ಜಿ 20 ಶೃಂಗಸಭೆ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ ಅಂಬಾನಿ, ಅದಾನಿ ಸೇರಿ ದೇಶದ 500 ಮಂದಿ ಉದ್ಯಮಿಗಳು

G-20 summit; ಔತಣಕೂಟದಲ್ಲಿ ಭಾಗವಹಿಸುವ ಬಗ್ಗೆ ಹಲವಾರು ಉದ್ಯಮಿಗಳು ‘ಟಿವಿ9 ಭಾರತವರ್ಷ್’ಗೆ ದೃಢೀಕರಿಸಿದ್ದಾರೆ. ಮೂಲಗಳ ಪ್ರಕಾರ, ಸೆಪ್ಟೆಂಬರ್ 9 ರಂದು ಔತಣಕೂಟಕ್ಕೆ ದೇಶದ ಸುಮಾರು 500 ಉದ್ಯಮಿಗಳನ್ನು ಆಹ್ವಾನಿಸಲಾಗಿದೆ. ಆರ್ಥಿಕ ತಜ್ಞ ಡಾ. ರವಿ ಸಿಂಗ್ ಅವರ ಪ್ರಕಾರ, ಉದ್ಯಮಿಗಳು ಜಿ-20 ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅವಶ್ಯಕವಾಗಿದೆ.

ಜಿ 20 ಶೃಂಗಸಭೆ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ ಅಂಬಾನಿ, ಅದಾನಿ ಸೇರಿ ದೇಶದ 500 ಮಂದಿ ಉದ್ಯಮಿಗಳು
ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ
Follow us
Ganapathi Sharma
|

Updated on: Sep 07, 2023 | 6:13 PM

ನವದೆಹಲಿ, ಸೆಪ್ಟೆಂಬರ್ 7: ಸೆಪ್ಟೆಂಬರ್ 9 ರಂದು ಶನಿವಾರ ರಾತ್ರಿ ಭಾರತ್ ಮಂಟಪದಲ್ಲಿ ನಡೆಯಲಿರುವ ಔತಣಕೂಟದಲ್ಲಿ ಜಿ-20 (G-20 summit) ಗುಂಪಿನಲ್ಲಿರುವ ದೇಶಗಳ ನಾಯಕರೊಂದಿಗೆ ದೇಶದ ಪ್ರಮುಖ ಉದ್ಯಮಿಗಳು (Businessmen) ಭಾಗವಹಿಸಲಿದ್ದಾರೆ. ಮುಕೇಶ್ ಅಂಬಾನಿ (Mukesh Ambani) ಮತ್ತು ಗೌತಮ್ ಅದಾನಿ (Goutam Adani) ಸೇರಿದಂತೆ ದೇಶದ ಸುಮಾರು 500 ದೊಡ್ಡ ಉದ್ಯಮಿಗಳನ್ನು ಆಹ್ವಾನಿಸಲಾಗಿದೆ. ಇವರಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್, ಭಾರ್ತಿ ಏರ್‌ಟೆಲ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್, ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಹಾಗೂ ಇತರರು ಸೇರಿದ್ದಾರೆ. ವಿದೇಶಿ ಹೂಡಿಕೆ, ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮಾದರಿ (PPP), ದೇಶೀಯ ಮತ್ತು ವಿದೇಶಿ ಕಂಪನಿಗಳ ನಡುವಿನ ಒಪ್ಪಂದಗಳು ಸೇರಿದಂತೆ ದೇಶದ ಆರ್ಥಿಕತೆಯ ಎಲ್ಲಾ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಉದ್ಯಮಿಗಳು ಭಾಗವಹಿಸುತ್ತಿದ್ದಾರೆ.

ಸೆ. 9 ರಂದು ಭಾರತ್ ಮಂಟಪದಲ್ಲಿ ಆಯೋಜಿಸಿರುವ ಭೋಜನಕೂಟದಲ್ಲಿ ವಿವಿಧ ದೇಶಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಭಾರತ ಸರ್ಕಾರವು ದೇಶದಲ್ಲಿ ವ್ಯಾಪಾರ ಮತ್ತು ಹೂಡಿಕೆಯ ಅವಕಾಶಗಳನ್ನು ಎತ್ತಿ ತೋರಿಸಲು ಔತಣಕೂಟವು ವೇದಿಕೆಯಾಗಲಿದೆ. ಮೂಲಗಳ ಪ್ರಕಾರ, ದೇಶದ ಉತ್ತಮ ವ್ಯವಸ್ಥೆ ವ್ಯಾಪಾರ, ಸ್ವಾವಲಂಬಿ ಭಾರತ ಸೇರಿದಂತೆ ವಿವಿಧ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೈಲೈಟ್ ಮಾಡುವ ಸಾಧ್ಯತೆ ಇದೆ. ಈ ಗುಂಪಿನ ಎಲ್ಲಾ ದೇಶಗಳ ನಡುವಿನ ವ್ಯಾಪಾರ ಬಾಂಧವ್ಯವನ್ನು ಮುಂದಿನ ಸ್ತರಕ್ಕೆ ಕೊಂಡೊಯ್ಯುವುದು ಜಿ-20 ನ ಉದ್ದೇಶವಾಗಿದೆ. ದೇಶದ ಪ್ರಮುಖ ಉದ್ಯಮಿಗಳು ಇದರಲ್ಲಿ ಪ್ರಮುಖ ಕೊಂಡಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಔತಣಕೂಟಕ್ಕೆ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಜಿ20 ಶೃಂಗಸಭೆ: ಪ್ರವಾಸಿ ಸ್ಮಾರ್ಟ್​ ಕಾರ್ಡ್​ ಬಿಡುಗಡೆ ಮಾಡಿದ ದೆಹಲಿ ಮೆಟ್ರೋ

ಔತಣಕೂಟದಲ್ಲಿ ಭಾಗವಹಿಸುವ ಬಗ್ಗೆ ಹಲವಾರು ಉದ್ಯಮಿಗಳು ‘ಟಿವಿ9 ಭಾರತವರ್ಷ್’ಗೆ ದೃಢೀಕರಿಸಿದ್ದಾರೆ. ಮೂಲಗಳ ಪ್ರಕಾರ, ಸೆಪ್ಟೆಂಬರ್ 9 ರಂದು ಔತಣಕೂಟಕ್ಕೆ ದೇಶದ ಸುಮಾರು 500 ಉದ್ಯಮಿಗಳನ್ನು ಆಹ್ವಾನಿಸಲಾಗಿದೆ. ಆರ್ಥಿಕ ತಜ್ಞ ಡಾ. ರವಿ ಸಿಂಗ್ ಅವರ ಪ್ರಕಾರ, ಉದ್ಯಮಿಗಳು ಜಿ-20 ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅವಶ್ಯಕವಾಗಿದೆ. ಏಕೆಂದರೆ ವ್ಯಾಪಾರವು ದೇಶದ ಉದ್ಯಮಿಗಳ ಕ್ಷೇತ್ರವಾಗಿದೆ. ಸರ್ಕಾರ ವ್ಯಾಪಾರ ಮಾಡುವುದಿಲ್ಲ, ಅದು ವ್ಯವಸ್ಥೆಯನ್ನು ಮಾತ್ರ ಒದಗಿಸುತ್ತದೆ. ದೇಶದ ದೊಡ್ಡ ಉದ್ಯಮಿಗಳು ವಿವಿಧ ಪಿಪಿಪಿ ಯೋಜನೆಗಳಲ್ಲಿ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ. ಖಾಸಗಿ ವಲಯದಲ್ಲಿ ವಿದೇಶಿ ಹೂಡಿಕೆಯೂ ಇದೆ. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಆತ್ಮ ನಿರ್ಭರ್ ಭಾರತ ಅಥವಾ ಸ್ವಾವಲಂಬಿ ಭಾರತವು ವಿದೇಶಿ ಕಂಪನಿಗಳು ದೇಶದಲ್ಲಿ ತಮ್ಮ ಘಟಕಗಳನ್ನು ಹೊಂದಬೇಕು ಮತ್ತು ಪ್ರಪಂಚದ ಎಲ್ಲಾ ದೇಶಗಳಿಗೆ ಸರಬರಾಜು ಇಲ್ಲಿಂದ ಮಾಡಬೇಕು ಎಂಬ ಉದ್ದೇಶ ಹೊಂದಿದೆ.

ಭಾರತ ಮಂಟಪದಲ್ಲಿ ಸೆಪ್ಟೆಂಬರ್ 9-10 ರಂದು ನಡೆಯಲಿರುವ ಜಿ-20 ಸಮ್ಮೇಳನದಲ್ಲಿ 29 ದೇಶಗಳ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ