ಚೆನ್ನೈ ಸೆಪ್ಟೆಂಬರ್ 07: ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರು ಸನಾತನ ಧರ್ಮದ (Sanatan Dharma) ಬಗ್ಗೆ ನೀಡಿದ ಹೇಳಿಕೆ ವಿವಾದ ತಣ್ಣಗಾಗುವ ಮೊದಲೇ ಡಿಎಂಕೆ ಸಂಸದ ಎ ರಾಜಾ (A Raja), ಸನಾತನ ಧರ್ಮವನ್ನು ಎಚ್‌ಐವಿ ಮತ್ತು ಕುಷ್ಠರೋಗಕ್ಕೆ ಹೋಲಿಸಿ ಸುದ್ದಿಯಾಗಿದ್ದಾರೆ. ಚೆನ್ನೈನಲ್ಲಿ ದ್ರಾವಿಡರ್ ಕಳಗಂ ಆಯೋಜಿಸಿದ್ದ ವಿಶ್ವಕರ್ಮ ಯೋಜನೆ ವಿರುದ್ಧದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜಾ, ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಕುರಿತು ಉದಯನಿಧಿ ಅವರ ಹೇಳಿಕೆಯು ತುಲನಾತ್ಮಕವಾಗಿ ಸೌಮ್ಯವಾಗಿದೆ.ಸನಾತನ ಮತ್ತು ವಿಶ್ವಕರ್ಮ ಯೋಜನೆಗಳು ಭಿನ್ನವಾಗಿಲ್ಲ. ಮಲೇರಿಯಾ, ಡೆಂಗ್ಯೂನಂತೆ ಸನಾತನ ಧರ್ಮ ತೊಲಗಬೇಕು ಎಂದು ಉದಯನಿಧಿ ಹೇಳಿದ್ದು ಸೌಮ್ಯವಾಗಿದೆ. ಈ ರೋಗಗಳು ಸಾಮಾಜಿಕ ಕಳಂಕವನ್ನು ಹೊಂದಿಲ್ಲ. ಎಚ್ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ಪಿಡುಗುಗಳನ್ನು ಸನಾತನ ಧರ್ಮದೊಂದಿಗೆ ಹೋಲಿಸಬೇಕು ಎಂದು ರಾಜಾ ಹೇಳಿದರು.
ಮಾಧ್ಯಮಗಳ ವರದಿಗಳ ಪ್ರಕಾರ, 60 ವರ್ಷದ ನಾಯಕ ರಾಜಾ ಅವರು , ಮಲೇರಿಯಾ ಮತ್ತು ಡೆಂಗ್ಯೂಗೆ ಸಂಬಂಧಿಸಿದ ಅಸಹ್ಯತೆಯ ಭಾವನೆ ಇಲ್ಲ ಅಥವಾ ಅವುಗಳನ್ನು ಸಾಮಾಜಿಕ ಪಿಡುಗು ಎಂದು ಪರಿಗಣಿಸಲಾಗಿಲ್ಲ. ಸನಾತನ ಧರ್ಮವನ್ನು ಒಂದು ರೋಗಕ್ಕೆ ಸಮಾನವಾದ ಸಾಮಾಜಿಕ ಅವಮಾನ ಎಂದು ಪರಿಗಣಿಸಬೇಕು ಎಂದು ಹೇಳಿರುವುದಾಗಿ ವರದಿಗಳು ಉಲ್ಲೇಖಿಸಿವೆ.
The attack on Sanatana Dharma by Dravidian Bigots continues unabated.
This time it is I.N.D.I. Alliance partner and DMK leader A Raja who compares Sanatana Dharma with Leprosy and AIDS.
It has become a habit of SLAVES to attack Sanatana Dharma just to stay relevant in the… pic.twitter.com/O0OXmFoRSJ
— C T Ravi 🇮🇳 ಸಿ ಟಿ ರವಿ (@CTRavi_BJP) September 7, 2023
ಪ್ರಧಾನಿ ಸಭೆ ಕರೆದು ನನಗೆ ಅನುಮತಿ ನೀಡಿದರೆ ಸಂಪುಟದ ಎಲ್ಲ ಸಚಿವರಿಗೆ ಉತ್ತರ ನೀಡಲು ನಾನು ಸಿದ್ಧನಿದ್ದೇನೆ. ನೀವು ನಿರ್ಧರಿಸಿದ ನಂತರ ‘ಸನಾತನ ಧರ್ಮ’ ಯಾವುದು ಎಂದು ನಾನು ವಿವರಿಸುತ್ತೇನೆ ಎಂದು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ರಾಜಾ ಹೇಳಿದ್ದಾರೆ.
ಕಳೆದ ಶನಿವಾರ ತಮಿಳುನಾಡಿನಲ್ಲಿ ಸಚಿವ ಉದಯನಿಧಿ ಸ್ಟಾಲಿನ್ ಸಮಾನತೆಯನ್ನು ಸ್ಥಾಪಿಸಲು ಸನಾತನ ಧರ್ಮವನ್ನು (ಹಿಂದೂ ಧರ್ಮದಲ್ಲಿ ನಿಷೇಧಿಸಲಾಗಿರುವ ಕರ್ತವ್ಯಗಳು ಮತ್ತು ಜೀವನ ವಿಧಾನ) ನಿರ್ಮೂಲನೆಗೆ ಕರೆ ನೀಡಿದ ವಿಡಿಯೊ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ, ರಾಜಕೀಯ ವಲಯದಲ್ಲಿ ಭಾರೀ ವಾದ- ವಿವಾದಗಳು ನಡೆದಿವೆ.
ಇದನ್ನೂ ಓದಿ:ಉದಯನಿಧಿ ಅವರ ‘ಸನಾತನ ಧರ್ಮ’ ಹೇಳಿಕೆಯನ್ನು ಸಮರ್ಥಿಸಿಕೊಂಡ ತಮಿಳುನಾಡು ಸಿಎಂ ಸ್ಟಾಲಿನ್
ಚೆನ್ನೈನಲ್ಲಿ ತಮಿಳುನಾಡು ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉದಯನಿಧಿ ಸ್ಟಾಲಿನ್ ತಮಿಳಿನಲ್ಲಿ ಹೇಳಿದ್ದು ಹೀಗೆ: “ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅವುಗಳನ್ನು ರದ್ದುಗೊಳಿಸಬೇಕು. ನಾವು ಡೆಂಗ್ಯೂ, ಸೊಳ್ಳೆಗಳು ಅಥವಾ ಕೊರೊನಾವನ್ನು(ಕೋವಿಡ್-19) ತಡೆಯಲು ಸಾಧ್ಯವಿಲ್ಲ. ನಾವು ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ಸನಾತನ (ಧರ್ಮ)ವನ್ನು ನಿರ್ಮೂಲನೆ ಮಾಡಬೇಕು. ಕೇವಲ ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು.
ಉದಯನಿಧಿ ಅವರ ಭಾಷಣದ ವಿಡಿಯೊ ಪ್ರಸಾರವಾಗುತ್ತಿದ್ದಂತೆ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದ ಬಿಜೆಪಿ, ಡಿಎಂಕೆ ನಾಯಕ ನರಮೇಧಕ್ಕೆ ಕರೆ ನೀಡುತ್ತಿದ್ದಾರೆ ಎಂದು ಆರೋಪಿಸಿತು. ಇದಕ್ಕೆ ಉದಯನಿಧಿ, ಬಿಜೆಪಿಯದ್ದು “ಸುಳ್ಳು ನಿರೂಪಣೆ” ಎಂದು ತಳ್ಳಿಹಾಕಿದ್ದರು.
ಆದಾಗ್ಯೂ, ಬುಧವಾರ ನಡೆದ ಮಂತ್ರಿಮಂಡಲದ ಸಭೆಯಲ್ಲಿ ಮೋದಿ,ತಮ್ಮ ಸಚಿವರಲ್ಲಿ ಉದಯನಿಥಿ ಹೇಳಿಕೆಗೆ ತಕ್ಕ ಉತ್ತರ ನೀಡಬೇಕು ಎಂದು ಹೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Thu, 7 September 23