ಬಿಭವ್ ಕುಮಾರ್​​ಗೆ ಜಾಮೀನು ಸಿಕ್ಕಿದ ಬೆನ್ನಲ್ಲೇ ದ್ರೌಪದಿ ವಸ್ತ್ರಾಹರಣದ ಚಿತ್ರ ಪೋಸ್ಟ್ ಮಾಡಿದ ಸ್ವಾತಿ ಮಲಿವಾಲ್

|

Updated on: Sep 03, 2024 | 4:44 PM

ಮೇ 13 ರಂದು, ಮುಖ್ಯಮಂತ್ರಿಯ ಸಿವಿಲ್ ಲೈನ್ಸ್ ನಿವಾಸದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಾಜಿ ಆಪ್ತ ಸಹಾಯಕ ಬಿಭವ್ ಕುಮಾರ್ ಅವರು ಮಲಿವಾಲ್ ಮೇಲೆ ಹಲ್ಲೆ ನಡೆಸಿದ್ದರು. ಕೆಲವು ದಿನಗಳ ನಂತರ, ಅವರನ್ನು ಕೇಜ್ರಿವಾಲ್ ಅವರ ಮನೆಯಿಂದ ಪೊಲೀಸರು ಬಂಧಿಸಿದರು. ಈ ಪ್ರಕರಣದಲ್ಲಿ ಬಿಭವ್ ಕುಮಾರ್‌ಗೆ ಸುಪ್ರೀಂಕೋರ್ಟ್ ಸೋಮವಾರ ಜಾಮೀನು ನೀಡಿತ್ತು.

ಬಿಭವ್ ಕುಮಾರ್​​ಗೆ ಜಾಮೀನು ಸಿಕ್ಕಿದ ಬೆನ್ನಲ್ಲೇ ದ್ರೌಪದಿ ವಸ್ತ್ರಾಹರಣದ ಚಿತ್ರ ಪೋಸ್ಟ್ ಮಾಡಿದ ಸ್ವಾತಿ ಮಲಿವಾಲ್
ಸ್ವಾತಿ ಮಲಿವಾಲ್
Follow us on

ದೆಹಲಿ ಸೆಪ್ಟೆಂಬರ್ 03: ಬಿಭವ್ ಕುಮಾರ್‌ಗೆ (Bibhav Kumar) ಸುಪ್ರೀಂಕೋರ್ಟ್ (Supreme Court) ಜಾಮೀನು ನೀಡಿದ ಒಂದು ದಿನದ ನಂತರ, ಆಮ್ ಆದ್ಮಿ ಪಕ್ಷದ (AAP) ನಾಯಕಿ ಸ್ವಾತಿ ಮಲಿವಾಲ್ ಅವರು ಮಂಗಳವಾರ ದ್ರೌಪದಿಯ ವಸ್ತ್ರಾಹರಣ ಮಾಡಲು ದುಶ್ಶಾಸನ ಪ್ರಯತ್ನಿಸುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ಚಿತ್ರವನ್ನು ಮಾತ್ರ ಮಲಿವಾಲ್ ಪೋಸ್ಟ್ ಮಾಡಿದ್ದು, ಅವರು ಬೇರೇನೂ ಬರೆದಿಲ್ಲ.  ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ, ದುಶ್ಶಾಸನನು ದ್ರೌಪದಿಯನ್ನು ವಸ್ತ್ರಾಪಹರಣ ಮಾಡಲು ಪ್ರಯತ್ನಿಸುತ್ತಾನೆ. ಆದರೆ ಕೌರವರ ವಿರುದ್ಧದ ಯುದ್ಧದಲ್ಲಿ ಪಾಂಡವರಿಗೆ ಮಾರ್ಗದರ್ಶನ ನೀಡುವ ಭಗವಾನ್ ಕೃಷ್ಣನ ದೈವಿಕ ಹಸ್ತಕ್ಷೇಪದಿಂದ ದ್ರೌಪದಿಯನ್ನು ರಕ್ಷಿಸುತ್ತಾನೆ.

ಮೇ 13 ರಂದು, ಮುಖ್ಯಮಂತ್ರಿಯ ಸಿವಿಲ್ ಲೈನ್ಸ್ ನಿವಾಸದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಾಜಿ ಆಪ್ತ ಸಹಾಯಕ ಬಿಭವ್ ಕುಮಾರ್ ಅವರು ಮಲಿವಾಲ್ ಮೇಲೆ ಹಲ್ಲೆ ನಡೆಸಿದ್ದರು. ಕೆಲವು ದಿನಗಳ ನಂತರ, ಅವರನ್ನು ಕೇಜ್ರಿವಾಲ್ ಅವರ ಮನೆಯಿಂದ ಪೊಲೀಸರು ಬಂಧಿಸಿದರು.

ಸ್ವಾತಿ ಮಲಿವಾಲ್  ಪೋಸ್ಟ್


ಏತನ್ಮಧ್ಯೆ, ತನ್ನ ಜಾಮೀನು ಆದೇಶದಲ್ಲಿ, ಪ್ರಕರಣದ ಎಲ್ಲಾ ಪ್ರಮುಖ ಸಾಕ್ಷಿಗಳನ್ನು ವಿಚಾರಣೆ ಮಾಡುವವರೆಗೆ ಕುಮಾರ್ ಅವರು ಸಿಎಂ ನಿವಾಸಕ್ಕೆ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ನಿರ್ಬಂಧಿಸಿದೆ. ಹೆಚ್ಚುವರಿಯಾಗಿ, ‘ದುರ್ಬಲ’ ಸಾಕ್ಷಿಗಳನ್ನು ಪರೀಕ್ಷಿಸುವವರೆಗೆ ಅವರು ಪ್ರಕರಣದ ಕುರಿತು ಬಿಭವ್ ಕುಮಾರ್ ಏನೂ ಮಾತನಾಡುವಂತಿಲ್ಲ

ತನ್ನ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್), ಮಲಿವಾಲ್, ಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ‘ನನ್ನ ಘನತೆಗೆ ಘಾಸಿ ಮಾಡಿದ್ದಾರೆ. ನನಗೆ ಕಪಾಳಮೋಕ್ಷ ಮಾಡಿದ್ದಾರೆ. ನೆಲದ ಮೇಲೆ ಬಿದ್ದಾಗ ಒದ್ದು ನನಗೆ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Naxal Encounter: ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌; 9 ನಕ್ಸಲರ ಹತ್ಯೆ

‘ಯಾವುದೇ ಪ್ರಚೋದನೆ ಇಲ್ಲದೇ ನನಗೆ 7-8 ಬಾರಿ ಕಪಾಳಮೋಕ್ಷ ಮಾಡಿದರು. ನನ್ನ ಮೇಲೆ ಹಲ್ಲೆ ನಡೆಸಿದರು. ನನ್ನ ಎದೆ ಮತ್ತು ಸೊಂಟಕ್ಕೆ ಒದೆದಿದ್ದಾರೆ. ಉದ್ದೇಶಪೂರ್ವಕವಾಗಿ ನನ್ನ ಅಂಗಿಯನ್ನು ಎಳೆದರು’ ಎಂದು ಅವರು ಕುಮಾರ್ ವಿರುದ್ಧ ಆರೋಪಿಸಿದರು.

ಮಲಿವಾಲ್ ಎಎಪಿಯಿಂದ ರಾಜ್ಯಸಭೆಯ ಸದಸ್ಯರಾಗಿದ್ದಾರೆ ಮತ್ತು ಈ ಹಿಂದೆ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥರಾಗಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ