Crime News: ತಂಗಿಯಿಂದ ರಾಖಿ ಕಟ್ಟಿಸಿಕೊಂಡ ದಿನವೇ ಹೆಣವಾದ ಅಣ್ಣ!

ಪಂಜಾಬ್‌ನಲ್ಲಿ ಡ್ರಗ್ಸ್ ಸೇವನೆಯಿಂದ ಯುವಕರ ಸಾವು ಇನ್ನೂ ನಿಂತಿಲ್ಲ. ಅಮೃತಸರದ ಅಟ್ಟಾರಿ ಗಡಿ ಪ್ರದೇಶದ ಚಿದ್ದನ್ ಗ್ರಾಮದಲ್ಲಿ ರಕ್ಷಾಬಂಧನದ ದಿನದಂದು ಮಾದಕ ವ್ಯಸನಿಯೊಬ್ಬ ಮೃತಪಟ್ಟಿದ್ದಾನೆ.

Crime News: ತಂಗಿಯಿಂದ ರಾಖಿ ಕಟ್ಟಿಸಿಕೊಂಡ ದಿನವೇ ಹೆಣವಾದ ಅಣ್ಣ!
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on: Sep 01, 2023 | 5:09 PM

ಅಮೃತಸರ: ಪಂಜಾಬ್​ನ ಅಮೃತಸರದ (Amritsar) ಗಡಿ ಪ್ರದೇಶವಾದ ಅಟ್ಟಾರಿಯ ಚಿದ್ದನ್ ಗ್ರಾಮದಲ್ಲಿ ರಕ್ಷಾ ಬಂಧನದ (Raksha bandhan) ದಿನದಂದು ಮಾದಕ ವ್ಯಸನಿಯೊಬ್ಬ ಡ್ರಗ್ಸ್​ನಿಂದ ಸಾವನ್ನಪ್ಪಿದ್ದಾನೆ. ಗುರುವಾರ ಇಡೀ ಭಾರತ ರಾಖಿ ಹಬ್ಬವನ್ನು ಆಚರಿಸುತ್ತಿದ್ದರೆ ಚಿದ್ದನ್ ಗ್ರಾಮದಲ್ಲಿ ತಂಗಿಯಿಂದ ರಾಖಿ ಕಟ್ಟಿಸಿಕೊಂಡ ಅಣ್ಣ ಡ್ರಗ್ಸ್​ ಇಂಜೆಕ್ಷನ್ ಚುಚ್ಚಿಕೊಂಡು ಸಾವನ್ನಪ್ಪಿದ್ದಾನೆ. ನವದೀಪ್ ಕೌರ್ ಎಂಬ ಯುವತಿಯ ಅಣ್ಣ ದಿಲ್ ಎಂಬಾತ ಡ್ರಗ್ಸ್​ಗೆ ಬಲಿಯಾಗಿ ಮೃತಪಟ್ಟ ಯುವಕ.

ಪಂಜಾಬ್‌ನಲ್ಲಿ ಡ್ರಗ್ಸ್ ಸೇವನೆಯಿಂದ ಯುವಕರ ಸಾವು ಇನ್ನೂ ನಿಂತಿಲ್ಲ. ಅಮೃತಸರದ ಅಟ್ಟಾರಿ ಗಡಿ ಪ್ರದೇಶದ ಚಿದ್ದನ್ ಗ್ರಾಮದಲ್ಲಿ ರಾಖಿ ದಿನದಂದು ಮಾದಕ ವ್ಯಸನಿಯೊಬ್ಬ ಮೃತಪಟ್ಟಿದ್ದಾನೆ. ಆತ ತನ್ನ ಕುಟುಂಬದಲ್ಲಿ ಒಬ್ಬನೇ ಮಗನಾಗಿದ್ದು, ಆತನ ಸಾವಿನಿಂದ ಕುಟುಂಬ ಕಂಗಾಲಾಗಿದೆ. ಆ ಗ್ರಾಮದಲ್ಲಿ ಮನೆ ಮನೆಯಲ್ಲೂ ಡ್ರಗ್ಸ್​ ಮಾರಾಟವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ಪೈಲಟ್ ಸಹೋದರನಿಗೆ ಸಾವಿರಾರು ಅಡಿ ಎತ್ತರದಲ್ಲಿ ವಿಮಾನ ಹಾರಾಡುತ್ತಿರುವಾಗಲೇ ರಾಖಿ ಕಟ್ಟಿದ ಸಹೋದರಿ

ಗುರುವಾರ ಇಡೀ ಭಾರತ ರಾಖಿ ಹಬ್ಬವನ್ನು ಆಚರಿಸುತ್ತಿದೆ. ಆದರೆ ರಾಖಿ ಹಬ್ಬದಂದು ನನ್ನ ಅಣ್ಣ ನನ್ನಿಂದ ದೂರವಾಗಿದ್ದಾನೆ ಎಂದು ಮೃತನ ಸಹೋದರಿ ನವದೀಪ್ ಕೌರ್ ಬೇಸರ ಹೊರಹಾಕಿದ್ದಾರೆ. ರಕ್ಷಾಬಂಧನದ ದಿನ ಬೆಳಗ್ಗೆ ನಾನು ಅಣ್ಣನ ಕೈಗೆ ರಾಖಿ ಕಟ್ಟಿದ್ದೆ. ಅದಾದ ನಂತರ ಆತ ತನ್ನ ಸ್ನೇಹಿತರನ್ನು ಭೇಟಿಯಾಗಲು ಹೊರಟಿದ್ದ ಎಂದು ಆಕೆ ಹೇಳಿದ್ದಾರೆ.

ಮಧ್ಯಾಹ್ನದ ನಂತರ ಮನೆಗೆ ಬಂದ ಆತ ಎಲ್ಲಿಂದಲೋ ಡ್ರಗ್ಸ್ ಪ್ಯಾಕೆಟ್ ತಂದು ಸೀದಾ ಬಾತ್ ರೂಮಿಗೆ ಹೋದ. ಅಲ್ಲಿ ಇಂಜೆಕ್ಷನ್ ಮೂಲಕ ಡ್ರಗ್ಸ್​ ಚುಚ್ಚಿಕೊಂಡು ಆತ ಸಾವನ್ನಪ್ಪಿದ್ದಾನೆ. ಬಹಳ ಹೊತ್ತಾದರೂ ಬಾತ್ ರೂಂ ಬಾಗಿಲು ತೆರೆಯದೇ ಇದ್ದಾಗ ಆತನ ತಂದೆ ಬಾಗಿಲು ಒಡೆದರು. ಆ ದಿಲ್‌ನ ಹೆಣವಾಗಿ ಬಿದ್ದಿದ್ದ. ಅವನ ತೋಳಿಗೆ ಡ್ರಗ್ ಇಂಜೆಕ್ಷನ್ ಚುಚ್ಚಿಕೊಂಡಿತ್ತು ಎಂದು ಆಕೆ ಹೇಳಿದ್ದಾರೆ.

ಅಪರಾಧಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ