ವಿಲ್ ಮಾಡದೇ ನಿಧನ ಹೊಂದಿದ ಹಿಂದೂ ಮಹಿಳೆಯ ಆಸ್ತಿಯ ಕುರಿತು ಸುಪ್ರೀಂ ಮಹತ್ವದ ತೀರ್ಪು

| Updated By: shivaprasad.hs

Updated on: Jan 21, 2022 | 10:43 AM

ಹಿಂದೂ ಮಹಿಳೆಯು ತನ್ನ ಪಾಲಿನ ಆಸ್ತಿಯನ್ನು ವಿಲ್ ಮಾಡದೇ ಸಹಜವಾಗಿ ನಿಧನಹೊಂದಿದರೆ ಅದು ಮೂಲ ವಾರಸುದಾರರಿಗೆ ಮರಳುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ವಿಲ್ ಮಾಡದೇ ನಿಧನ ಹೊಂದಿದ ಹಿಂದೂ ಮಹಿಳೆಯ ಆಸ್ತಿಯ ಕುರಿತು ಸುಪ್ರೀಂ ಮಹತ್ವದ ತೀರ್ಪು
ಸುಪ್ರೀಂಕೋರ್ಟ್​
Follow us on

ಹಿಂದೂ ಮಹಿಳೆಯು (Female Hindu) ತನ್ನ ಪಾಲಿನ ಆಸ್ತಿಯನ್ನು ವಿಲ್ ಮಾಡದೇ ಸಹಜವಾಗಿ ನಿಧನಹೊಂದಿದರೆ ಅದು ಮೂಲ ವಾರಸುದಾರರಿಗೆ ಮರಳುತ್ತದೆ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್ ಹಾಗೂ ಕೃಷ್ಣ ಮುರಾರಿ ಅವರಿದ್ದ ಪೀಠವು ಗುರುವಾರ ಈ ರೀತಿ ಅಭಿಪ್ರಾಯಪಟ್ಟಿದೆ. ಹಿಂದೂ ಮಹಿಳೆಯು ಯಾವುದೇ ವಿಲ್ ಮಾಡದೇ ಸತ್ತರೆ, ಆಕೆಯ ತಂದೆ ಅಥವಾ ತಾಯಿಯಿಂದ ಪಡೆದ ಆಸ್ತಿಯು ಆಕೆಯ ತಂದೆಯ ವಾರಸುದಾರರಿಗೆ ಹೋಗುತ್ತದೆ. ಹಾಗೆಯೇ ಆಕೆಯ ಪತಿ ಅಥವಾ ಮಾವನಿಂದ ಪಡೆದ ಪಿತ್ರಾರ್ಜಿತ ಆಸ್ತಿಯು ಪತಿಯ ಉತ್ತರಾಧಿಕಾರಿಗಳಿಗೆ ಹೋಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಹಿಂದೂ ಉತ್ತರಾಧಿಕಾರ ಕಾಯ್ದೆಯ ನಿಬಂಧನೆಗಳನ್ನು ಸುಪ್ರೀಂ ಕೋರ್ಟ್ ವಿವರಿಸಿದೆ. ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಪುರುಷ ಮತ್ತು ಸ್ತ್ರೀಯರ ನಡುವೆ ಸಂಪೂರ್ಣ ಸಮಾನತೆಯನ್ನು ಸ್ಥಾಪಿಸುವುದು ಈ ಕಾಯಿದೆಯ ಮುಖ್ಯ ಆಶಯವಾಗಿದೆ ಎಂದು ಅದು ಹೇಳಿದೆ. ಅಲ್ಲದೇ ಈ ಕಾಯಿದೆಯಿಂದ ಹಿಂದೂಗಳ ಉತ್ತರಾಧಿಕಾರದ ಕಾಯ್ದೆಯಲ್ಲಿ ಬದಲಾವಣೆಯಾಗಿದೆ, ಕಾರಣ ಅಲ್ಲಿಯವರೆಗೆ ಮಹಿಳೆಯರ ಉತ್ತರಾಧಿಕಾರದ ಕುರಿತು ಹೆಚ್ಚಿನ ತಿಳುವಳಿಕೆ ಇರಲಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಕಾಯಿದೆ ಯಾರಿಗೆಲ್ಲಾ ಅನ್ವಯಿಸುತ್ತದೆ ಎಂದು ವಿವರಿಸಿರುವ ಸುಪ್ರೀಂ ಕೋರ್ಟ್, ‘‘ಈ ಕಾಯಿದೆಯು ಏಕರೂಪದ ಮತ್ತು ಸಮಗ್ರವಾದ ಉತ್ತರಾಧಿಕಾರದ ವ್ಯವಸ್ಥೆಯನ್ನು ರೂಪಿಸುತ್ತದೆ. ಮಿತಾಕ್ಷರ ಮತ್ತು ದಯಾಭಾಗ ಶಾಲೆಗಳಿಂದ ಆಡಳಿತ ನಡೆಸಲ್ಪಡುವ ವ್ಯಕ್ತಿಗಳಿಗೆ ಮತ್ತು ಹಿಂದೆ ಮುರುಮಕ್ಕಟ್ಟಯಂ, ಅಳಿಯಸಂತಾನ ಮತ್ತು ನಂಬೂದ್ರಿ ಕಾನೂನುಗಳಿಂದ ಆಡಳಿತ ನಡೆಸಲ್ಪಡುವ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. ಈ ಕಾಯಿದೆಯು ವೀರಶೈವ, ಲಿಂಗಾಯತ ಅಥವಾ ಬ್ರಹ್ಮ ಪ್ರಾರ್ಥನಾ ಅಥವಾ ಆರ್ಯ ಸಮಾಜದ ಅನುಯಾಯಿ ಸೇರಿದಂತೆ ಅದರ ಯಾವುದೇ ರೂಪದಲ್ಲಿ ಧರ್ಮದಿಂದ ಹಿಂದೂ ಆಗಿರುವವರಿಗೆ ಅನ್ವಯಿಸುತ್ತದೆ. ಮತ್ತು ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಹೊರತುಪಡಿಸಿ ಬೌದ್ಧ, ಜೈನ ಅಥವಾ ಸಿಖ್ ಧರ್ಮದ ಯಾವುದೇ ವ್ಯಕ್ತಿಗೂ ಈ ಕಾಯ್ದೆ ಅನ್ವಯಿಸುತ್ತದೆ’’ ಎಂದು ಪೀಠವು ತಿಳಿಸಿದೆ.

ಸೆಕ್ಷನ್ 15(2) ಅನ್ನು ಉಲ್ಲೇಖಿಸಿ ನ್ಯಾಯಾಲಯವು ಶಾಸಕಾಂಗದ ಮೂಲ ಉದ್ದೇಶವೆಂದರೆ ಹಿಂದೂ ಮಹಿಳೆಯ ಪಿತ್ರಾರ್ಜಿತ ಆಸ್ತಿಯು ಯಾವುದೇ ಸಮಸ್ಯೆಯಿಲ್ಲದೇ ಮೂಲಕ್ಕೆ ಹಿಂದಿರುಗುತ್ತದೆ ಎಂದು ನ್ಯಾಯಾಲಯ ವ್ಯಾಖ್ಯಾನಿಸಿದೆ. ಅರುಣಾಚಲ ಗೌಂಡರ್ ಅವರ ಮೇಲ್ಮನವಿಯ ಮೇಲೆ ವಿಚಾರಣೆ ನಡೆಸಿದ ಪೀಠ, ಮದ್ರಾಸ್ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯದ ತೀರ್ಪುಗಳನ್ನು ತಳ್ಳಿಹಾಕಿ, ಸುಪ್ರೀಂ ಆದೇಶ ನೀಡಿದೆ. “1967 ರಲ್ಲಿ ಕುಪಾಯಿ ಅಮ್ಮಾಳ್ ಅವರ ಮರಣದ ನಂತರ ತೆರೆಯಲಾದ ಸೂಟ್ ಆಸ್ತಿಗಳ ಉತ್ತರಾಧಿಕಾರದಿಂದ, 1956 ರ ಕಾಯಿದೆಯು ಅನ್ವಯಿಸುತ್ತದೆ ಮತ್ತು ಆ ಮೂಲಕ ರಾಮಸಾಮಿ ಗೌಂಡರ್ ಅವರ ಮಗಳು ಅವರ ತಂದೆಯ ವರ್ಗ-I ವಾರಸುದಾರರಾಗಿರುತ್ತಾರೆ ಮತ್ತು ಪ್ರತಿಯೊಂದರಲ್ಲೂ 1/5 ನೇ ಪಾಲನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ತಿಳಿಸಿದೆ.

ಇದನ್ನೂ ಓದಿ:

ಮಾಸ್ಕ್ ಧರಿಸಲು ನಿರಾಕರಿಸಿದ ಪ್ರಯಾಣಿಕ; ಅರ್ಧ ದಾರಿಯಲ್ಲಿ ಹಿಂತಿರುಗಿದ ವಿಮಾನ: ಮುಂದೇನಾಯ್ತು?

ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿ ಹೆಚ್ಚಾದ ಅಪೌಷ್ಟಿಕತೆ; ಶಾಲೆ ಆವರಣದಲ್ಲೇ ಕೈ ತೋಟ, ಹೊಸ ಪ್ರಯತ್ನದತ್ತ ತೋಟಗಾರಿಕೆ ಇಲಾಖೆ