್ಕಿದೆ. ‘ಸು ಫ್ರಮ್ ಸೋ’ ಸಿನಿಮಾ ಬಳಿಕ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಈಗ ಅವರು ಹೊಸ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರ ಒಂದು ವಿಡಿಯೋ ವೈರಲ್ ಆಗಿತ್ತು. ಹೆಲ್ಮೆಟ್ (Helmet) ಧರಿಸದೇ ಬೈಕ್ ಓಡಿಸಿದ್ದನ್ನು ಕೆಲವರು ಟೀಕಿಸಿದ್ದರು. ಅಭಿಮಾನಿಯನ್ನು ಬೈಕ್​ನಲ್ಲಿ ಕೂರಿಸಿಕೊಂಡು ಹೋಗಿದ್ದ ರಾಜ್ ಬಿ. ಶೆಟ್ಟಿ ಅವರು ಈಗ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಮತ್ತೆ ಅದೇ ಅಭಿಮಾನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ‘ಒಂದು ವಿಡಿಯೋ ವೈರಲ್ ಆಯ್ತು ಅಂತ ಇವನು ಮತ್ತೆ ನನ್ನನ್ನು ಹಾಕ್ಕೊಂಡಿದ್ದಾನೆ. ವಿಡಿಯೋ ಮಾಡೋಣ, ವಿಡಿಯೋ ಮಾಡೋಣ ಎನ್ನುತ್ತಿದ್ದಾನೆ. ನಾನು ಶೂಟಿಂಗ್ ಸೆಟ್​​ನಲ್ಲಿ ಬೈಕ್ ಓಡಿಸುವಾಗ ಇವನು ಹಿಂದೆ ಕೂತಿದ್ದ. ಅದಕ್ಕೆ ಎಲ್ಲರೂ ಬೆಂಗಳೂರು ಸಿಟಿ ಪೊಲೀಸ್ ಅಂತ ಕಮೆಂಟ್ ಮಾಡಿದ್ದಾರೆ. ಮಗಾ.. ದಯವಿಟ್ಟು ಒಳಗೆ ಕೂರಿಸಬೇಡ್ರೋ. ಆ ಸೀನ್​​ನಲ್ಲಿ ಹೆಲ್ಮೆಟ್ ಹಾಕುವಂತೆ ಇರಲಿಲ್ಲ. ಆ ವಿಡಿಯೋ ವೈರಲ್ ಆಗಿದೆ ಅಂತ ಇವನು ಮತ್ತೆ ವಿಡಿಯೋ ಮಾಡಲು ಬಂದು ಕೂತಿದ್ದಾನೆ. ನೀವೇ ಇವನನ್ನು ವೈರಲ್ ಸ್ಟಾರ್ ಮಾಡಿದ್ದೀರಿ’ ಎಂದು ರಾಜ್ ಬಿ. ಶೆಟ್ಟಿ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.