Svamitva Yojana ಸ್ವಾಮಿತ್ವ ಯೋಜನೆ ಗ್ರಾಮೀಣ ಆರ್ಥಿಕತೆಯ ಬಲ ಹೆಚ್ಚಿಸಿದ್ದು, ರಾಷ್ಟ್ರ ಮಟ್ಟದಲ್ಲಿ ಜಾರಿಗೊಳಿಸಲಾಗುವುದು: ಪ್ರಧಾನಿ ಮೋದಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 06, 2021 | 4:06 PM

Narendra Modi:ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೆಲವು ರಾಜ್ಯಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಸ್ವಾಮಿತ್ವ (Svamitva) ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ನಂತರ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು...

Svamitva Yojana ಸ್ವಾಮಿತ್ವ ಯೋಜನೆ ಗ್ರಾಮೀಣ ಆರ್ಥಿಕತೆಯ ಬಲ ಹೆಚ್ಚಿಸಿದ್ದು,  ರಾಷ್ಟ್ರ ಮಟ್ಟದಲ್ಲಿ ಜಾರಿಗೊಳಿಸಲಾಗುವುದು: ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ದೆಹಲಿ: ಆಸ್ತಿಯ ಸ್ಪಷ್ಟ ಮಾಲೀಕತ್ವವನ್ನು ಸ್ಥಾಪಿಸುವ ಯೋಜನೆಯಾಗಿರುವ ಸ್ವಾಮಿತ್ವ ಯೋಜನೆ, ಗ್ರಾಮೀಣ ಆರ್ಥಿಕತೆಯ ಬಲವನ್ನು ಹೆಚ್ಚಿಸಿದೆ ಮತ್ತು ಇದು ದೇಶದ ಹಳ್ಳಿಗಳ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಬರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬುಧವಾರ ಹೇಳಿದರು. ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೆಲವು ರಾಜ್ಯಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಸ್ವಾಮಿತ್ವ (Svamitva) ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ನಂತರ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.

“ಇದು ದೇಶದಲ್ಲಿ ಗ್ರಾಮ ಸ್ವರಾಜ್ಯಗೆ ಉದಾಹರಣೆಯಾಗಲಿದೆ” ಎಂದು ಮೋದಿ ಹೇಳಿದ್ದಾರೆ. ಸಾಮಾಜಿಕ-ಆರ್ಥಿಕವಾಗಿ ಸಶಕ್ತ ಮತ್ತು ಸ್ವಾವಲಂಬಿ ಗ್ರಾಮೀಣ ಭಾರತವನ್ನು ಉತ್ತೇಜಿಸಲು ಕೇಂದ್ರ ವಲಯದ ಸ್ವಾಮಿತ್ವ -SVAMITVA (Survey of Villages and Mapping with Improvised Technology in Village Areas) ಯೋಜನೆಗೆ ಪ್ರಧಾನಿ ಮೋದಿ ಏಪ್ರಿಲ್ 24, 2020 ರಂದು ಚಾಲನೆ ನೀಡಿದ್ದರು.

ಈ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿಯ ಸ್ಪಷ್ಟ ಮಾಲೀಕತ್ವವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಭೂಭಾಗಗಳನ್ನು ಮ್ಯಾಪಿಂಗ್ ಮಾಡುವುದರ ಮೂಲಕ ಮತ್ತು ಅರ್ಹ ಕುಟುಂಬಗಳಿಗೆ ಕಾನೂನು ಮಾಲೀಕತ್ವದ ಕಾರ್ಡ್‌ಗಳನ್ನು ನೀಡುವ ಮೂಲಕ ಹಕ್ಕುಗಳ ದಾಖಲೆಯನ್ನು ಒದಗಿಸುತ್ತದೆ

ಪ್ರಾಯೋಗಿಕ ಯೋಜನೆಯಡಿಯಲ್ಲಿ ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ, ರಾಜಸ್ಥಾನ, ಹರಿಯಾಣ ಮತ್ತು ಕರ್ನಾಟಕದಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.
ಈಗ ಜನರಿಗೆ ಆಸ್ತಿ ಕಾರ್ಡ್ ಒದಗಿಸಲು ಇಡೀ ದೇಶದಲ್ಲಿ ಇದನ್ನು ಜಾರಿಗೆ ತರಲಾಗುವುದು ಎಂದು ಮೋದಿ ಹೇಳಿದರು.


ಇದುವರೆಗೆ ಈ ರಾಜ್ಯಗಳಲ್ಲಿ 22 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಆಸ್ತಿ ಕಾರ್ಡ್‌ಗಳನ್ನು ತಯಾರಿಸಲಾಗಿದ್ದು, ಮಧ್ಯಪ್ರದೇಶದಲ್ಲಿ 3,000 ಕ್ಕೂ ಹೆಚ್ಚು ಗ್ರಾಮಗಳಲ್ಲಿ 1.70 ಲಕ್ಷ ಕುಟುಂಬಗಳಿಗೆ ನೀಡಲಾಗಿದೆ ಎಂದು ಅವರು ಹೇಳಿದರು. ಸ್ವಾಮಿತ್ವ ಯೋಜನೆಯು ಗ್ರಾಮಸ್ಥರನ್ನು ಮೂರನೇ ವ್ಯಕ್ತಿಗಳಿಂದ ಎರವಲು ಪಡೆಯುವುದನ್ನು ಉಳಿಸುತ್ತದೆ ಮತ್ತು ಈಗ, ಅವರ ಆಸ್ತಿ ಪತ್ರಗಳ ಆಧಾರದ ಮೇಲೆ ಅವರು ಬ್ಯಾಂಕುಗಳಿಂದ ಸಾಲ ಪಡೆಯುತ್ತಾರೆ ಎಂದು ಅವರು ಹೇಳಿದರು. ಕೆಲವು ಜನರು “ಚೋಟಾ ಹೆಲಿಕಾಪ್ಟರ್” (ಸಣ್ಣ ಹೆಲಿಕಾಪ್ಟರ್) ಎಂದು ಕರೆಯುವ ಡ್ರೋನ್, ಹಳ್ಳಿಗಳ ಅಭಿವೃದ್ಧಿಯ ಮುಖವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ: Lakhimpur Kheri Violence: ಲಖಿಂಪುರ್ ಖೇರಿಗೆ ಭೇಟಿ ನೀಡಲು ರಾಹುಲ್, ಪ್ರಿಯಾಂಕಾ ಗಾಂಧಿಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ

ಇದನ್ನೂ ಓದಿ: PM Awas Yojana: ಪಿಎಂ ಆವಾಸ್​ ಯೋಜನೆಯಿಂದ 3 ಕೋಟಿ ಸ್ಲಂ ನಿವಾಸಿಗಳು ಲಕ್ಷಾಧೀಶರಾಗಿದ್ದಾರೆ: ಪ್ರಧಾನಿ ಮೋದಿ