Kannada News National Tajinder Pal Singh Bagga Punjab and Haryana High Court directed No coercive steps till May 10
Tajinder Bagga Arrest ಬಂಧನದಿಂದ ರಕ್ಷಣೆ ನೀಡಿದ್ದಕ್ಕಾಗಿ ಪಂಜಾಬ್ ಹೈಕೋರ್ಟ್‌ಗೆ ಧನ್ಯವಾದ ಅರ್ಪಿಸಿದ ತಜೀಂದರ್ ಬಗ್ಗಾ
ತಜೀಂದರ್ ಸಿಂಗ್ ಬಗ್ಗಾ ಅವರು ಮೊಹಾಲಿ ನ್ಯಾಯಾಲಯವು ಹೊರಡಿಸಿದ ಬಂಧನ ವಾರಂಟ್‌ನಲ್ಲಿ ತನಗೆ ಒದಗಿಸಿದ ತಾತ್ಕಾಲಿಕ ರಿಲೀಫ್ಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ಧನ್ಯವಾದ ಸಲ್ಲಿಸಿದ್ದಾರೆ.
ತಜೀಂದರ್ ಬಗ್ಗಾ
Follow us on
ದೆಹಲಿ: ಮೊಹಾಲಿ ನ್ಯಾಯಾಲಯವು ಹಿಂದಿನ ದಿನ ಹೊರಡಿಸಿದ ಬಂಧನ ವಾರಂಟ್‌ಗೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿರುವ ತಜೀಂದರ್ ಪಾಲ್ ಸಿಂಗ್ ಬಗ್ಗಾ (Tajinder Pal Singh Bagga)ವಿರುದ್ಧ ಯಾವುದೇ ದಬ್ಬಾಳಿಕೆಯ ಕ್ರಮಗಳನ್ನು ತೆಗೆದುಕೊಳ್ಳದಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್(Punjab and Haryana High Court) ನಿರ್ದೇಶನ ನೀಡಿದೆ. ಕಳೆದ ತಿಂಗಳು ಪಂಜಾಬ್ ಪೊಲೀಸರು ಅವರ ವಿರುದ್ಧ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಾಲಿ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದ ಕೆಲವೇ ಗಂಟೆಗಳ ನಂತರ, ಬಗ್ಗಾ ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಅನೂಪ್ ಚಿತ್ಕಾರ ಅವರು ಮಧ್ಯರಾತ್ರಿಯ ಮೊದಲು ಅವರ ನಿವಾಸದಲ್ಲಿ ತುರ್ತು ವಿಚಾರಣೆಯಲ್ಲಿ ಬಗ್ಗಾ ಅವರ ಅರ್ಜಿಯನ್ನು ಕೈಗೆತ್ತಿಕೊಂಡರು. ಮೇ 10 ರವರೆಗೆ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಬಗ್ಗಾ ಅವರ ವಕೀಲ ಚೇತನ್ ಮಿತ್ತಲ್ ಹೈಕೋರ್ಟ್ ಆದೇಶದ ಕುರಿತು ಹೇಳಿದ್ದಾರೆ. ತಜೀಂದರ್ ಸಿಂಗ್ ಬಗ್ಗಾ ಅವರು ಮೊಹಾಲಿ ನ್ಯಾಯಾಲಯವು ಹೊರಡಿಸಿದ ಬಂಧನ ವಾರಂಟ್‌ನಲ್ಲಿ ತನಗೆ ಒದಗಿಸಿದ ತಾತ್ಕಾಲಿಕ ರಿಲೀಫ್ಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ಧನ್ಯವಾದ ಸಲ್ಲಿಸಿದ್ದಾರೆ. ‘ಅರವಿಂದ ಕೇಜ್ರಿವಾಲ್ಗೆ (Arvind Kejriwal)ತುಂಬಾ ಭಯವಿತ್ತು ಅವರಿಗೆ ರಾತ್ರಿ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ದೆಹಲಿ ಸಿಎಂ ನನ್ನ ವಿರುದ್ಧ ಇಂತಹ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಬಗ್ಗಾ ಹೇಳಿದ್ದಾರೆ. ಏತನ್ಮಧ್ಯೆ, ಘಟನೆಯ ನಂತರ ಆಮ್ ಆದ್ಮಿ ಪಕ್ಷವು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, “ಇಡೀ ಬಿಜೆಪಿ ಒಬ್ಬ ಗೂಂಡಾ (ತಜೀಂದರ್ ಸಿಂಗ್ ಬಗ್ಗಾ) ಅವರನ್ನು ಕಾಪಾಡಲು ಪ್ರಯತ್ನಿಸುತ್ತಿದೆ. ಖಲಿಸ್ತಾನಿಗಳು ಹಿಮಾಚಲ ಪ್ರದೇಶದ ವಿಧಾನಸಭೆಯ ಆವರಣದಲ್ಲಿ ಅವರ ಧ್ವಜಗಳನ್ನು ಕಟ್ಟಿ ಹೊರಟು ಹೋದರು. ವಿಧಾನಸಭೆಯನ್ನು ಉಳಿಸಲು ಸಾಧ್ಯವಾಗದ ಸರ್ಕಾರವು ಜನರನ್ನು ಹೇಗೆ ಉಳಿಸುತ್ತದೆ? ಇದು ಹಿಮಾಚಲ ಪ್ರದೇಶಕ್ಕೆ ಗಂಭೀರ ವಿಷಯ. ಇದು ದೇಶದ ಭದ್ರತೆಯ ವಿಷಯವಾಗಿದೆ. ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೆಹಲಿಯ ಸಚಿವ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ಬಗ್ಗಾ ಪ್ರಕರಣದ ಈವರೆಗಿನ ಬೆಳವಣಿಗೆಗಳು
ಮೇ 10 ರಂದು, ಹೈಕೋರ್ಟ್ ಬಗ್ಗಾ ಅವರ ಅರ್ಜಿಯನ್ನು ಕೈಗೆತ್ತಿಕೊಳ್ಳಲಿದ್ದು, ಕಳೆದ ತಿಂಗಳು ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿದೆ. ಬಂಧನ ವಾರಂಟ್‌ಗೆ ನ್ಯಾಯಾಲಯ ತಡೆ ನೀಡಿದೆ ಎಂದು ಮಿತ್ತಲ್ ಹೇಳಿದ್ದಾರೆ. ಸುಮಾರು 45 ನಿಮಿಷಗಳ ಕಾಲ ವಿಚಾರಣೆ ನಡೆದಿದೆ. ಹಿಂದಿನ ದಿನ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ರಾವ್ತೇಶ್ ಇಂದರ್‌ಜಿತ್ ಸಿಂಗ್ ಅವರ ನ್ಯಾಯಾಲಯವು ಕಳೆದ ತಿಂಗಳು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗ್ಗಾ ವಿರುದ್ಧ ಬಂಧನ ವಾರಂಟ್ ಹೊರಡಿಸಿತು.
ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರಿಗೆ ಮೊಹಾಲಿ ಹೈಕೋರ್ಟ್ ಯಾವುದೇ ರಿಲೀಫ್ ನೀಡಿಲ್ಲ. ಬಂಧನದ ವಾರೆಂಟ್‌ಗೆ ನ್ಯಾಯಾಲಯ ತಡೆ ನೀಡಿಲ್ಲ. ಮೇ 10 ರಂದು ಬೆಳಿಗ್ಗೆ 11 ಗಂಟೆಯವರೆಗೆ ಬಗ್ಗಾ ಅವರನ್ನು ಬಂಧಿಸುವುದಿಲ್ಲ ಎಂದು ಪಂಜಾಬ್ ಪೊಲೀಸರು ನ್ಯಾಯಾಲಯದಲ್ಲಿ ಹೇಳಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಇದನ್ನೂ ಓದಿ
ತಜೀಂದರ್ ಸಿಂಗ್ ಬಗ್ಗಾ ಅವರ ಅಪ್ಪ ಪ್ರೀತ್‌ಪಾಲ್ ಸಿಂಗ್ ಬಗ್ಗಾ ಅವರು, ‘ನ್ಯಾಯಾಲಯ ವಾರಂಟ್ ಕುಟುಂಬವನ್ನು ಸಂಪರ್ಕಿಸದಂತೆ ಕೇಳಿರುವುದರಿಂದ ಬಗ್ಗಾ ಮನೆಯಲ್ಲಿಲ್ಲ ಎಂದಿದ್ದಾರೆ’. ತಾನು ಬಿಜೆಪಿಯ ಹಿರಿಯ ನಾಯಕತ್ವದೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದಿದ್ದಾರೆ.
“ತಜೀಂದರ್‌ಗೆ ಪಂಜಾಬ್ ಹೈಕೋರ್ಟ್‌ನಿಂದ ರಿಲೀಫ್ ಸಿಕ್ಕಿರುವುದು ನನಗೆ ಖುಷಿ ತಂದಿದೆ. ಪಂಜಾಬ್ ಸರ್ಕಾರ ಅವರನ್ನು ಅವಕಾಶ ಸಿಕ್ಕಿದರೆ ಎಳೆಯಲು ಬಯಸುತ್ತದೆ. ಅವರು ಎಫ್‌ಐಆರ್‌ಗಳನ್ನು ದಾಖಲಿಸುತ್ತಲೇ ಇರುತ್ತಾರೆ ಆದರೆ ನಾವು ನಿಲ್ಲಿಸುವುದಿಲ್ಲ, ಈ ಹೋರಾಟ ದೀರ್ಘಕಾಲ ಇರುತ್ತದೆ ಎಂದು ಪ್ರೀತ್‌ಪಾಲ್ ಸಿಂಗ್ ಬಗ್ಗಾ ಹೇಳಿದ್ದಾರೆ.
ತಜೀಂದರ್ ಪಾಲ್ ಸಿಂಗ್ ಬಗ್ಗಾ ವಿರುದ್ಧ ಪಂಜಾಬ್ ಪೊಲೀಸರನ್ನು ಕಳುಹಿಸಲಾಯಿತು. ರಾಜಕೀಯ ಅಸೂಯೆಯಿಂದಾಗಿ ಅವರು ಪದೇ ಪದೇ ಕೆಲವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ನಾವು ಇದರ ವಿರುದ್ಧ ಹೋರಾಡುತ್ತೇವೆ ಮತ್ತು ಸತ್ಯವನ್ನು ಗೆಲ್ಲುತ್ತೇವೆ ಎಂದು ಖಚಿತಪಡಿಸಿಕೊಳ್ಳುತ್ತೇವೆ ಎಂದು ದೆಹಲಿಯಲ್ಲಿ ಬಿಜೆಪಿ ನಾಯಕ ಆರ್.ಪಿ. ಸಿಂಗ್ ಹೇಳಿದ್ದಾರೆ.
ಬಿಜೆಪಿ ನಾಯಕ ತಜೀಂದರ್ ಸಿಂಗ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದಾಗ ಪೇಟ ಧರಿಸಲು ಅವಕಾಶ ನೀಡದಿರುವ ಬಗ್ಗೆ ಏಳು ದಿನಗಳಲ್ಲಿ ವರದಿ ನೀಡುವಂತೆ ನಾವು ಪಂಜಾಬ್ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇವೆ- ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಅಧ್ಯಕ್ಷ, ಇಕ್ಬಾಲ್ ಸಿಂಗ್ ಲಾಲ್ಪುರ
ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು, ದ್ವೇಷವನ್ನು ಉತ್ತೇಜಿಸುವುದು ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪದ ಮೇಲೆ ಪಂಜಾಬ್ ಪೊಲೀಸರು ತಜೀಂದರ್ ಪಾಲ್ ಸಿಂಗ್ ಬಗ್ಗಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮೊಹಾಲಿ ನಿವಾಸಿ ಎಎಪಿ ನಾಯಕ ಸನ್ನಿ ಅಹ್ಲುವಾಲಿಯಾ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಏಪ್ರಿಲ್ 1 ರಂದು ದಾಖಲಾದ ಎಫ್‌ಐಆರ್‌ನಲ್ಲಿ ಮಾರ್ಚ್ 30 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಹೊರಗೆ ಬಿಜೆಪಿ ಯುವ ಘಟಕದ ಪ್ರತಿಭಟನೆಯ ಭಾಗವಾಗಿದ್ದಾಗ ಬಗ್ಗಾ ಅವರ ಹೇಳಿಕೆಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ 153-ಎ (ಧರ್ಮ, ಜನಾಂಗ, ಸ್ಥಳ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 505 (ಯಾವುದೇ ಹೇಳಿಕೆ, ವದಂತಿ ಅಥವಾ ವರದಿಯನ್ನು ಮಾಡುವವರು, ಪ್ರಕಟಿಸುವ ಅಥವಾ ಪ್ರಸಾರ ಮಾಡುವವರು) ಮತ್ತು 506 (ಅಪರಾಧ ಬೆದರಿಕೆ) ಸೇರಿದಂತೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬಗ್ಗಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಗ್ಗಾ ಅವರನ್ನು ಶುಕ್ರವಾರ ಅವರ ದೆಹಲಿಯ ಮನೆಯಿಂದ ಪಂಜಾಬ್ ಪೊಲೀಸರು ಬಂಧಿಸಿದರು, ಪಂಜಾಬ್‌ಗೆ ಕರೆದೊಯ್ಯುತ್ತಿದ್ದಾಗ ಹರ್ಯಾಣದಲ್ಲಿ ತಡೆಯೊಡ್ಡಲಾಗಿತ್ತು. ನಂತರ ದೆಹಲಿ ಪೊಲೀಸರು ಬಗ್ಗಾವರನ್ನು ದೆಹಲಿಗೆ ಕರೆತಂದಿದ್ದರು.