ನಕಲಿ ಚಿನ್ನದೊಂದಿಗೆ ಎಂಟ್ರಿ ಕೊಟ್ಟು ಅಸಲಿ ಚಿನ್ನ ಕದಿಯುತ್ತಿದ್ದ ಕಿಲಾಡಿ ಲೇಡಿ ಜೋಡಿ ಅರೆಸ್ಟ್ ಮಾಡಿದ ಬನಶಂಕರಿ ಪೊಲೀಸ್
ಚಿನ್ನ ಖರೀದಿಸುವ ನೆಪದಲ್ಲಿ ಜ್ಯುವೆಲರಿ ಶಾಪ್ಗಳಿಗೆ ಎಂಟ್ರಿ ಕೊಡುವ ಈ ಖತರ್ನಾಕ್ ಲೇಡಿ ಜೋಡಿ ಮಾಲೀಕನಿಗೆ ತಿಳಿಯದ ಹಾಗೆ ಚಿನ್ನ ಕದ್ದು ಪರಾರಿಯಾಗುತ್ತಿದ್ದರು. ಕೆಲವೇ ನಿಮಿಷದಲ್ಲಿ ಚಿನ್ನದ ವಸ್ತುಗಳನ್ನು ಕದಿಯುತ್ತಿದ್ದ ಗ್ಯಾಂಗನ್ನು ಸದ್ಯ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಈ ಜೋಡಿ ಹತ್ತು ವರ್ಷದ ಬಳಿಕ ಮತ್ತೆ ಸದ್ದು ಮಾಡಿ ಈಗ ಸಿಕ್ಕಿ ಬಿದ್ದಿದೆ.
ಬೆಂಗಳೂರು, ಸೆ.02: ಟೆಕ್ನಾಲಜಿ ಬೆಳೆಯುತ್ತಿದ್ದಂತೆಲ್ಲ ಕಳ್ಳರು ಕೂಡ ಹೊಸ ಹೊಸ ಮಾದರಿಯಲ್ಲಿ ಕಳ್ಳತನಕ್ಕೆ(Theft) ಇಳಿಯುತ್ತಿದ್ದಾರೆ. ಗಮನ ಬೇರೆಳೆ ಸೆಳೆದು ಕ್ಷಣಮಾತ್ರದಲ್ಲಿ ಲಕ್ಷ ಲಕ್ಷ ಬೆಳೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುವಂತಹ ಚಾಲಾಕಿತನವನ್ನು ಹೊಂದಿರುತ್ತಾರೆ. ಹೀಗಾಗಿ ಅಂಗಡಿ ಮಾಲೀಕರು ಕೂಡ ಹೆಚ್ಚಿನ ಗಮನವಹಿಸುವ ಅಗತ್ಯತೆ ಇದೆ. ಅದರಲ್ಲೂ ಜ್ಯುವೆಲರಿ ಮಾಲೀಕರು(Jewellery Shops) ಹೆಚ್ಚಿನ ಜಾಗ್ರತೆ ವಹಿಸಬೇಕು. ಏಕೆಂದರೆ ಚಾಲಾಕಿ ಖದೀಮರು ಕನ್ನ ಹಾಕುವುದೇ ಚಿನ್ನಕ್ಕೆ. ಸದ್ಯ ಬೆಂಗಳೂರಿನಲ್ಲಿ ಚಿನ್ನದ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಜೋಡಿಯನ್ನು ಹತ್ತು ವರ್ಷದ ಬಳಿಕ ಈಗ ಪೊಲೀಸರು ಬಂಧಿಸಿದ್ದಾರೆ.
ಚಿನ್ನ ಖರೀದಿಸುವ ನೆಪದಲ್ಲಿ ಜ್ಯುವೆಲರಿ ಶಾಪ್ಗಳಿಗೆ ಎಂಟ್ರಿ ಕೊಡುವ ಈ ಖತರ್ನಾಕ್ ಲೇಡಿ ಜೋಡಿ ಮಾಲೀಕನಿಗೆ ತಿಳಿಯದ ಹಾಗೆ ಚಿನ್ನ ಕದ್ದು ಪರಾರಿಯಾಗುತ್ತಿದ್ದರು. ಕೆಲವೇ ನಿಮಿಷದಲ್ಲಿ ಚಿನ್ನದ ವಸ್ತುಗಳನ್ನು ಕದಿಯುತ್ತಿದ್ದ ಗ್ಯಾಂಗನ್ನು ಸದ್ಯ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಈ ಜೋಡಿ ಹತ್ತು ವರ್ಷದ ಬಳಿಕ ಮತ್ತೆ ಸದ್ದು ಮಾಡಿ ಈಗ ಸಿಕ್ಕಿ ಬಿದ್ದಿದೆ. ರತ್ನ ಪೆರುಮಾಳ್ ಹಾಗೂ ಕೃಷ್ಣವೇಣಿ ಬಂಧಿತ ಆರೋಪಿಗಳು. ಇವರು ಬೆಂಗಳೂರಿನ ಚಿನ್ನದ ಅಂಗಡಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು.
ಈ ಕಿಲಾಡಿ ಜೋಡಿ ನಕಲಿ ಚಿನ್ನ ತಂದು ಅಸಲಿ ಚಿನ್ನ ಕದಿಯುತ್ತಿದ್ದರು
ಬಂಧಿತ ಮಹಿಳೆಯರು, ನಕಲಿ ಚಿನ್ನದೊಂದಿಗೆ ಚಿನ್ನದ ಅಂಗಡಿಗಳಿಗೆ ಎಂಟ್ರಿ ಕೊಡುತ್ತಿದ್ದರು. ಮಾಲೀಕರ ಗಮನ ಬೇರೆಡೆ ಸೆಳೆದು ನಕಲಿ ಚಿನ್ನವನ್ನಿಟ್ಟು ಅಸಲಿ ಚಿನ್ನದೊಂದಿಗೆ ಎಸ್ಕೇಪ್ ಆಗುತ್ತಿದ್ದರು. ತಮಿಳುನಾಡು ಮೂಲದವರಾದ ಈ ಮಹಿಳೆಯರು ಬೆಂಗಳೂರಿನ ಹಲವೆಡೆ ತಮ್ಮ ಕೈಚಳಕ ತೋರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೇವಸ್ಥಾನ, ಸಭೆ-ಸಮಾರಂಭಗಳಲ್ಲೂ ಈ ಆರೋಪಿಗಳು ಕೈಚಳಕ ತೋರಿಸಿದ್ದಾಋಎ. ಬನಶಂಕರಿ ಟೆಂಪಲ್ ಸೇರಿದಂತೆ ಹಲವು ಕಡೆ ಭಕ್ತರಿಗೆ ಗೊತ್ತಾಗದ ಹಾಗೆ ಚಿನ್ನ ಎಗರಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಗಮನ ಬೇರೆಡೆ ಸೆಳೆದು ಸರಗಳ್ಳತನ ಮಾಡಿದ್ದಾರೆ.
ಇದನ್ನೂ ಓದಿ: ಒಂದೇ ರಾತ್ರಿಯಲ್ಲಿ ಬೆಂಗಳೂರಿನ ಸಿಎಂಟಿಐ ಕ್ಯಾಂಪಸ್‌ನಿಂದ 23 ಶ್ರೀಗಂಧದ ಮರಗಳ ಕಳ್ಳತನ
ಕರ್ನಾಟಕ ಮಾತ್ರವಲ್ಲದೆ ಅನೇಕ ರಾಜ್ಯಗಳಲ್ಲೂ ತಮ್ಮ ಕೈಚಳಕ ತೋರಿಸಿರುವ ಖ್ಯಾತಿ ಈ ಆರೋಪಿಗಳಿಗೆ ಸಲ್ಲುತ್ತದೆ. ಈಗಲೂ ಹಲವು ಪೊಲೀಸ್ ಠಾಣೆಗಳಿಗೆ ಬೇಕಾಗಿರುವ ಈ ಆರೋಪಿಗಳು, ಬರೊಬ್ಬರಿ 10 ವರ್ಷಗಳ ನಂತರ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇವರು ಒಮ್ಮೆ ಕದ್ದು ಎಸ್ಕೇಪ್ ಆದ್ರೆ ಮತ್ತೆ ತಿಂಗಳಾನುಗಟ್ಟಲೇ ಕಳ್ಳತನ ಮಾಡುತ್ತಿರಲಿಲ್ಲ. ಬದಲಿಗೆ ಬೇರೆ ರಾಜ್ಯಕ್ಕೆ ಹೋಗಿ ತಮ್ಮ ಕೈಚಳಕ ತೋರಿಸುತ್ತಿದ್ದರು.
ಬನಶಂಕರಿ ಠಾಣಾ ವ್ಯಾಪ್ತಿಯ ಚಿನ್ನದ ಅಂಗಡಿಯಲ್ಲಿ ಕೈಚಳಕ ತೋರಿದ್ದ ಆರೋಪಿಗಳನ್ನು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ತಮಿಳುನಾಡಿಗೆ ತೆರಳಿ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ