Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್ ಸಿಬ್ಬಂದಿಯಿಂದ ಭಕ್ತರಿಗೆ ಅಶ್ಲೀಲ ವೆಬ್ ಲಿಂಕ್, ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ಸಂಗತಿ!

ಹೈದರಾಬಾದ್: ಕೋಟಿಕೋಟಿ ಭಕ್ತರಿರುವ ತಿಮ್ಮಪ್ಪನ ಆಸ್ಥಾನ ಎಂದರೆ ಭಯ, ಭಕ್ತಿ ಜೊತೆಗೆ ಶದ್ಧೆಯೂ ಹೆಚ್ಚು. ಇಂತಹ ಕಟ್ಟುನಿಟ್ಟಿನ ಜಾಗದಲ್ಲೇ ಕೆಲ ನೀಚರು ಆಶ್ಲೀಲ ವರ್ತನೆ ತೋರಿದ್ದಾರೆ. ಇದ್ರ ಬೆನ್ನುಬಿದ್ದು ತನಿಖೆ ನಡೆಸಿದ ಟಿಟಿಡಿ ಅಧಿಕಾರಿಗಳಿಗೆ ಶಾಕ್ ಸಿಕ್ಕಿದೆ. ಹಾಗಾದ್ರೆ ಅಲ್ಲಿ ನಡೆದಿದ್ದಾದ್ರೂ ಏನು..? ಈ ಸ್ಟೋರಿ ಓದಿ. ಆಂಧ್ರದ ‘ತಿರುಪತಿ ತಿರುಮಲ ದೇವಸ್ಥಾನ ಸಮಿತಿ’ ವತಿಯಿಂದ 2008ರಲ್ಲಿ ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್ ಆರಂಭಿಸಲಾಗಿತ್ತು. ತಿರುಮಲದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತರಿಗೆ ತಲುಪಿಸುವ ಉದ್ದೇಶದಿಂದ ಹಾಗೂ ಆಧ್ಯಾತ್ಮಿಕ […]

ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್ ಸಿಬ್ಬಂದಿಯಿಂದ ಭಕ್ತರಿಗೆ ಅಶ್ಲೀಲ ವೆಬ್ ಲಿಂಕ್, ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ಸಂಗತಿ!
Follow us
ಆಯೇಷಾ ಬಾನು
|

Updated on: Nov 12, 2020 | 7:04 AM

ಹೈದರಾಬಾದ್: ಕೋಟಿಕೋಟಿ ಭಕ್ತರಿರುವ ತಿಮ್ಮಪ್ಪನ ಆಸ್ಥಾನ ಎಂದರೆ ಭಯ, ಭಕ್ತಿ ಜೊತೆಗೆ ಶದ್ಧೆಯೂ ಹೆಚ್ಚು. ಇಂತಹ ಕಟ್ಟುನಿಟ್ಟಿನ ಜಾಗದಲ್ಲೇ ಕೆಲ ನೀಚರು ಆಶ್ಲೀಲ ವರ್ತನೆ ತೋರಿದ್ದಾರೆ. ಇದ್ರ ಬೆನ್ನುಬಿದ್ದು ತನಿಖೆ ನಡೆಸಿದ ಟಿಟಿಡಿ ಅಧಿಕಾರಿಗಳಿಗೆ ಶಾಕ್ ಸಿಕ್ಕಿದೆ. ಹಾಗಾದ್ರೆ ಅಲ್ಲಿ ನಡೆದಿದ್ದಾದ್ರೂ ಏನು..? ಈ ಸ್ಟೋರಿ ಓದಿ.

ಆಂಧ್ರದ ‘ತಿರುಪತಿ ತಿರುಮಲ ದೇವಸ್ಥಾನ ಸಮಿತಿ’ ವತಿಯಿಂದ 2008ರಲ್ಲಿ ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್ ಆರಂಭಿಸಲಾಗಿತ್ತು. ತಿರುಮಲದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತರಿಗೆ ತಲುಪಿಸುವ ಉದ್ದೇಶದಿಂದ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಜನರಿಗೆ ಪರಿಚಯಿಸಲು, ಧಾರ್ಮಿಕ ಪ್ರಜ್ಞೆ ಬೆಳೆಸಲು ಎಸ್​ವಿಬಿಸಿ ಚಾನೆಲ್ ಆರಂಭವಾಗಿತ್ತು. ಆದ್ರೆ ‘ಎಸ್​ವಿಬಿಸಿ’ಯ ಉದ್ಯೋಗಿಗಳು ಮಾತ್ರ ಗುರಿಮರೆತು ಕಾನೂನು ಬಾಹಿರ ಕೃತ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಭಕ್ತರಿಗೆ ಅಶ್ಲೀಲ ವೆಬ್ ಲಿಂಕ್ ಕಳಿಸಿದ ಸಿಬ್ಬಂದಿ! ಅಷ್ಟಕ್ಕೂ SVBC ಉದ್ಯೋಗಿಯೊಬ್ಬ ಭಕ್ತರಿಗೆ ಚಾನಲ್​ನಲ್ಲಿ ಪ್ರಸಾರವಾದ ಧಾರ್ಮಿಕ ಕಾರ್ಯಕ್ರಮದ ಲಿಂಕ್ ಕಳುಹಿಸಿದ್ದ. ಭಕ್ತರ ಕೋರಿಕೆ ಹಿನ್ನೆಲೆಯಲ್ಲಿ ಕಾರ್ಯಕ್ರದ ಲಿಂಕ್ ಕಳಿಸಿದ್ದ ಸಿಬ್ಬಂದಿ ಮಾಡಬಾರದ ಕೆಲಸ ಮಾಡಿದ್ದ. ಭಕ್ತರಿಗೆ ಧಾರ್ಮಿಕ ಕಾರ್ಯಕ್ರಮದ ಲಿಂಕ್ ಬದಲು ಆತ ಪೋರ್ನ್ ವೆಬ್​ಸೈಟ್ ಲಿಂಕ್ ಕಳುಹಿಸಿದ್ದಾನೆ. ಇನ್ನು ಈ ಘಟನೆಯಿಂದ ಶಾಕ್​ಗೆ ಒಳಗಾದ ಭಕ್ತರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಟಿಟಿಡಿಗೆ ಆಶ್ಚರ್ಯ ಕಾದಿತ್ತು. ಅಲ್ಲದೆ ಇನ್ನೂ ಸ್ಫೋಟಕ ಸಂಗತಿಗಳು ಬಯಲಾಗಿದ್ದವು. ಈ ರೀತಿ ಮಾಡುತ್ತಿರುವುದು ಒಬ್ಬ ಉದ್ಯೋಗಿ ಮಾತ್ರವಲ್ಲ, ಎಸ್​ವಿಬಿಸಿ ಚಾನೆಲ್​ನ ಸುಮಾರು 25ಕ್ಕೂ ಹೆಚ್ಚು ಸಿಬ್ಬಂದಿ ಈ ರೀತಿ ಕಚೇರಿಯಲ್ಲೇ ಪೋರ್ನ್ ಸೈಟ್ ನೋಡುತ್ತಾ ಕಾಲ ಕಳೆಯುತ್ತಿದ್ದಾರೆ ಅನ್ನೋದು ಬಟಾಬಯಲಾಗಿದೆ.

SVBC ವಾಹಿನಿಯಲ್ಲಿ ನಡೆದಿತ್ತು ಎನ್ನಲಾಗಿರುವ ಹಣ ದುರುಪಯೋಗ, ಅಕ್ರಮ ನೇಮಕಾತಿ, ಉದ್ಯೋಗಿಗಳ ಗುಂಪುಗಾರಿಕೆ ಹಾಗೂ ಇನ್ನಿತರ ಸಂಗತಿಗಳ ಹೊರತಾಗಿ ಮತ್ತೊಂದು ಗಂಭೀರ ಆರೋಪ ಈಗ ಕೇಳಿಬಂದಿದೆ. ಸಿಬ್ಬಂದಿ ಮಾಡಿರುವ ಕೃತ್ಯದ ಬಗ್ಗೆ ಟಿಟಿಡಿ ಗಂಭೀರ ಆಲೋಚನೆ ಮಾಡುತ್ತಿದ್ದು, ಕಠಿಣ ಕ್ರಮದ ಭರವಸೆಯನ್ನೂ ನೀಡಿದೆ.

ಒಟ್ನಲ್ಲಿ ದೇವರ ಸೇವೆ ಮಾಡಬೇಕಾದ ಸಿಬ್ಬಂದಿ ಮಾಡಬಾರದ್ದನ್ನ ಮಾಡಿ ಲಾಕ್ ಆಗಿದ್ದಾರೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯತೆ ಇದೆ. ಇಲ್ಲವಾದರೆ ತಿಮ್ಮಪ್ಪನ ಕೋಟ್ಯಂತರ ಭಕ್ತರ ಕೋಪಕ್ಕೆ SVBC ವಾಹಿನಿ ತುತ್ತಾರಿಗೋದು ಗ್ಯಾರಂಟಿ.

Daily Horoscope: ಸೂರ್ಯ ಮೇಷ ರಾಶಿಯಲ್ಲಿ ಚಂದ್ರ ಮಕರ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೇಷ ರಾಶಿಯಲ್ಲಿ ಚಂದ್ರ ಮಕರ ರಾಶಿಯಲ್ಲಿ ಸಂಚಾರ
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ