AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿ 20 ಸಭೆಯಲ್ಲಿ ಸಂಗೀತ, ನೃತ್ಯ ಪ್ರದರ್ಶನ; ಜಗತ್ತಿಗೆ ದೊರೆಯಲಿದೆ ‘ಮಿಲೇ ಸುರ್ ಮೇರಾ ತುಮ್ಹಾರಾ’ ಸಂದೇಶ

G-20 summit; ಜಿ 20 ಸದಸ್ಯ ರಾಷ್ಟ್ರಗಳ ರಾಷ್ಟ್ರಗಳ ಮುಖ್ಯಸ್ಥರಿಗಾಗಿ ಸೆಪ್ಟೆಂಬರ್ 9 ರಂದು ಸಂಜೆ 6 ರಿಂದ 9 ರವರೆಗೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೇಶದ ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮದ ವರೆಗಿನ ಕಲಾವಿದರನ್ನು ಇದರಲ್ಲಿ ಸೇರಿಸಲಾಗಿದೆ. ಸಂಪೂರ್ಣ ಸಂಗೀತ ನಿರೂಪಣೆಯು ಭಾರತೀಯವಾಗಿರಲಿದೆ.

ಜಿ 20 ಸಭೆಯಲ್ಲಿ ಸಂಗೀತ, ನೃತ್ಯ ಪ್ರದರ್ಶನ; ಜಗತ್ತಿಗೆ ದೊರೆಯಲಿದೆ ‘ಮಿಲೇ ಸುರ್ ಮೇರಾ ತುಮ್ಹಾರಾ’ ಸಂದೇಶ
ಜಿ 20 ಸಭೆಯಲ್ಲಿ ಸಂಗೀತ, ನೃತ್ಯ ಪ್ರದರ್ಶನImage Credit source: ANI
ಗಣಪತಿ ಶರ್ಮಾ
|

Updated on: Sep 07, 2023 | 6:49 PM

Share

ನವದೆಹಲಿ, ಸೆಪ್ಟೆಂಬರ್ 7:  ಜಿ-20 ಶೃಂಗಸಭೆಯಲ್ಲಿ (G-20 summit)ಆಯೋಜಿಸಲಾಗಿರುವ ಸಂಗೀತ, ನೃತ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಎಂಬತ್ತರ ದಶಕದ ಜನಪ್ರಿಯ ಗೀತೆಯಾದ ‘ಮಿಲೇ ಸುರ್ ಮೇರಾ ತುಮ್ಹಾರಾ’ ಹಾಡಲಾಗುತ್ತದೆ. ಇದಕ್ಕೆ ಜಿ20 ಸದಸ್ಯರು ನೃತ್ಯ ಮಾಡಲಿದ್ದಾರೆ. ಭಾರತದ ವಿವಿಧ ಭಾಗಗಳ ಕಲಾವಿದರು ಸೆಪ್ಟೆಂಬರ್ 9 ರಂದು ಸಂಜೆ ಭಾರತ್ ಮಂಟಪದಲ್ಲಿ ಪ್ರದರ್ಶನ ನೀಡಲಿದ್ದಾರೆ ಮತ್ತು ಸಂಗೀತ ಕಾರ್ಯಕ್ರಮವು ‘ಮಿಲೇ ಸುರ್ ಮೇರಾ ತುಮ್ಹಾರಾ’ ಹಾಡಿನೊಂದಿಗೆ ಮುಕ್ತಾಯಗೊಳ್ಳಲಿದೆ. ಸಂಗೀತ ಸಂಜೆಯು ‘ಭಾತ್ ವಾದ್ಯ ದರ್ಶನ್ ಸಂಗೀತ್ ಮೇಳ’ದ ವಿಶಿಷ್ಟ ಸಂಗೀತ ಪ್ರಸ್ತುತಿಯನ್ನು ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಮತ್ತು ಜಾನಪದ ಗೀತೆಗಳಿಗೆ ಮಾತ್ರ ಸ್ಥಾನ ನೀಡಲಾಗಿದೆ. ಈ ಸಂಗೀತ ಸಮಾರಂಭದಲ್ಲಿ ಯಾವುದೇ ಬಾಲಿವುಡ್ ಹಾಡನ್ನು ಬಳಸಲಾಗಿಲ್ಲ. ಇಡೀ ಕಾರ್ಯಕ್ರಮವನ್ನು ಸಂಗೀತ ನಾಟಕ ಅಕಾಡೆಮಿಯ ಸಂಗೀತ ನಿರ್ದೇಶಕಿ ಡಾ. ಸಂಧ್ಯಾ ಪುರೇಚ ಅವರು ಪರಿಕಲ್ಪನೆ ಮಾಡಿದ್ದಾರೆ. ಚೇತನ್ ಜೋಶಿ ಸಂಗೀತವನ್ನು ನಿರ್ಧರಿಸಿದ್ದಾರೆ ಎಂಬ ಮಾಹಿತಿ ‘ಟಿವಿ 9 ಭಾರತವರ್ಷ್​’ಗೆ ಲಭ್ಯವಾಗಿದೆ.

‘ಎಕ್ಲಾ ಚಲೋ ರೇ’

ಈ ಸಂಗೀತ ಕಾರ್ಯಕ್ರಮದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಪ್ರಸಿದ್ಧ ಗೀತೆ ‘ಏಕ್ಲಾ ಚಲೋ ರೇ’ ಸಹ ಪ್ರಸ್ತುತಪಡಿಸಲಾಗುತ್ತದೆ. ರಾಜಸ್ಥಾನಿ ಜಾನಪದ ಕಲಾವಿದರು ಆ ಸಂಗೀತವನ್ನು ಪ್ರಸ್ತುತಪಡಿಸಲಿದ್ದಾರೆ. ಗುಜರಾತ್ ಮತ್ತು ದಕ್ಷಿಣ ಭಾರತದ ಸಂಗೀತ ಮತ್ತು ಜಾನಪದ ರಾಗಗಳಿಗೂ ಕಾರ್ಯಕ್ರಮದಲ್ಲಿ ಸ್ಥಾನ ನೀಡಲಾಗಿದೆ.

ಹೇಗಿರಲಿದೆ ಸಂಗೀತ ಸಂಜೆ?

ಸದಸ್ಯ ರಾಷ್ಟ್ರಗಳ ರಾಷ್ಟ್ರಗಳ ಮುಖ್ಯಸ್ಥರಿಗಾಗಿ ಸೆಪ್ಟೆಂಬರ್ 9 ರಂದು ಸಂಜೆ 6 ರಿಂದ 9 ರವರೆಗೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೇಶದ ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮದ ವರೆಗಿನ ಕಲಾವಿದರನ್ನು ಇದರಲ್ಲಿ ಸೇರಿಸಲಾಗಿದೆ. ಸಂಪೂರ್ಣ ಸಂಗೀತ ನಿರೂಪಣೆಯು ಭಾರತೀಯವಾಗಿರಲಿದೆ. ಪ್ರಸ್ತುತಿಯಲ್ಲಿ ಒಳಗೊಂಡಿರುವ ಕೆಲವು ಪ್ರಮುಖ ಪ್ರಕಾರಗಳೆಂದರೆ ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಜಾನಪದ ಮತ್ತು ಸಮಕಾಲೀನ ಸಂಗೀತ.

‘ಮಿಲೇ ಸುರ್ ಮೇರಾ ತುಮ್ಹಾರಾ’ ಹಾಡು ಯಾವಾಗ ರಚನೆಯಾಯಿತು?

‘ಮಿಲೇ ಸುರ್ ಮೇರಾ ತುಮ್ಹಾರಾ’ ಗೀತೆಯನ್ನು 1988 ರಲ್ಲಿ ರಚಿಸಲಾಯಿತು. ಇದನ್ನು ಕೈಲಾಶ್ ಸುರೇಂದ್ರನಾಥ್ ನಿರ್ಮಿಸಿ ನಿರ್ದೇಶಿಸಿದ್ದಾರೆ. ಈ ಹಾಡಿನಲ್ಲಿ ಅಮಿತಾಬ್ ಬಚ್ಚನ್, ಮಿಥುನ್ ಚಕ್ರವರ್ತಿ, ಜೀತೇಂದ್ರ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಈ ಏಕತಾ ಹಾಡು ಇಂದಿಗೂ ಬಹಳ ಜನಪ್ರಿಯವಾಗಿದೆ.

ಇದನ್ನೂ ಓದಿ: ಜಿ 20 ಶೃಂಗಸಭೆ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ ಅಂಬಾನಿ, ಅದಾನಿ ಸೇರಿ ದೇಶದ 500 ಮಂದಿ ಉದ್ಯಮಿಗಳು

ಸಂಗೀತ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ‘ಭಾರತ ವಾದ್ಯ ದರ್ಶ’ವು ವಾದ್ಯ ಸಂಗೀತ ಕಾರ್ಯಕ್ರಮಗಳ ಸರಣಿಯಾಗಿದೆ. ಇದು ದೇಶದ ವಿವಿಧ ರಾಜ್ಯಗಳ ಪ್ರಾತಿನಿಧಿಕ ಸಂಗೀತದ ಮೂಲಕ ಒಂದೂವರೆ ಗಂಟೆಗಳ ಕಾಲ ನಡೆಯಲಿದೆ. ಪ್ರತಿಯೊಂದು ಗುಂಪು ತಮ್ಮ ವಿಭಿನ್ನ ವಾದ್ಯಗಳೊಂದಿಗೆ ಪ್ರದರ್ಶನ ನೀಡಲಿವೆ. ವಿವಿಧ ಅಪರೂಪದ ವಾದ್ಯಗಳನ್ನು ಪ್ರದರ್ಶಿಸಲಾಗುತ್ತದೆ.

ಎಷ್ಟು ಕಲಾವಿದರು ಭಾಗವಹಿಸಲಿದ್ದಾರೆ?

34 ಹಿಂದೂಸ್ತಾನಿ ಸಂಗೀತ ಕಲಾವಿದರು, 18 ಕರ್ನಾಟಕ ಸಂಗೀತ ಕಲಾವಿದರು ಮತ್ತು 26 ಜಾನಪದ ಸಂಗೀತ ಕಲಾವಿದರು ವಿವಿಧ ರಾಜ್ಯಗಳಿಂದ ಭಾಗವಹಿಸಲಿದ್ದಾರೆ. ಈ ಪೈಕಿ 11 ಮಕ್ಕಳು, 13 ಮಹಿಳೆಯರು, 6 ಅಂಗವಿಕಲ (ದಿವ್ಯಾಂಗ್) ಕಲಾವಿದರು, 22 ವೃತ್ತಿಪರರು, 26 ಯುವಕರು ಸೇರಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ