ಮುಂಬೈ: ಬ್ಯಾಂಕ್ ಗ್ರಾಹಕರಿಗೆ ಎಟಿಎಂ ಕೇಂದ್ರಗಳು ಅತ್ಯಾಪ್ತ ಸ್ನೇಹಿತನಾಗಿ ಯಾವುದೋ ಕಾಲವಾಗಿದೆ. ಅದಿಲ್ಲದೆ ಬ್ಯಾಂಕ್ ವಹಿವಾಟು ಕಷ್ಟಕಷ್ಟ ಎನ್ನುವಂತಾಗಿದೆ. ಪರಿಸ್ಥಿತಿ ಹೀಗಿರುವಾಗ ಒಂದು ಬ್ಯಾಂಕ್ ತನ್ನ ಎಟಿಎಂ ಯಂತ್ರಗಳ ಸೇವೆಯನ್ನು ಬಂದ್ ಮಾಡಲು ಹೊರಟಿದೆ. ವಿವರ ಇಲ್ಲಿದೆ: ಹೌದು ನಾಳೆ ಅಕ್ಟೋಬರ್ 1ರಿಂದ ಸೂರ್ಯೋದಯ್ ಸ್ಮಾಲ್ ಫಿನಾನ್ಸ್ ಬ್ಯಾಂಕ್ (Suryoday Small Finance Bank) ತನ್ನ ಎಟಿಎಂ ಯಂತ್ರಗಳು (ATMs) ಮೂಲಕ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ಗಳ ವಹಿವಾಟನ್ನು ಸ್ಥಗಿತಗೊಳಿಸಲಿದೆ.
ಕೋವಿಡ್ 19 (Covid 19) ಅವಕೃಪೆಯಿಂದಾಗಿ 2021 ಜೂನ್ 30 ರ ತ್ರೈಮಾಸಿಕ ವರದಿಯಲ್ಲಿ 48 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಅದಕ್ಕೂ ಮುನ್ನ ವರ್ಷದ ಹಿಂದೆ 27 ಕೋಟಿ ರೂಪಾಯಿ ನಷ್ಟಕ್ಕೊಳಗಾಗಿತ್ತು.
ಸೂರ್ಯೋದಯ್ ಸ್ಮಾಲ್ ಫಿನಾನ್ಸ್ ಬ್ಯಾಂಕ್ (SSF Bank) ಷೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಆಗಿದ್ದು 2017ರಿಂದ ಸೇವೆ ಒದಗಸುತ್ತಿದೆ. 13 ರಾಜ್ಯಗಳಲ್ಲಿ ಇದರ ಕಾರ್ಯಚಟುವಟಿಕೆ ವಿಸ್ತರಿಸಿದೆ. 555 ಬ್ಯಾಂಕ್ ಬ್ರಾಂಚ್ಗಳು ಸೇವೆ ಒದಗಿಸುತ್ತಿವೆ. ಮಹಾರಾಷ್ಟ್ರ, ತಮುಳುನಾಡು ಮತ್ತು ಒಡಿಶಾ ರಾಜ್ಯಗಳಲ್ಲಿ ಹೆಚ್ಚಾಗಿ ಕಾರ್ಯಗತವಾಗಿದೆ.
ಕಾರ್ಯಕಾರಿ ಕಾರಣಗಳಿಂದಾಗಿ (operational reasons) ಈ ನಿರ್ಧಾರಕ್ಕೆ ಬರಲಾಗಿದೆ. ಆದರೂ SSF Bank ಬ್ಯಾಂಕ್ ಗ್ರಾಹಕರು ತಮ್ಮ ATM/Debit card ಗಳನ್ನು ಇತರೆ ಬ್ಯಾಂಕ್ಗಳ ATM ಕೇಂದ್ರಗಳಲ್ಲಿ ಬಳಕೆ ಮಾಡಬಹುದು ಎಂದು ಬ್ಯಾಂಕ್ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ. ಆದರೂ SSF Bank ಬ್ಯಾಂಕ್ನ ಇತರೆ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಅಬಾಧಿತವಾಗಿ ಮುಂದುವರಿಯಲಿದೆ.
SSF Bank ಬ್ಯಾಂಕ್ ಕಳೆದ ತಿಂಗಳು ತನ್ನ ಷೇರುದಾರರ ಸಾಮಾನ್ಯ ಸಭೆಯಲ್ಲಿ ವಾರ್ಷಿಕ ವರದಿ ಮಂಡಿಸುವಾಗ ಭವಿಷ್ಯದಲ್ಲಿ ತನ್ನ ಗ್ರಾಹಕರಿಗೆ ಇನ್ನೂ ಹೆಚ್ಚಿನ ಮೌಲ್ಯಯುತ ಸೇವೆ ಒದಗಿಸಿವಂತಾಗಲು ಈ ನಿರ್ಣಾಯ ಅನಿವಾರ್ಯ ಎಂದು ತಿಳಿಸಿತ್ತು.
ಇದನ್ನೂ ಓದಿ:
ATM cash: ಸಮಯಕ್ಕೆ ಸರಿಯಾಗಿ ಹಣ ತುಂಬದೆ ಎಟಿಎಂ ಖಾಲಿಯಿದ್ದಲ್ಲಿ ಬ್ಯಾಂಕ್ಗಳಿಗೆ 10 ಸಾವಿರ ರೂ. ದಂಡ
ಇದನ್ನೂ ಓದಿ:
SBI ATM: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 873 ಎಟಿಎಂಗಳಿಗೆ ಬಾಗಿಲು
Published On - 9:49 am, Thu, 30 September 21