ಕೈಕಾಲು ಕಟ್ಟಿ ಕಗ್ಗೊಲೆ; ಪೋಸ್ಟ್ಮಾರ್ಟಂ ವೇಳೆ ಬಯಲಾಯ್ತು ಅಚ್ಚರಿಯ ಸತ್ಯ
ಕೆಂಪು ಕುರ್ತಾ ಮತ್ತು ಬಿಳಿ ಪೈಜಾಮಾದಲ್ಲಿ, ಉದ್ದನೆಯ ಕೂದಲನ್ನು ಗಮನಿಸಿದ ನಂತರ ಆ ದೇಹವು ಮಹಿಳೆಯ ದೇಹ ಎಂದು ಪೊಲೀಸರು ಊಹಿಸಿದ್ದರು. ಅವರು ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಆದರೆ, ಅವರ ಊಹೆ ತಪ್ಪಾಗಿತ್ತು.
ನವದೆಹಲಿ: ಕೈ-ಕಾಲುಗಳನ್ನು ಕಟ್ಟಿ ಗೋಣಿಚೀಲದಲ್ಲಿ ತುಂಬಿದ್ದ ಕೊಳೆತ ಮೃತದೇಹವನ್ನು ಉತ್ತರ ಪ್ರದೇಶದ ಪೊಲೀಸರು ಪತ್ತೆ ಹಚ್ಚಿದ್ದರು. ಆ ಶವ ಯಾರದ್ದೆಂದು ಯಾರಿಗೂ ತಿಳಿದಿರಲಿಲ್ಲ. ಆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಕೊಳೆತು ಗುರುತು ಹಿಡಿಯದಂತಹ ಸ್ಥಿತಿಯಲ್ಲಿದ್ದ ಆ ಹೆಣದ ವ್ಯಕ್ತಿ ಉದ್ದನೆಯ ಕೂದಲು ಬಿಟ್ಟುಕೊಂಡು, ಕುರ್ತಾ-ಪೈಜಾಮಾ ಧರಿಸಿದ್ದರಿಂದ ಅದು ಮಹಿಳೆಯದ್ದೆಂದು ಪೊಲೀಸರು ನಂಬಿದ್ದರು. ಆದರೆ, ಅಸಲಿ ಕತೆಯೇ ಬೇರೆ ಇತ್ತು.
ಮೋರಿಯ ಬಳಿ ದುರ್ವಾಸನೆ ಹರಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಭಾನುವಾರ ಕರೆ ಮಾಡಿದ್ದರು. ಅಲ್ಲಿಗೆ ಧಾವಿಸಿದ ಪೊಲೀಸರಿಗೆ ಗೋಣಿಚೀಲದೊಳಗಿದ್ದ ಶವ ಸಿಕ್ಕಿತ್ತು. ಆ ದೇಹವು ಮೋರಿಯ ನೀರಿನಲ್ಲಿ ಮುಳುಗಿ ಕೊಳೆತು ಹೋಗಿದ್ದರಿಂದ ಅದರ ಗುರುತು ಪತ್ತೆ ಹಚ್ಚುವುದು ಕಷ್ಟಕರವಾಗಿತ್ತು.
ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ತಾಯಿ, ಮಗನ ಬರ್ಬರ ಹತ್ಯೆ
ಕೆಂಪು ಕುರ್ತಾ ಮತ್ತು ಬಿಳಿ ಪೈಜಾಮಾದಲ್ಲಿ, ಉದ್ದನೆಯ ಕೂದಲನ್ನು ಗಮನಿಸಿದ ನಂತರ ಆ ದೇಹವು ಮಹಿಳೆಯ ದೇಹ ಎಂದು ಪೊಲೀಸರು ಊಹಿಸಿದ್ದರು. ಅವರು ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆ ನಡೆಸಿಲಾರಂಭಿಸಿದ ವೈದ್ಯರಿಗೆ ಆ ಶವ ಮಹಿಳೆಯದ್ದಲ್ಲ, ಪುರುಷನದ್ದು ಎಂದು ಗೊತ್ತಾಗಿದೆ.
ಪೊಲೀಸರು ಆ ಶವ ಮಹಿಳೆಯದ್ದು ಎಂದು ಆರಂಭದಲ್ಲಿ ತಿಳಿಸಿದ್ದರಿಂದ ವೈದ್ಯರು ಬೆಚ್ಚಿಬಿದ್ದರು. ಆ ಮೃತದೇಹ ಮಹಿಳೆಯದ್ದು ಎಂದು ನಮೂದಿಸಿರುವ ಪೊಲೀಸರು ಆ ವರದಿಯಲ್ಲಿ ಅದು ಪುರುಷನ ಶವ ಎಂದು ಸರಿಪಡಿಸುವವರೆಗೂ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಹಳೇ ದ್ವೇಷಕ್ಕೆ ಭೀಕರ ಹತ್ಯೆ; ಒಂದೇ ಮನೆಯ ನಾಲ್ವರನ್ನು ಕೊಚ್ಚಿ ಕೊಲೆ
ಹೀಗಾಗಿ, ಪೊಲೀಸರು ಆ ಶವವನ್ನು ಶವಾಗಾರದಲ್ಲಿ 72 ಗಂಟೆಗಳ ಕಾಲ ಇರಿಸಿದ್ದರು. ಆ ಮೃತದೇಹ ಅರ್ಚಕರದ್ದಾಗಿರುವ ಸಾಧ್ಯತೆ ಇದೆ. ಅವರ ಕುತ್ತಿಗೆಗೆ ಹಗ್ಗ ಬಿಗಿಯಲಾಗಿದ್ದು, ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.