AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raj B Shetty

Raj B Shetty

ರಾಜ್ ಬಿ. ಶೆಟ್ಟಿ ಅವರು ಕನ್ನಡದ ಖ್ಯಾತ ನಟ, ನಿರ್ಮಾಪಕ, ಸಂಭಾಷಣಾಕಾರ, ಚಿತ್ರಕಥೆ ಬರಹಗಾರ ಹಾಗೂ ನಿರ್ದೇಶಕ. ಹೀರೋ ಎಂದರೆ ಕಟ್ಟುಮಸ್ತಾದ ದೇಹ ಹೊಂದಿರಬೇಕು, ತಲೆಯ ತುಂಬ ಕೇಶ ರಾಶಿ ಇರಬೇಕು ಎಂಬ ಕಲ್ಪನೆಗೆ ಅವರು ವಿರುದ್ಧವಾಗಿದ್ದಾರೆ. ಆದರೂ ಅವರಿಗೆ ಸಿಕ್ಕ ಜನಪ್ರಿಯತೆ ಕಡಿಮೆ ಏನಿಲ್ಲ. ಅವರು ‘ಫೈವ್ ಲೆಟರ್ಸ್​’ ಹೆಸರಿನ ಶಾರ್ಟ್​ ಫಿಲ್ಮ್ ನಿರ್ದೇಶನ ಮಾಡಿದರು. 2017ರಲ್ಲಿ ‘ಒಂದು ಮೊಟ್ಟೆಯ ಕಥೆ’ ಹೆಸರಿನ ಸಿನಿಮಾ ಮಾಡಿ ಗಮನ ಸೆಳೆದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ರಾಜ್ ಹಿಂದಿರುಗಿ ನೋಡಲೇ ಇಲ್ಲ. 2018ರ ‘ಅಮ್ಮಚ್ಚಿ ಎಂಬ ನೆನಪು’ ಚಿತ್ರದಲ್ಲಿ ರಾಜ್ ನಟಿಸಿದರು. ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’, ‘ಮಾಯಾಬಜಾರ್ 2016’ ಮೊದಲಾದ ಚಿತ್ರಗಳಲ್ಲಿ ನಟಿಸಿದರು. ‘ಒಂದು ಮೊಟ್ಟೆಯ ಕಥೆ’ ಜೊತೆಗೆ ‘ಗರುಡ ಗಮನ ವೃಷಭ ವಾಹನ’, ‘ಸ್ವಾತಿ ಮುತ್ತಿನ ಮಳೆಹನಿಯೇ’ ಚಿತ್ರ ನಿರ್ದೇಶನ ಮಾಡಿದ್ದಾರೆ. ಅವರು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅವರ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ ಸೂಪರ್ ಹಿಟ್ ಆಗಿದ್ದು, 100 ಕೋಟಿ ರೂಪಾಯಿ ಕ್ಲಬ್ ಸೇರಿದೆ.

ಇನ್ನೂ ಹೆಚ್ಚು ಓದಿ

Eko: ಮಲಯಾಳಂ ಸಿನಿಮಾ ಮೂಲಕ ಮತ್ತೊಮ್ಮೆ ಯಶಸ್ಸು ಕಂಡ ರಾಜ್ ಬಿ. ಶೆಟ್ಟಿ

ರಾಜ್ ಬಿ. ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಮಲಯಾಳಂ ಚಿತ್ರರಂಗದಲ್ಲೂ ಫೇಮಸ್ ಆಗಿದ್ದಾರೆ. ಮಲಯಾಳಂ ಸಿನಿಮಾಗಳನ್ನು ಕರ್ನಾಟಕದಲ್ಲಿ ವಿತರಣೆ ಮಾಡುವ ಮೂಲಕ ರಾಜ್ ಬಿ. ಶೆಟ್ಟಿ ಯಶಸ್ಸು ಕಂಡಿದ್ದಾರೆ. ಅವರ ‘ಲೈಟರ್ ಬುದ್ಧ ಫಿಲ್ಮ್ಸ್’ ಸಂಸ್ಥೆಯು ವಿತರಣೆ ಮಾಡಿರುವ ‘ಇಕೋ’ ಸಿನಿಮಾ ಜನರ ಮೆಚ್ಚುಗೆ ಪಡೆಯುತ್ತಿದೆ.

ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದ್ದಕ್ಕೆ ಸ್ಪಷ್ಟನೆ ನೀಡಿದ ರಾಜ್ ಬಿ. ಶೆಟ್ಟಿ

‘ಸು ಫ್ರಮ್ ಸೋ’ ಸಿನಿಮಾ ಬಳಿಕ ರಾಜ್ ಬಿ. ಶೆಟ್ಟಿ ಅವರ ಜನಪ್ರಿಯತೆ ಹೆಚ್ಚಾಗಿದೆ. ಈ ನಡುವೆ ವಿಡಿಯೋ ವೈರಲ್ ಆಯಿತು. ಹೆಲ್ಮೆಟ್ ಧರಿಸದೇ ರಾಜ್ ಶೆಟ್ಟಿ ಬೈಕ್ ಓಡಿಸಿದ್ದನ್ನು ಕೆಲವರು ಟೀಕಿಸಿದ್ದರು. ಅದಕ್ಕೆ ಈಗ ರಾಜ್ ಬಿ. ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ.

ರಾಜ್ ಬಿ. ಶೆಟ್ಟಿ ಮುಂದಿನ ಸಿನಿಮಾ ‘ಜುಗಾರಿ ಕ್ರಾಸ್‌’: ಗುರುದತ್ತ ಗಾಣಿಗ ನಿರ್ದೇಶನ

‘ಸು ಫ್ರಮ್ ಸೋ’ ಸಿನಿಮಾದ ಯಶಸ್ಸಿನ ಬಳಿಕ ರಾಜ್ ಬಿ. ಶೆಟ್ಟಿ ಹೊಸ ಸಿನಿಮಾ ಘೋಷಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಆಧಾರಿತ ‘ಜುಗಾರಿ ಕ್ರಾಸ್’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ನಟಿಸಲಿದ್ದಾರೆ. ‘ಕರಾವಳಿ’ ಖ್ಯಾತಿಯ ಗುರುದತ್ತ ಗಾಣಿಗ ಅವರು ಈ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ.

ಒಟಿಟಿಗೆ ಬಂದರೂ ಥಿಯೇಟರ್​​ನಲ್ಲಿ ಪ್ರದರ್ಶನ ಕಾಣುತ್ತಿದೆ ‘ಸು ಫ್ರಮ್ ಸೋ’; ಸಿಕ್ಕ ಶೋಗಳೆಷ್ಟು?

‘ಸು ಫ್ರಮ್ ಸೋ’ ಚಿತ್ರವು ಒಟಿಟಿಯಲ್ಲಿ ಬಿಡುಗಡೆಯಾದ ನಂತರವೂ ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯ 54ನೇ ದಿನದಂದು 1 ಲಕ್ಷ ರೂಪಾಯಿಗಳನ್ನು ಗಳಿಸಿದೆ. ಒಟ್ಟಾರೆ 122.59 ಕೋಟಿ ರೂಪಾಯಿಗಳನ್ನು ಗಳಿಸಿದ ಈ ಚಿತ್ರವು ರಾಜ್ ಬಿ. ಶೆಟ್ಟಿ ಅವರಿಗೆ ದೊಡ್ಡ ಗೆಲುವನ್ನು ತಂದುಕೊಟ್ಟಿದೆ.

ರಾಜ್ ಬಿ. ಶೆಟ್ಟಿ ಎದುರು ಕನ್ನಡಿಗರದ್ದು ಅದೊಂದೇ ಕೋರಿಕೆ; ಈಡೇರೋದು ಯಾವಾಗ?

ರಾಜ್ ಬಿ ಶೆಟ್ಟಿ ಅವರು ‘ಸು ಫ್ರಮ್ ಸೋ’ ಚಿತ್ರದ ಮೂಲಕ ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಮಧ್ಯೆ ಅವರ ಒಡೆತನದ ‘ಲೈಟರ್ ಬುದ್ಧ’ ಮಲಯಾಳಂನ ‘ಲೋಕಃ’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿದೆ. ಕನ್ನಡ ವರ್ಷನ್ ಇನ್ನೂ ಬಿಡುಗಡೆಯಾಗಿಲ್ಲ. ಇದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ‘ಲೋಕಃ’ ಚಿತ್ರದ ತಮಿಳು ಮತ್ತು ಹಿಂದಿ ಆವೃತ್ತಿಗಳು ಲಭ್ಯವಿದ್ದರೂ ಕನ್ನಡ ಆವೃತ್ತಿ ಲಭ್ಯವಿಲ್ಲದಿರುವುದು ವಿಪರ್ಯಾಸ.

‘ಸು ಫ್ರಮ್ ಸೋ’ಗೆ ಒಟಿಟಿಯಲ್ಲಿ ಬೇರೆಯದೇ ರೀತಿಯ ವಿಮರ್ಶೆ; ಸಮಸ್ಯೆ ಆಗಿದ್ದೆಲ್ಲಿ?

‘ಸು ಫ್ರಮ್ ಸೋ’ ಸಿನಿಮಾ ಥಿಯೇಟರ್‌ಗಳಲ್ಲಿ ದೊಡ್ಡ ಯಶಸ್ಸು ಕಂಡಿದೆ. 120 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಆದರೆ, ಒಟಿಟಿಯಲ್ಲಿ ವಿಮರ್ಶೆಗಳು ಬಹಳ ಭಿನ್ನವಾಗಿವೆ.‘ನಾವು ಸಿನಿಮಾನ ಥಿಯೇಟರ್ನಲ್ಲಿ ನೋಡದೇ ಇದ್ದಿದ್ದೇ ಒಳ್ಳೆಯದಾಯ್ತು, ಇದು ಓವರ್ ರೇಟೆಡ್ ಚಿತ್ರ’ ಎಂದೆಲ್ಲ ಬರೆದುಕೊಳ್ಳುತ್ತಿದ್ದಾರೆ. ಈ ರೀತಿ ಹೇಳಲು ಅನೇಕ ಕಾರಣಗಳು ಇವೆ.

‘ಸು ಫ್ರಮ್ ಸೋ’ ಒಟಿಟಿಗೆ ಬಂದರೂ ಥಿಯೇಟರ್​ನಲ್ಲಿ ನಿಂತಿಲ್ಲ ಕಲೆಕ್ಷನ್; ಒಟ್ಟಾರೆ ಗಳಿಕೆ ಎಷ್ಟು?  

ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಾಮ್ ಸೋ’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾದ ನಂತರವೂ ಥಿಯೇಟರ್‌ಗಳಲ್ಲಿ ಉತ್ತಮ ಪ್ರದರ್ಶನ ಕಂಡಿತು. 46 ದಿನಗಳ ಯಶಸ್ವಿ ಪ್ರದರ್ಶನದ ನಂತರ ಒಟಿಟಿಗೆ ಬಿಡುಗಡೆಯಾದರೂ, ಸಿನಿಮಾ ಉತ್ತಮ ಗಳಿಕೆ ಮಾಡುತ್ತಲೇ ಇದೆ. ಇದು ಸಿನಿಮಾದ ಜನಪ್ರಿಯತೆ ಮತ್ತು ಪ್ರೇಕ್ಷಕರ ಆಸಕ್ತಿಯನ್ನು ತೋರಿಸುತ್ತದೆ.

‘ಸು ಫ್ರಮ್ ಸೋ’ ಒಟಿಟಿ ವರ್ಷನ್​ನಲ್ಲಿ ಏಳು ನಿಮಿಷಗಳ ದೃಶ್ಯಕ್ಕೆ ಕತ್ತರಿ

'ಸು ಫ್ರಮ್ ಸೋ' ಕನ್ನಡ ಸಿನಿಮಾ ಜಿಯೋಸಿನಿಮಾ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸೆಪ್ಟೆಂಬರ್ 9ರಿಂದ ಸ್ಟ್ರೀಮಿಂಗ್ ಆರಂಭಿಸಿದೆ. ಥಿಯೇಟರ್‌ನಲ್ಲಿ 45 ದಿನಗಳ ಯಶಸ್ವಿ ಪ್ರದರ್ಶನದ ನಂತರ ಈಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಚಿತ್ರದ ರನ್ ಟೈಮ್ ಅಲ್ಲಿ ಒಟಿಟಿ ಮತ್ತು ಥಿಯೇಟರ್ ನಡುವೆ ವ್ಯತ್ಯಾಸ ಕಂಡುಬಂದಿದೆ.

‘ಸು ಫ್ರಮ್ ಸೋ’ ಒಟಿಟಿ ದಿನಾಂಕ ರಿವೀಲ್ ಮಾಡಿದ ಕಲರ್ಸ್; 45ನೇ ದಿನವೂ ಅಬ್ಬರದ ಕಲೆಕ್ಷನ್

Su From So OTT Release Date: ‘ಸು ಫ್ರಮ್ ಸೋ’ ಚಿತ್ರವು 45ನೇ ದಿನದಂದು ಉತ್ತಮ ಕಲೆಕ್ಷನ್ ಮಾಡಿದೆ. ಚಿತ್ರ ಒಟ್ಟು 122 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಇದು ಕನ್ನಡ ಚಿತ್ರರಂಗದಲ್ಲಿ ಒಂದು ದೊಡ್ಡ ಸಾಧನೆ. ಈ ಚಿತ್ರ ಜಿಯೋಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.

‘ಸು ಫ್ರಮ್ ಸೋ’ ಒಟಿಟಿ ರಿಲೀಸ್: ಸೆಪ್ಟೆಂಬರ್ 9ರಿಂದ ಜಿಯೋ ಹಾಟ್​ಸ್ಟಾರ್ ಮೂಲಕ ಪ್ರಸಾರ

‘ಸು ಫ್ರಮ್ ಸೋ’ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ‘ಜಿಯೋ ಹಾಟ್​ಸ್ಟಾರ್’ ಒಟಿಟಿಯಲ್ಲಿ ಸೆಪ್ಟೆಂಬರ್ 9ರಿಂದ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಥಿಯೇಟರ್​​​ನಲ್ಲಿ ಗೆದ್ದ ಈ ಸಿನಿಮಾ ಈಗ ಒಟಿಟಿಯಲ್ಲೂ ಭರ್ಜರಿ ಪ್ರತಿಕ್ರಿಯೆ ಪಡೆಯುವ ನಿರೀಕ್ಷೆ ಇದೆ.