AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vaishno Devi Shrine: ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇಗುಲದ ಬಳಿ ಭೂಕುಸಿತ; ಇಬ್ಬರು ಮಹಿಳಾ ಯಾತ್ರಾರ್ಥಿಗಳು ಸಾವು

ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋದೇವಿ ದೇಗುಲಕ್ಕೆ ಹೋಗುವ ಟ್ರ್ಯಾಕ್‌ನಲ್ಲಿ ಇಂದು ಸಂಭವಿಸಿದ ಭೂಕುಸಿತದ ನಂತರ ಇಬ್ಬರು ಮಹಿಳಾ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಒಬ್ಬಳು ಬಾಲಕಿಗೆ ತೀವ್ರ ಗಾಯಗಳಾಗಿವೆ.

Vaishno Devi Shrine: ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇಗುಲದ ಬಳಿ ಭೂಕುಸಿತ; ಇಬ್ಬರು ಮಹಿಳಾ ಯಾತ್ರಾರ್ಥಿಗಳು ಸಾವು
ವೈಷ್ಣೋದೇವಿ ಯಾತ್ರೆಗೆ ಸಾಲಿನಲ್ಲಿ ನಿಂತ ಭಕ್ತರು
ಸುಷ್ಮಾ ಚಕ್ರೆ
|

Updated on: Sep 02, 2024 | 4:30 PM

Share

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಇಂದು (ಸೋಮವಾರ) ಸಂಭವಿಸಿದ ಭೂಕುಸಿತದ ನಂತರ ಇಬ್ಬರು ಮಹಿಳಾ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಓರ್ವ ಬಾಲಕಿಗೆ ತೀವ್ರ ಗಾಯಗಳಾಗಿವೆ. ಶ್ರೀ ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯ ವಿಪತ್ತು ನಿರ್ವಹಣಾ ತಂಡವು ಸ್ಥಳಕ್ಕೆ ತಲುಪಿದೆ ಎಂದು ಶ್ರೀ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ ಸಿಇಒ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ಮಾತಾ ವೈಷ್ಣೋ ದೇವಿ ಟ್ರ್ಯಾಕ್‌ನಲ್ಲಿ ಭೂಕುಸಿತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ, ಮತ್ತೊಬ್ಬರು ಗಾಯಗೊಂಡಿದ್ದಾರೆ. ಈ ಸ್ಥಳದಿಂದ ಸಂಗ್ರಹಿಸಲಾದ ಸಿಸಿಟಿವಿ ವಿಡಿಯೋ ಮಾರ್ಗದಲ್ಲಿ ಬಿದ್ದ ಅವಶೇಷಗಳನ್ನು ತೋರಿಸಿದೆ.

ಈ ಘಟನೆಯನ್ನು ದೃಢಪಡಿಸಿದ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿ, ವಿಪತ್ತು ನಿರ್ವಹಣೆಯ ತಂಡವು ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ತಲುಪಿದೆ ಎಂದು ಹೇಳಿದೆ. ಶ್ರೀ ಮಾತಾ ವೈಷ್ಣೋದೇವಿ ದೇಗುಲದ ಟ್ರ್ಯಾಕ್‌ನಲ್ಲಿ ಕಲ್ಲುಗಳು ಉರುಳಿ, ಭೂಕುಸಿತ ಸಂಭವಿಸಿದೆ. ಹವಾಮಾನ ಇಲಾಖೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 12ರವರೆಗೆ ಜಮ್ಮು ಕಾಶ್ಮೀರದಲ್ಲಿ ಶುಷ್ಕ ಹವಾಮಾನವನ್ನು ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: 530 ವರ್ಷಗಳ ಹಿಂದಿನ ಪ್ರತಿಜ್ಞೆ; ಈ ಗ್ರಾಮದ ಜನರು ಮಾಂಸಾಹಾರ ತಿನ್ನೋದಿಲ್ಲ, ಡ್ರಗ್ಸ್ ಸೇವಿಸಲ್ಲ

ಕೇಂದ್ರಾಡಳಿತ ಪ್ರದೇಶವು ಕೆಲವು ದಿನಗಳಲ್ಲಿ ಪ್ರತ್ಯೇಕ ಭಾಗಗಳಲ್ಲಿ ಅಲ್ಪಾವಧಿಯ ಮಳೆಗೆ ಸಾಕ್ಷಿಯಾಗಲಿದೆ. ಇಂದು ಮುಂಜಾನೆ, ಭಾರೀ ಮಳೆಯಿಂದ ಉಂಟಾದ ಭೂಕುಸಿತಗಳು ಉತ್ತರಾಖಂಡದ ಚಮೋಲಿ ಜಿಲ್ಲೆಯ ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯನ್ನು ಹಲವಾರು ಕಡೆಗಳಲ್ಲಿ ನಿರ್ಬಂಧಿಸಿವೆ.

ಇದನ್ನೂ ಓದಿ: ಪತ್ನಿಯ ಕೊಲೆ ಮಾಡಿ, ಶವವನ್ನು ಕಾರಿನಲ್ಲಿಟ್ಟು ಓಡಿ ಹೋಗಲು ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ

ಪಗಲ್ನಾಳ, ಪಾತಾಳಗಂಗಾ ಮತ್ತು ನಂದಪ್ರಯಾಗದಲ್ಲಿ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ಅದನ್ನು ಮತ್ತೆ ತೆರೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರವು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದೆ. ಸಿಮ್ಲಿ ಮಾರುಕಟ್ಟೆಯ 7 ಅಂಗಡಿಗಳು ಭೂಕುಸಿತದಿಂದ ಹಾನಿಗೊಳಗಾಗಿವೆ ಎಂದು ಅದು ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ