ಬೆಂಗಳೂರಿನಲ್ಲಿ ಸೆಪ್ಟೆಂಬರ್ 1ರಂದು ಸುರಿದ ಮಳೆ ಈ ವರ್ಷದ ಅತ್ಯಂತ ದೊಡ್ಡ ವರ್ಣಾರ್ಭಟ

ಈ ಬಾರಿಯ ಮುಂಗಾರು ಕೈಕೊಟ್ಟಿದ್ದರಿಂದ ರಾಜ್ಯದ ಜನರು ಚಿಂತೆಗೀಡಾಗಿದ್ದರು. ಒಣಗುತ್ತಿರುವ ಬೆಳೆಗಳನ್ನು ಕಂಡು ರೈತರು ಕಂಗಾಲ ಆಗಿದ್ದಾರೆ. ಆಗಸ್ಟ್ 1 ರಿಂದ 31ರ (ರಾತ್ರಿ 8.30) ರವರೆಗೆ ಕೇವಲ 12.6 ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಸೆಪ್ಟೆಂಬರ್ 1ರಂದು ಸುರಿದ ಮಳೆ ಈ ವರ್ಷದ ಅತ್ಯಂತ ದೊಡ್ಡ ವರ್ಣಾರ್ಭಟ
ಮಳೆ
Follow us
ವಿವೇಕ ಬಿರಾದಾರ
|

Updated on: Sep 02, 2023 | 10:45 AM

ಬೆಂಗಳೂರು: ರಾಜ್ಯದಲ್ಲಿ ಮತ್ತೆ ವರುಣರಾಯನ (Karnataka Rain) ಆರ್ಭಟ ಆರಂಭವಾಗುವ ಸಾಧ್ಯತೆ. ಸೆಪ್ಟೆಂಬರ್​​ ತಿಂಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ. ಆಗಸ್ಟ್​ 31 ರಂದು ಬೆಂಗಳೂರಿನಲ್ಲಿ ಸರಿದ ಮಳೆ, ಈ ವರ್ಷದ ಅತ್ಯಂತ ದೊಡ್ಡ ವರುಣಾರ್ಭಟ ಎಂದು ವರದಿಯಾಗಿದೆ. ಆಗಸ್ಟ್​ 31 ರ ಸಂಜೆಯಿಂದ ಸೆಪ್ಟೆಂಬರ್ 1ರ ಬೆಳಿಗ್ಗೆ 8:30 ರವರೆಗೆ 136.5 ಮಿಮೀ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (KSNDMC) ವೀಕ್ಷಣಾಲಯ ತಿಳಿಸಿದೆ.

ಈ ಬಾರಿಯ ಮುಂಗಾರು ಕೈಕೊಟ್ಟಿದ್ದರಿಂದ ರಾಜ್ಯದ ಜನರು ಚಿಂತೆಗೀಡಾಗಿದ್ದರು. ಒಣಗುತ್ತಿರುವ ಬೆಳೆಗಳನ್ನು ಕಂಡು ರೈತರು ಕಂಗಾಲ ಆಗಿದ್ದಾರೆ. ಆಗಸ್ಟ್ 1 ರಿಂದ 31ರ (ರಾತ್ರಿ 8.30) ರವರೆಗೆ ಕೇವಲ 12.6 ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಆಗಸ್ಟ್ ಕೊನೆಯ ವಾರದ ಬಿಸಿಲಿನ ಬೇಗೆಗೆ ಜನರು ಬೆಂದು ಹೋಗಿದ್ದರು. ಆಗಸ್ಟ್ 28 ರಂದು, 32.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 4.5 ಡಿಗ್ರಿ ಸೆಲ್ಸಿಯಸ್​ ಹೆಚ್ಚಾಗಿತ್ತು.

ಇದನ್ನೂ ಓದಿ: ಸೆಪ್ಟೆಂಬರ್​ ತಿಂಗಳಲ್ಲಿ ಕೃಪೆ ತೋರುವ ವರುಣ, ರಾಜ್ಯಾದ್ಯಂತ ಮುಂದಿನ ಒಂದು ವಾರ ಮಳೆ ಸಾಧ್ಯತೆ

ಆದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ಮುಂದಿನ ಎರಡು ದಿನಗಳವರೆಗೆ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಮುಂದಿನ 24 ಗಂಟೆಗಳಲ್ಲಿ ಬೆಂಗಳೂರಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಜ್ಞ ಎ. ಪ್ರಸಾದ್ ತಿಳಿಸಿದ್ದಾರೆ.

ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳ ಕಾಲ ರಾಜ್ಯದಲ್ಲಿ ಮಿಂಚು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ