ಬೆಂಗಳೂರಿನ ಹುಳಿಮಾವು ಪೊಲೀಸರಿಂದ 2 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ: ನೈಜೀರಿಯಾ ಮೂಲದ ಇಬ್ಬರ ಬಂಧನ
ವಾಟ್ಸಾಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ಸ್ ಮಾರಾಟ ಮಾಡಿದ್ದ ನೈಜೀರಿಯಾ ಮೂಲದ ಇಬ್ಬರನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ಬಂಧಿಸಿದ್ದು, 2 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. 400 ಕ್ಕೂ ಹೆಚ್ಚು ಎಕ್ಸ್ಟೆಸಿ, 1 ಸಾವಿರಕ್ಕೂ ಹೆಚ್ಚು ಎಂಡಿಎಂಎ ಮಾತ್ರೆ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 1: ವಾಟ್ಸಾಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ಸ್ (drugs) ಮಾರಾಟ ಮಾಡಿದ್ದ ನೈಜೀರಿಯಾ ಮೂಲದ ಇಬ್ಬರನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ಬಂಧಿಸಿದ್ದು, 2 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಇಮ್ಯಾನುಯೆಲ್, ಹುಚೆನ್ನಾ ಲಿವಿನಸ್ ಬಂಧಿತರು. 400 ಕ್ಕೂ ಹೆಚ್ಚು ಎಕ್ಸ್ಟೆಸಿ, 1 ಸಾವಿರಕ್ಕೂ ಹೆಚ್ಚು ಎಂಡಿಎಂಎ ಮಾತ್ರೆ ವಶಕ್ಕೆ ಪಡೆಯಲಾಗಿದೆ. ವಾಟ್ಸಾಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ಸ್ ಮಾರಾಟ ಮಾಡಿ ಬಳಿಕ ಗೂಗಲ್ಪೇ ಮೂಲಕ ಹಣ ಪಡೆಯುತ್ತಿದ್ದರು.
ನಿಷೇಧಿತ ಎಂಡಿಎಂಎ ಮಾದಕ ವಸ್ತು ಮಾರಾಟ: ಇಬ್ಬರ ಬಂಧಿತ
ಚಿಕ್ಕಮಗಳೂರು: ನಿಷೇಧಿತ ಎಂಡಿಎಂಎ ಮಾದಕ ವಸ್ತು ಮಾರಾಟ ಹಿನ್ನೆಲೆ ಮೂಡಿಗೆರೆ ಪಟ್ಟಣದ ಸರ್ವೋದಯ ನಗರದಲ್ಲಿ ಪೊಲೀಸರು ಇಬ್ಬರ ಬಂಧನ ಮಾಡಿದ್ದಾರೆ. ಸುಹಾನ್(23) ,ಶಿಯಾಬುದ್ದೀನ್(24) ಬಂಧಿತರು. ಸದ್ಯ ಬಂಧಿತರಿಂದ 12 ಗ್ರಾಂ MDMA crystal ವಶಕ್ಕೆ ಪಡೆಯಲಾಗಿದೆ. ಚಿಕ್ಕಮಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಡ್ರಗ್ಸ್ ಇನ್ಸ್ಪೆಕ್ಟರ್ಗಳ ಸೋಗಿನಲ್ಲಿ ಕಾಸ್ಟ್ಲಿ ಮೊಬೈಲ್ ದೋಚುತ್ತಿದ್ದ ಖದೀಮರು ಅರೆಸ್ಟ್
ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಸುತ್ತಮುತ್ತ ಡ್ರಗ್ ಇನ್ಸ್ಪೆಕ್ಟರ್ಗಳೆಂದು ಸಾರ್ವಜನಿಕರ ಬಳಿ ಬ್ರಾಂಡೆಡ್ ಮೊಬೈಲ್ಗಳನ್ನು ದೋಚಿ ಇದೀಗ ಹೆಬ್ಬಗೋಡಿ ಪೊಲೀಸರ ಅತಿಥಿಗಳಾಗಿದ್ದಾರೆ. ಜಿಗಣಿ ಸಮೀಪದ ಕ್ಯಾಲಸನಹಳ್ಳಿ ವಾಸಿಗಳಾದ ಚನ್ನಕೇಶವ, ವೆಂಕಟೇಶ, ಆಂದ್ರಪ್ರದೇಶದ ಚರಣ್, ಇಂದ್ರ ಹಾಗೂ ಬಾಗಲಕೋಟೆ ಬಸವರಾಜ್ ಬಂಧಿತ ಆರೋಪಿಗಳು.
ಇದನ್ನೂ ಓದಿ: ಮೈಸೂರು: ಕೆವೈಸಿ ಅಪ್‌ಡೇಟ್ ನೆಪ ಹೇಳಿ 1.45 ಲಕ್ಷ ರೂ ಮೋಸ, ವ್ಯಕ್ತಿಗೆ ಹೃದಯಾಘಾತ
ಇವರುಗಳಿಂದ ಸುಮಾರು 8 ಲಕ್ಷ ಮೌಲ್ಯದ ಐದು ಐಫೋನ್ ಸೇರಿದಂತೆ 8 ಬ್ರಾಂಡೆಡ್ ಮೊಬೈಲ್ ಪೋನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಜಿಗಣಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಇವರ ಮೇಲೆ ಮೊಬೈಲ್ ಕಳವು ಪ್ರಕರಣಗಳು ದಾಖಲಾಗಿದೆ.
ಇದನ್ನೂ ಓದಿ: ಗುಂಡಿನ ದಾಳಿ ನಡೆಸಿ ರಾಯಚೂರಿನ ವೈದ್ಯನ ಹತ್ಯೆಗೆ ಯತ್ನ: ಫೈರಿಂಗ್ ಮಾಡಿ ಎಸ್ಕೇಪ್ ಆದ ದುಷ್ಕರ್ಮಿಗಳು
ಹೆಬಿಚ್ಯುವಲ್ ಅಫೆಂಡರ್ಸ್ ಆದ ಆರೋಪಿಗಳು ಶೋಕಿಗಾಗಿ ಗ್ಯಾಂಗ್ ಕಟ್ಟಿಕೊಂಡು ಬ್ರಾಂಡೆಡ್ ಹೆಚ್ಚು ಬೆಲೆ ಬಾಳುವ ಮೊಬೈಲ್ಗಳನ್ನು ಮಾತ್ರ ಕಳವು ಮಾಡುತ್ತಿದ್ದರು. ಅದರಲ್ಲಿಯೂ ಡ್ರಗ್ ಇನ್ಸ್ಪೆಕ್ಟರ್ಗಳೆಂದು ಫೀಲ್ಡಿಗಿಳಿತ್ತಿದ್ದ ಆರೋಪಿಗಳು ಸಂಜೆ ವೇಳೆ ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಸಾಗುವವರನ್ನು ಟಾರ್ಗೆಟ್ ಮಾಡಿ ಅಡ್ಡಗಟ್ಟುತ್ತಿದ್ದರು.
ತಾವು ಡ್ರಗ್ ಇನ್ಸ್ಪೆಕ್ಟರ್ಗಳು, ನೀವು ಆಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಇದೆ ಎಂದು ಜೇಬುಗಳನ್ನು ಸರ್ಚ್ ಮಾಡಿ ಮೊಬೈಲ್ ಕಸಿದುಕೊಳ್ಳುತ್ತಿದ್ದರು. ಮಾತ್ರವಲ್ಲದೆ ಹೆಚ್ಚಿನ ತನಿಖೆಗಾಗಿ ಪೊಲೀಸ್ ಠಾಣೆಗೆ ಬನ್ನಿ ಎಂದು ಮೊಬೈಲ್ ತೆಗೆದುಕೊಂಡು ಎಸ್ಕೇಪ್ ಆಗುತ್ತಿದ್ದರು. ಈ ಬಗ್ಗೆ ಬಂದ ದೂರು ಆಧರಿಸಿ ಐವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:49 pm, Fri, 1 September 23