Swati Maliwal case: ಸ್ವಾತಿ ಮಲಿವಾಲ್ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್‌ಗೆ ಸುಪ್ರೀಂಕೋರ್ಟ್ ಜಾಮೀನು

ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಸೋಮವಾರ ಜಾಮೀನು ಮಂಜೂರು ಮಾಡಿದ ಸುಪ್ರೀಂಕೋರ್ಟ್, ಪ್ರಕರಣದ ಎಲ್ಲಾ ಪ್ರಮುಖ ಸಾಕ್ಷಿಗಳನ್ನು ವಿಚಾರಣೆ ಮಾಡುವವರೆಗೆ ಬಿಭವ್  ಕುಮಾರ್ ಅವರು ಸಿಎಂ ಆಪ್ತ ಕಾರ್ಯದರ್ಶಿ ಹುದ್ದೆಯನ್ನು ಪುನರಾರಂಭಿಸದಂತೆ ಅಥವಾ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದೆ.

Swati Maliwal case: ಸ್ವಾತಿ ಮಲಿವಾಲ್ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್‌ಗೆ ಸುಪ್ರೀಂಕೋರ್ಟ್ ಜಾಮೀನು
ಬಿಭವ್ ಕುಮಾರ್
Follow us
|

Updated on:Sep 02, 2024 | 4:44 PM

ದೆಹಲಿ ಸೆಪ್ಟೆಂಬರ್ 02: ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ (Swati Maliwal) ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ನಿಕಟವರ್ತಿ ಬಿಭವ್ ಕುಮಾರ್ (Bibhav Kumar) ಅವರಿಗೆ ಸುಪ್ರೀಂಕೋರ್ಟ್ (Supreme Court) ಇಂದು (ಸೋಮವಾರ) ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಎಲ್ಲಾ ಪ್ರಮುಖ ಸಾಕ್ಷಿಗಳನ್ನು ವಿಚಾರಣೆ ಮಾಡುವವರೆಗೆ ಕುಮಾರ್ ಅವರು ಸಿಎಂ ಆಪ್ತ ಕಾರ್ಯದರ್ಶಿ ಹುದ್ದೆಯನ್ನು ಪುನರಾರಂಭಿಸದಂತೆ ಅಥವಾ ಸಿಎಂ ನಿವಾಸಕ್ಕೆ ಪ್ರವೇಶಿಸದಂತೆ ಸುಪ್ರೀಂಕೋರ್ಟ್ ನಿರ್ಬಂಧಿಸಿದೆ.

ಸಾಕ್ಷಿಗಳನ್ನು ಪರೀಕ್ಷಿಸುವವರೆಗೆ ಪ್ರಕರಣದ ವಿರುದ್ಧ ಮಾತನಾಡದಂತೆ ನ್ಯಾಯಾಲಯವು ಬಿಭವ್ ಕುಮಾರ್ ಗೆ ಹೇಳಿದೆ. ಈ ಪ್ರಕ್ರಿಯೆಯನ್ನು 3 ವಾರಗಳಲ್ಲಿ ಪೂರ್ಣಗೊಳಿಸಲು ನ್ಯಾಯಾಲಯವು ವಿಚಾರಣಾ ನ್ಯಾಯಾಲಯವನ್ನು ಕೇಳಿದೆ ಮತ್ತು ಯಾವುದೇ ಅಧಿಕೃತ ಸ್ಥಾನವನ್ನು ವಹಿಸಿಕೊಳ್ಳದಂತೆ ಕುಮಾರ್ ಅವರನ್ನು ನಿರ್ಬಂಧಿಸಿದೆ.

ಮೇ 18 ರಂದು ಬಂಧಿತರಾಗಿದ್ದ ಬಿಭವ್ ಕುಮಾರ್‌ಗೆ 100 ದಿನಗಳ ನಂತರ ಜಾಮೀನು ಸಿಕ್ಕಿದೆ

ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಮೇ 18 ರಂದು ಕೇಜ್ರಿವಾಲ್ ಅವರ ನಿವಾಸದಿಂದ ಕುಮಾರ್ ಅವರನ್ನು ಬಂಧಿಸಿದ್ದರು.

ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್), ಕುಮಾರ್ ಯಾವುದೇ ಪ್ರಚೋದನೆಯಿಲ್ಲದೆ ತನ್ನ ಮೇಲೆ 7-8 ಬಾರಿ ಹಲ್ಲೆ ಮಾಡಿದ್ದಾನೆ. ನನ್ನ ಎದೆ ಮತ್ತು ಸೊಂಟಕ್ಕೆ ಒದ್ದು, ನಿಂದಿಸಿದ್ದಾನೆ. ಮೇ 13 ರಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಈ ಘಟನೆಯಲ್ಲಿ  ತನ್ನ ಅಂಗಿಯನ್ನು ಎಳೆದು ಹಲ್ಲೆ ನಡೆಸಿರುವುದಾಗಿ  ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ.

ಈ ಹಿಂದೆ, ಸ್ವಾತಿ ಮಲಿವಾಲ್  ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ತನ್ನ ವಿರುದ್ಧ ಹಲ್ಲೆ ಆರೋಪಗಳನ್ನು ಮಾಡಿದ ನಂತರ ತನ್ನನ್ನು “ವಿಲನ್” ಮತ್ತು ಮುಖ್ಯಮಂತ್ರಿಯ ಆಪ್ತರನ್ನು “ಹೀರೋ” ಎಂದು ಬಿಂಬಿಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: Vaishno Devi Shrine: ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇಗುಲದ ಬಳಿ ಭೂಕುಸಿತ; ಇಬ್ಬರು ಮಹಿಳಾ ಯಾತ್ರಾರ್ಥಿಗಳು ಸಾವು

39 ವರ್ಷದ ಮಲಿವಾಲ್ ಅವರು ಪಕ್ಷದಿಂದ ಅವಮಾನಿತರಾಗಿದ್ದಾರೆ ಎಂದು ಆರೋಪಿಸಿದರು, ನಾನು ಈ ಹೋರಾಟದಲ್ಲಿ ಏಕಾಂಗಿಯಾಗಿದ್ದೇನೆ ಎಂದಿದ್ದಾರೆ.

ಮುಖ್ಯಮಂತ್ರಿ ನಿವಾಸದಲ್ಲಿ ಹಲ್ಲೆ ನಡೆದ ಒಂದು ದಿನದ ನಂತರ, ಮೇ 14 ರಂದು ಬಿಭವ್ ಕುಮಾರ್ ವಿರುದ್ಧ ಸಂಸದರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಒಂದು ದಿನದ ನಂತರ, ಬಿಭವ್ ಕುಮಾರ್ ಅವರು ಪೊಲೀಸರಿಗೆ ಪ್ರತಿ-ದೂರು ದಾಖಲಿಸಿದರು. ಅದರಲ್ಲಿ ಮಲಿವಾಲ್ ಅವರು ಸಿಎಂ ಸಿವಿಲ್ ಲೈನ್ಸ್ ನಿವಾಸಕ್ಕೆ ‘ಅನಧಿಕೃತ ಪ್ರವೇಶ’ ಮಾಡಿದ್ದು  ‘ಮಾತಿನಲ್ಲಿ ನಿಂದಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Mon, 2 September 24