AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಲಿಗ್ರಾಂನಲ್ಲಿ ಇನ್ವೆಸ್ಟಮೆಂಟ್ ಹೆಸರಿನಲ್ಲಿ ವಂಚನೆ, ಮಹಿಳೆಯರಿಗೆ 46 ಲಕ್ಷ‌ ರೂ. ಮರಳಿ ಕೊಡಿಸಿದ ಬೆಳಗಾವಿ ಪೊಲೀಸರು

ಸೈಬರ್​ ಖದೀಮರು (Cyber crime) ಬಣ್ಣ ಬಣ್ಣದ ಮಾತುಗಳಿಂದ ಜನರ ಹಣ ದೋಚಿ ವಂಚನೆ ಮಾಡುತ್ತಿದ್ದಾರೆ. ಅದರಂತೆ ಟೆಲಿಗ್ರಾಂನಲ್ಲಿ ಇನ್ವೆಸ್ಟಮೆಂಟ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಲಾಗಿದ್ದು, ಇದೀಗ ಬೆಳಗಾವಿಯ ಸಿಇಎನ್ ಪೊಲೀಸರು ಮೋಸ ಹೋದವರಿಗೆ ಮರಳಿ ಹಣ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟೆಲಿಗ್ರಾಂನಲ್ಲಿ ಇನ್ವೆಸ್ಟಮೆಂಟ್ ಹೆಸರಿನಲ್ಲಿ ವಂಚನೆ, ಮಹಿಳೆಯರಿಗೆ 46 ಲಕ್ಷ‌ ರೂ. ಮರಳಿ ಕೊಡಿಸಿದ ಬೆಳಗಾವಿ ಪೊಲೀಸರು
Sahadev Mane
| Edited By: |

Updated on:Sep 08, 2023 | 9:20 AM

Share

ಬೆಳಗಾವಿ, (ಸೆಪ್ಟೆಂಬರ್ 08): ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೆ ಇರುತ್ತಾರೆ, ಹಾಗಾಗಿ ಏಕಾಏಕಿ ಯಾರನ್ನು ನಂಬಬೇಡಿ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಂದ ಇರಬೇಕು. ಸದ್ಯ ಸೈಬರ್​ ಖದೀಮರು (Cyber crime) ಬಣ್ಣ ಬಣ್ಣದ ಮಾತುಗಳಿಂದ ಜನರ ಹಣ ದೋಚಿ ವಂಚನೆ ಮಾಡುತ್ತಿದ್ದಾರೆ. ಅದರಂತೆ ಟೆಲಿಗ್ರಾಂನಲ್ಲಿ ಇನ್ವೆಸ್ಟಮೆಂಟ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಲಾಗಿದ್ದು, ಇದೀಗ ಬೆಳಗಾವಿಯ ಸಿಇಎನ್ ಪೊಲೀಸರು ಮೋಸ ಹೋದವರಿಗೆ ಮರಳಿ ಹಣ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನ್​ಲೈನ್​ ಗ್ಯಾಂಗ್​ವೊಂದು, ಬೆಳಗಾವಿ (Belagavi) ಜಿಲ್ಲೆಯ ಇಬ್ಬರು ವಿದ್ಯಾವಂತ ಮಹಿಳೆಯರಿಗೆ ಇನ್ವೆಸ್ಟಮೆಂಟ್ ಹೆಸರಿನಲ್ಲಿ ಲಕ್ಷ-ಲಕ್ಷ ಹಣ ವಂಚಿಸಿತ್ತು. ಇದೀಗ ಬೆಳಗಾವಿಯ ಸಿಇಎನ್ ಪೊಲೀಸರು ಖರ್ತನಾಕ್ ಸೈಬರ್ ವಂಚಕರ ಜಾಲ ಪತ್ತೆ ಮಾಡಿ ಬರೋಬ್ಬರಿ 46 ಲಕ್ಷ‌ ರೂ. ಮರಳಿ ಕೊಡಿಸಿದ್ದಾರೆ.

ಹೇಗೆ ಬಲೆಗೆ ಬೀಳಿಸುತ್ತಾರೆ ಗೊತ್ತಾ?

ಟೆಲಿಗ್ರಾಂ ಚಾಟಿಂಗ್ ನಲ್ಲಿ ಮೊದಲು ಸಂಪರ್ಕಿಸುವ ಖದೀಮರು, ಆ ಬಳಿಕ ಒಳ್ಳೆಯ ಇನ್ವೆಸ್ಟಮೆಂಟ್ ಪ್ಲಾನ್ ಹೇಳಿ ನಂಬಿಕೆ ಗಳಿಸುತ್ತಾರೆ. ಮೊದಲು 3 ಇನ್ವೆಸ್ಟಮೆಂಟ್ ಮೇಲೆ ಒಳ್ಳೆಯ ರಿಟರ್ನ್ಸ್ ಕೂಡ ಕೊಡುತ್ತಾರೆ. ನಂತರ ಲಕ್ಷಾಂತರ ರೂಪಾಯಿ ಇನ್ವೆಸ್ಟಮೆಂಟ್ ಮಾಡವಂತೆ ನಂಬಿಸಿ ಮೋಸ ಮಾಡುತ್ತಾರೆ. ಇದೇ ಮಾದರಿಯಲ್ಲೇ ಬೆಳಗಾವಿ ಜಿಲ್ಲೆಯ ಇಬ್ಬರು ವಿದ್ಯಾವಂತ ಮಹಿಳೆಯರಿಗೆ ವಂಚಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ನಿವಾಸಿ ಡಾ. ಶಿಲ್ಪಾ, ನಿಪ್ಪಾಣಿ ನಿವಾಸಿ ಆಶಾ ಎನ್ನುವರಿಂದ ಟೆಲಿಗ್ರಾಂ ಇನ್ವೆಸ್ಟಮೆಂಟ್​ನಲ್ಲಿ ಬರೋಬ್ಬರಿ 46 ಲಕ್ಷ‌ ರೂ. ವಂಚಿಸಿದ್ದಾರೆ. ಡಾ.ಶಿಲ್ಪಾ 27ಲಕ್ಷ 74 ಸಾವಿರ ಹಾಗೂ ಆಶಾ 18 ಲಕ್ಷ 41 ಸಾವಿರ ರೂ. ವಂಚಿಸಿದ್ದರು. ಇದರಿಂದ ಕಂಗಾಲಾದ ಮಹಿಳೆಯರು ಬೆಳಗಾವಿ ಜಿಲ್ಲಾ ಸಿಇಎನ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರು.

ಇದನ್ನೂ ಓದಿ: ಕರ್ನಾಟಕದ ಈ ಗ್ರಾಮದಲ್ಲಿ ಇದ್ದಾರೆ ಪ್ರತಿ ಮನೆಯಲ್ಲೂ ಶಿಕ್ಷಕರು; ಯಾವುದು ಆ ಊರು? ಇಲ್ಲಿದೆ ವಿವರ

ಬಳಿಕ ತನಿಖೆಗೆ ಇಳಿದ ಪೊಲೀಸರು, ಮಹಿಳೆಯರು ಹಣ ಹಾಕಿದ್ದ ಟೆಲಿಗ್ರಾಂನಲ್ಲಿ ವಂಚಿಸುತ್ತಿದ್ದ ಸೈಬರ್ ಗ್ಯಾಂಗ್ ನ 21 ವಿವಿಧ ಬ್ಯಾಂಕ್ ಖಾತೆ ಪ್ರೀಜ್ ಮಾಡಿದ್ದಾರೆ. ವಂಚಕರ ಬ್ಯಾಂಕ್ ಖಾತೆಯಲ್ಲಿದ್ದ 72 ಲಕ್ಷದ 50 ಸಾವಿರ ರೂಪಾಯಿ ಪ್ರೀಜ್ ಮಾಡಿದ್ದಾರೆ. ಬಳಿಕ ಪೊಲೀಸರು ಬೆಳಗಾವಿ 3ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹೋಗಿದ್ದು, ಸಂಬಂಧಿಸಿದವರ ಖಾತೆಗೆ ಹಣ ಮರು ಜಮಾ ಮಾಡುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿ ಆದೇಶ‌ ಹೊರಡಿಸಿದೆ. ಅದರಂತೆ ದೂರು ಕೊಟ್ಟಿದ್ದ ಇಬ್ಬರು ಮಹಿಳೆಯರಿಗೆ ಹಣ ಮರಳಿಸಿದ್ದಾರೆ.

ಇನ್ನು ಈ ಬಗ್ಗೆ ಬೆಳಗಾವಿ ಎಸ್‌ಪಿ ಡಾ.ಸಂಜೀವ ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಹೊರ ರಾಜ್ಯದಲ್ಲಿದ್ದುಕೊಂಡು ಸೈಬರ್ ಗ್ಯಾಂಗ್ ಕೆಲಸ ಮಾಡುತ್ತಿದೆ. 21 ಬ್ಯಾಂಕ್ ಖಾತೆಯ ಮಾಹಿತಿ ಕಲೆ ಹಾಕುತ್ತಿದ್ದೇವೆ. ನಕಲಿ ಅಕೌಂಟ್ ಸೃಷ್ಟಿಸಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿ್ದು, ಖರ್ತನಾಕ್ ವಂಚಕರ ಗ್ಯಾಂಗ್ ಅರೆಸ್ಟ್ ಮಾಡಲು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು.

ಇನ್ನಷ್ಟ ನಿಮ್ಮ ಜಿಲ್ಲೆಗಳ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 9:18 am, Fri, 8 September 23