PM MITRA ₹4,445 ಕೋಟಿ ವೆಚ್ಚದಲ್ಲಿ 7 ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ

Piyush Goyal " ಪಿಎಂ ಮಿತ್ರ (PM MITRA) ನೂಲುವ, ನೇಯ್ಗೆ, ಸಂಸ್ಕರಣೆ/ಡೈಯಿಂಗ್ ಮತ್ತು ಮುದ್ರಣದಿಂದ ಹಿಡಿದು ಬಟ್ಟೆ ತಯಾರಿಕೆವರೆಗೆ ಒಂದು ಸ್ಥಳದಲ್ಲಿ ಜವಳಿ ಮೌಲ್ಯ ಸರಪಳಿಯನ್ನು ರಚಿಸಲು ಒಂದು ಅವಕಾಶವನ್ನು ನೀಡುತ್ತದೆ" ಎಂದು ಜವಳಿ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ

PM MITRA ₹4,445 ಕೋಟಿ ವೆಚ್ಚದಲ್ಲಿ 7 ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ
ಪಿಯೂಷ್ ಗೋಯಲ್

ದೆಹಲಿ: ಐದು ವರ್ಷಗಳಲ್ಲಿ ಒಟ್ಟು 4,445 ಕೋಟಿ ರೂ. ವೆಚ್ಚದಲ್ಲಿ ಏಳು ಪ್ರಧಾನಿ ಮೆಗಾ ಇಂಟಿಗ್ರೇಟೆಡ್ ಜವಳಿ ಪ್ರದೇಶ ಮತ್ತು ಉಡುಪುಗಳ (PM MITRA) ಉದ್ಯಾನವನಗಳ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ” ಪಿಎಂ ಮಿತ್ರ (PM MITRA) ನೂಲುವ, ನೇಯ್ಗೆ, ಸಂಸ್ಕರಣೆ/ಡೈಯಿಂಗ್ ಮತ್ತು ಮುದ್ರಣದಿಂದ ಹಿಡಿದು ಬಟ್ಟೆ ತಯಾರಿಕೆವರೆಗೆ ಒಂದು ಸ್ಥಳದಲ್ಲಿ ಜವಳಿ ಮೌಲ್ಯ ಸರಪಳಿಯನ್ನು ರಚಿಸಲು ಒಂದು ಅವಕಾಶವನ್ನು ನೀಡುತ್ತದೆ” ಎಂದು ಜವಳಿ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಇದು ಉದ್ಯಮದ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ  ಸರ್ಕಾರದ ಈ  ನಿರ್ಧಾರವು ಮೋದಿಯವರ  5 ಎಫ್ ವಿಷನ್​​ನಿಂದ ಸ್ಫೂರ್ತಿ ಪಡೆದಿದೆ. ಅಂದರೆ – ಫಾರ್ಮ್ ಟು ಫೈಬರ್ ಟು ಫ್ಯಾಕ್ಟರಿ ಟು ಫ್ಯಾಶನ್ ಟು ಫಾರಿನ್ ಎಂದು ಸಚಿವರು ಹೇಳಿದ್ದಾರೆ.

ಜವಳಿಗಳ ಸಂಪೂರ್ಣ ಮೌಲ್ಯ ಸರಪಳಿಯು ದೇಶದ ವಿವಿಧ ಭಾಗಗಳಲ್ಲಿ ಚದುರಿಹೋಗಿ ವಿಭಜನೆಯಾಗಿರುವಾಗ ಗೋಯಲ್ ಹೇಳಿಕೆಯು ಪ್ರಸ್ತುತ ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತದೆ.
ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಹತ್ತಿ ಬೆಳೆದರೆ, ತಮಿಳುನಾಡಿನಲ್ಲಿ ನೂಲುವಿಕೆ ನಡೆಯುತ್ತದೆ. ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಸಂಸ್ಕರಣೆ ನಡೆಯುತ್ತದೆ. ಎನ್‌ಸಿಆರ್, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಸಂಗ್ರಹಣೆ ನಡೆದರೆ ಮುಂಬೈ ಮತ್ತು ಕಾಂಡ್ಲಾದಿಂದ ರಫ್ತು ಮಾಡಲಾಗುತ್ತದೆ.

2021-22ರ ಬಜೆಟ್‌ನಲ್ಲಿ ಮೊದಲು ಘೋಷಿಸಿದ ಪ್ರತಿ ಪಾರ್ಕ್ ಸುಮಾರು 1 ಲಕ್ಷ ನೇರ ಮತ್ತು 2 ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ. 7 ಮಿತ್ರ ಪಾರ್ಕ್‌ಗಳನ್ನು ಗ್ರೀನ್‌ಫೀಲ್ಡ್ ಮತ್ತು ಬ್ರೌನ್‌ಫೀಲ್ಡ್ ಸೈಟ್‌ಗಳಲ್ಲಿ ಸ್ಥಾಪಿಸಲಾಗುವುದು.


ತಮಿಳುನಾಡು, ಪಂಜಾಬ್, ಒಡಿಶಾ, ಆಂಧ್ರಪ್ರದೇಶ, ಗುಜರಾತ್, ರಾಜಸ್ಥಾನ, ಅಸ್ಸಾಂ, ಕರ್ನಾಟಕ, ಮಧ್ಯಪ್ರದೇಶ ಮತ್ತು ತೆಲಂಗಾಣಗಳು ಆಸಕ್ತಿಯನ್ನು ವ್ಯಕ್ತಪಡಿಸಿವೆ ಮತ್ತು ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ಚಾಲೆಂಜ್ ವಿಧಾನದ ಮೂಲಕ ಉದ್ಯಾನವನಗಳಿಗೆ ಸ್ಥಳಗಳನ್ನು ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: Svamitva Yojana ಸ್ವಾಮಿತ್ವ ಯೋಜನೆ ಗ್ರಾಮೀಣ ಆರ್ಥಿಕತೆಯ ಬಲ ಹೆಚ್ಚಿಸಿದ್ದು, ರಾಷ್ಟ್ರ ಮಟ್ಟದಲ್ಲಿ ಜಾರಿಗೊಳಿಸಲಾಗುವುದು: ಪ್ರಧಾನಿ ಮೋದಿ

Read Full Article

Click on your DTH Provider to Add TV9 Kannada