Indian Railways Bonus: ದೆಹಲಿ: 2020-21ರ ಆರ್ಥಿಕ ವರ್ಷದಲ್ಲಿ ಆರ್‌ಪಿಎಫ್/ಆರ್‌ಪಿಎಸ್‌ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ ಭಾರತೀಯ ರೈಲ್ವೆಯ ಅರ್ಹ ನಾನ್-ಗೆಜೆಟೆಡ್ ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸಮನಾದ ಪ್ರೊಡಕ್ಟಿವಿಟಿ ಆಧಾರಿತ ಬೋನಸ್ (PLB) ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಕೇಂದ್ರ ಸಚಿವ ಸಂಪುಟ ತೆಗೆದುಕೊಂಡಿರುವ ಪ್ರಮುಖ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ವಿವರಿಸಿದ ಕೇಂದ್ರ ಸಚಿವ ಅನುರಾಗ್ ಠಾಕೂರ್(Anurag Thakur) ಈ ಕ್ರಮದಿಂದ 11.56 ಲಕ್ಷ ನಾನ್-ಗೆಜೆಟೆಡ್ ರೈಲ್ವೇ ಸಿಬ್ಬಂದಿ ಲಾಭ ಪಡೆಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
“2020-21ನೇ ಹಣಕಾಸು ವರ್ಷಕ್ಕೆ ಅರ್ಹವಾದ ನಾನ್-ಗೆಜೆಟೆಡ್ ರೈಲ್ವೇ ಉದ್ಯೋಗಿಗಳಿಗೆ (RPF/RPSF ಸಿಬ್ಬಂದಿ ಹೊರತುಪಡಿಸಿ) 78 ದಿನಗಳ ವೇತನಕ್ಕೆ ಸಮನಾದ ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ ಅನ್ನು ಸಂಪುಟ ಅನುಮೋದಿಸಿದೆ. ಸುಮಾರು 11.56 ಲಕ್ಷ ನಾನ್-ಗೆಜೆಟೆಡ್ ರೈಲ್ವೇ ಉದ್ಯೋಗಿಗಳು ಈ ನಿರ್ಧಾರದಿಂದ ಪ್ರಯೋಜನ ಪಡೆಯುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಸಂಪುಟ ಸಭೆಯ ನಂತರ ಹೇಳಿದೆ.
ಅರ್ಹ ನಾನ್-ಗೆಜೆಟೆಡ್ ರೈಲ್ವೇ ಉದ್ಯೋಗಿಗಳಿಗೆ ಪಿಎಲ್‌ಬಿ ಪಾವತಿಗೆ ಸೂಚಿಸಲಾದ ವೇತನ ಲೆಕ್ಕಾಚಾರದ ಸೀಲಿಂಗ್ ತಿಂಗಳಿಗೆ 7,000 ರೂ. ಅರ್ಹ ರೈಲ್ವೆ ಉದ್ಯೋಗಿಗೆ ಪಾವತಿಸಬಹುದಾದ ಗರಿಷ್ಠ ಮೊತ್ತವು 78 ದಿನಗಳವರೆಗೆ 17,951 ರೂ. ಆಗಿದೆ. ಪಿಎಲ್‌ಬಿ ಮೊತ್ತದ 78 ದಿನಗಳ ವೇತನವನ್ನು 2010-11 ರಿಂದ 2019-20ರ ಹಣಕಾಸು ವರ್ಷಗಳಿಗೆ ಪಾವತಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
2019-20ರಲ್ಲಿ, ಭಾರತೀಯ ರೈಲ್ವೇಸ್ ತನ್ನ ಸುಮಾರು 11.58 ಲಕ್ಷ ನಾನ್-ಗೆಜೆಟೆಡ್ ಉದ್ಯೋಗಿಗಳಿಗೆ 78 ದಿನಗಳ ಬೋನಸ್ ಮೊತ್ತ ಒಟ್ಟು 2,081.68 ಕೋಟಿ ನೀಡಿತ್ತು. ಕಳೆದ ವರ್ಷ ಭಾರತೀಯ ರೈಲ್ವೇ ಬೋನಸ್ ಪಾವತಿಗೆ ಸೂಚಿಸಲಾದ ವೇತನ ಲೆಕ್ಕಾಚಾರದ ಸೀಲಿಂಗ್ ಅನ್ನು ತಿಂಗಳಿಗೆ 7,000 ರೂ. ಅರ್ಹ ರೈಲ್ವೆ ಉದ್ಯೋಗಿಗೆ ಪಾವತಿಸಬಹುದಾದ ಗರಿಷ್ಠ ಮೊತ್ತವನ್ನು 78 ದಿನಗಳವರೆಗೆ 17,951 ರೂ.ನಿಗದಿ ಪಡಿಸಲಾಗಿತ್ತು.
ರೈಲ್ವೆಯಲ್ಲಿನ ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ ಗೆಜೆಟೆಡ್ ಅಲ್ಲದ ಎಲ್ಲಾ ರೈಲ್ವೇ ಉದ್ಯೋಗಿಗಳನ್ನು (RPF/RPSF ಸಿಬ್ಬಂದಿಯನ್ನು ಹೊರತುಪಡಿಸಿ) ಇಡೀ ದೇಶದಲ್ಲಿ ವ್ಯಾಪಿಸಿದೆ. ಅರ್ಹ ರೈಲ್ವೆ ಉದ್ಯೋಗಿಗಳಿಗೆ ಪಿಎಲ್‌ಬಿ ಪಾವತಿಯನ್ನು ಪ್ರತಿವರ್ಷ ದಸರಾ/ದುರ್ಗಾ ಪೂಜೆಯ ರಜಾದಿನಗಳ ಮೊದಲು ನೀಡಲಾಗುತ್ತದೆ.
ಇದನ್ನೂ ಓದಿ: PM MITRA ₹4,445 ಕೋಟಿ ವೆಚ್ಚದಲ್ಲಿ 7 ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ