ಎನ್‌ಡಿಎ- ಎಐಎಡಿಎಂಕೆ ಬ್ರೇಕಪ್​​ಗೆ ಅಣ್ಣಾಮಲೈ ಕಾರಣ? ಬಿಜೆಪಿ ನಾಯಕನ ಕಿರು ಪರಿಚಯ

|

Updated on: Sep 26, 2023 | 7:19 PM

ಹಿಂದೂ ಧರ್ಮವನ್ನು ಅವಮಾನಿಸಿದ ಆರೋಪದಲ್ಲಿ ಫಾರ್ವರ್ಡ್ ಬ್ಲಾಕ್ ನಾಯಕ ದಿವಂಗತ ಯು ಮುತ್ತುರಾಮಲಿಂಗ ತೇವರ್ ಅವರಲ್ಲಿ ದ್ರಾವಿಡ ಧೀಮಂತ ನಾಯಕ ಸಿಎನ್ ಅಣ್ಣಾದೊರೈ ಅವರು ಕ್ಷಮೆಯಾಚಿಸಿದ್ದಾರೆ ಎಂದು ಅಣ್ಣಾಮಲೈ ಹೇಳಿಕೆ ಎಐಎಡಿಎಂಕೆಗೆ ಸಿಟ್ಟು ತರಿಸಿತ್ತು. ಎಐಎಡಿಎಂಕೆ ಈ ಹೇಳಿಕೆಯನ್ನು ಸುಳ್ಳು ಎಂದು ತಳ್ಳಿಹಾಕಿತು. ಸೆಪ್ಟೆಂಬರ್ 11 ರಂದು ಅಣ್ಣಾಮಲೈ ಅವರು ಅಣ್ಣಾದೊರೈ ಬಗ್ಗೆ ಹೇಳಲು 1956 ರಲ್ಲಿನ ಸಂಗತಿಯೊಂದನ್ನು ಉಲ್ಲೇಖಿಸಿದಾಗ ಈ ಸಂಬಂಧದಲ್ಲಿನ  ಬಿರುಕು ಮತ್ತಷ್ಟು  ಹೆಚ್ಚಿತು.

ಎನ್‌ಡಿಎ- ಎಐಎಡಿಎಂಕೆ ಬ್ರೇಕಪ್​​ಗೆ ಅಣ್ಣಾಮಲೈ ಕಾರಣ? ಬಿಜೆಪಿ ನಾಯಕನ ಕಿರು ಪರಿಚಯ
ಕೆ ಅಣ್ಣಾಮಲೈ
Follow us on

ದೆಹಲಿ ಸೆಪ್ಟೆಂಬರ್ 26: 2021ರ ತಮಿಳುನಾಡು ಚುನಾವಣೆಯ ಪೂರ್ವದಲ್ಲಿ ಬಿಜೆಪಿ (BJP), ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ರಾಜಕೀಯಕ್ಕೆ ಕರೆತರಲು ಪ್ರಯತ್ನಿಸಿತು. 1967 ರಿಂದ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (DMK) ಮತ್ತು ಪ್ರತಿಪಕ್ಷ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಅಧಿಕಾರ ನಡೆಸುತ್ತಿರುವ ರಾಜ್ಯದಲ್ಲಿ ರಜನಿಕಾಂತ್ ರಾಜಕೀಯವನ್ನು ಬುಡಮೇಲು ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ರಜನಿಕಾಂತ್ ಅವರು ರಜಿನಿ ಮಕ್ಕಳ್ ಮಂದ್ರಮ್ ಅನ್ನು ಸ್ಥಾಪಿಸಿದರು. ಆದರೆ ಡಿಸೆಂಬರ್ 2020 ರಲ್ಲಿ ಹಿಂದೆ ಸರಿದರು. 234 ಸದಸ್ಯರ ಸದನದಲ್ಲಿ ಬಿಜೆಪಿ ಕೇವಲ ನಾಲ್ಕು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗುವುದರೊಂದಿಗೆ ಡಿಎಂಕೆ ತಿಂಗಳ ನಂತರ ಎಐಎಡಿಎಂಕೆಯಿಂದ ಅಧಿಕಾರವನ್ನು ಕಸಿದುಕೊಂಡಿತು. 2019 ರಲ್ಲಿ ಭಾರತೀಯ ಪೊಲೀಸ್ ಸೇವೆಯನ್ನು (IPS) ತ್ಯಜಿಸಿದ 39 ವರ್ಷದ ಕೆ ಅಣ್ಣಾಮಲೈ ಅವರು ಪಕ್ಷಕ್ಕೆ ಸೇರಿದ ಒಂದು ವರ್ಷದ ನಂತರ ಜುಲೈ 2021 ರಲ್ಲಿ ಅವರಿಗೆ ರಾಜ್ಯ ಬಿಜೆಪಿ ಮುಖ್ಯಸ್ಥರ ಹುದ್ದೆ ನೀಡಲಾಯಿತು.

ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ರಾಜ್ಯದಲ್ಲಿ ತನ್ನ ಸೀಮಿತ ಪ್ರಭಾವವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದಂತೆ ಅಣ್ಣಾಮಲೈ ಅವರ ಸಿಡುಕಿನ ಹೇಳಿಕೆಗಳಿಂದಾಗಿ ಉಭಯ ಪಕ್ಷಗಳ ನಡುವಿನ ಬಾಂಧವ್ಯ ಹದಗೆಟ್ಟಿತು. ಇದರ ಪರಿಣಾಮ ಸೋಮವಾರ ಎಐಎಡಿಎಂಕೆ ಬಿಜೆಪಿ ನೇತೃತ್ವದ ಎನ್​​ಡಿಎ ಮೈತ್ರಿಕೂಟದಿಂದ ಹೊರಬಂದಿದೆ.

ಹಿಂದೂ ಧರ್ಮವನ್ನು ಅವಮಾನಿಸಿದ ಆರೋಪದಲ್ಲಿ ಫಾರ್ವರ್ಡ್ ಬ್ಲಾಕ್ ನಾಯಕ ದಿವಂಗತ ಯು ಮುತ್ತುರಾಮಲಿಂಗ ತೇವರ್ ಅವರಲ್ಲಿ ದ್ರಾವಿಡ ಧೀಮಂತ ನಾಯಕ ಸಿಎನ್ ಅಣ್ಣಾದೊರೈ ಅವರು ಕ್ಷಮೆಯಾಚಿಸಿದ್ದಾರೆ ಎಂದು ಅಣ್ಣಾಮಲೈ ಹೇಳಿಕೆ ಎಐಎಡಿಎಂಕೆಗೆ ಸಿಟ್ಟು ತರಿಸಿತ್ತು. ಎಐಎಡಿಎಂಕೆ ಈ ಹೇಳಿಕೆಯನ್ನು ಸುಳ್ಳು ಎಂದು ತಳ್ಳಿಹಾಕಿತು. ಸೆಪ್ಟೆಂಬರ್ 11 ರಂದು ಅಣ್ಣಾಮಲೈ ಅವರು ಅಣ್ಣಾದೊರೈ ಬಗ್ಗೆ ಹೇಳಲು 1956 ರಲ್ಲಿನ ಸಂಗತಿಯೊಂದನ್ನು ಉಲ್ಲೇಖಿಸಿದಾಗ ಈ ಸಂಬಂಧದಲ್ಲಿನ  ಬಿರುಕು ಮತ್ತಷ್ಟು  ಹೆಚ್ಚಿತು.

ಬಿಜೆಪಿಯ ರಾಜ್ಯ ಘಟಕವು ಅಣ್ಣಾದೊರೈ ಮತ್ತು ದಿವಂಗತ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ಅವಮಾನಿಸಿದೆ. ಅವರ ಸಿದ್ಧಾಂತವನ್ನು ಟೀಕಿಸುತ್ತಿದೆ ಎಂದು ಎಐಎಡಿಎಂಕೆ ನಾಯಕ ಕೆಪಿ ಮುನುಸ್ವಾಮಿ ಆರೋಪಿಸಿದ್ದಾರೆ. ಎಐಎಡಿಎಂಕೆ ಯಾರನ್ನೂ ಹೆಸರಿಸಿಲ್ಲ ಆದರೆ ಅಣ್ಣಾಮಲೈ ಹೇಳಿಕೆಗಾಗಿ ಬಿಜೆಪಿಯ ರಾಜ್ಯ ನಾಯಕತ್ವವನ್ನು ದೂರಿದೆ.

ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು ಕಳೆದ ವಾರದ ಕೊನೆಯಲ್ಲಿ ಎಐಎಡಿಎಂಕೆಯ ನಿಯೋಗವನ್ನು ಭೇಟಿಯಾಗಿದ್ದು ಅಣ್ಣಾಮಲೈ ವಿರುದ್ಧ ಕ್ರಮ ಕೈಗೊಳ್ಳಲು ಅದರ ಕೊನೆಯ ಪ್ರಯತ್ನವಾಗಿ ಕಂಡುಬಂದಿದೆ. ಎನ್‌ಡಿಎಯಿಂದ ಎಐಎಡಿಎಂಕೆಯ ನಿರ್ಗಮನವು ಬಿಜೆಪಿ ನಾಯಕತ್ವದಿಂದ ಅಣ್ಣಾಮಲೈ ಅವರ ಬೆಂಬಲವನ್ನು ಒತ್ತಿಹೇಳಿದೆ. ಜುಲೈನಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಣ್ಣಾಮಲೈ ಅವರನ್ನು ತಂಬಿ (ಕಿರಿಯ ಸಹೋದರ) ಎಂದು ತಮಿಳಿನಲ್ಲಿ ಸಂಬೋಧಿಸಿದ್ದು, ಅವರ ಕೆಲಸವನ್ನು ಶ್ಲಾಘಿಸಿದ್ದರು.

ಎಐಎಡಿಎಂಕೆ ಅಣ್ಣಾಮಲೈ ಅವರನ್ನು ಬಾಯಿಬಡುಕ ರಾಜಕಾರಣಿ ಎಂದು ನೋಡಿದರೆ, ಬಿಜೆಪಿ ತಮಿಳುನಾಡಿನಲ್ಲಿ ಶುದ್ಧ ಮತ್ತು ಭ್ರಷ್ಟಾಚಾರ ಮುಕ್ತ ರಾಜಕೀಯಕ್ಕಾಗಿ ಐಪಿಎಸ್ ತ್ಯಜಿಸಿದ ಪ್ರಾಮಾಣಿಕ ನಾಯಕ ಎಂದು ಬಿಂಬಿಸಲು ಪ್ರಯತ್ನಿಸಿತು.

ಇದನ್ನೂ ಓದಿ: ಎನ್‌ಡಿಎಯಿಂದ ಹೊರನಡೆದ ನಂತರ ಎಐಎಡಿಎಂಕೆ ಮುಖ್ಯಸ್ಥ ಇಪಿಎಸ್​​ನ್ನು ಮೂರ್ಖ ರಾಜನಾಗಿ ಚಿತ್ರಿಸಿದ ಬಿಜೆಪಿ

ಅಣ್ಣಾಮಲೈ ಪರಿಚಯ

ತಮಿಳುನಾಡಿನ ಕರೂರ್ ಜಿಲ್ಲೆಯ ತೊಟ್ಟಂಪಟ್ಟಿ ಗ್ರಾಮದಲ್ಲಿ 1984 ರಲ್ಲಿ ಜನಿಸಿದ ಅಣ್ಣಾಮಲೈ ಅವರು ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಲಕ್ನೋದಿಂದ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿಯನ್ನು ಪಡೆಯುವ ಮೊದಲು ಕೊಯಮತ್ತೂರಿನಲ್ಲಿ ಎಂಜಿನಿಯರಿಂಗ್ ಓದಿದರು. ರಜನಿಕಾಂತ್ ಅವರು ತಮ್ಮ ಪಕ್ಷವನ್ನು ಪ್ರಾರಂಭಿಸುವ ಸಮಯದಲ್ಲಿ ಜೂನ್ 2019 ರಲ್ಲಿ ಐಪಿಎಸ್ ತೊರೆದಾಗ ಅವರು ಬೆಂಗಳೂರು ದಕ್ಷಿಣ ಉಪ ಪೊಲೀಸ್ ಕಮಿಷನರ್ ಆಗಿದ್ದರು.

ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಬಿಜೆಪಿಯನ್ನು ಮುಖ್ಯವಾಹಿನಿಗೆ ತಂದಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ. ತಮ್ಮ ಪ್ರತಿದಿನದ ಪತ್ರಿಕಾಗೋಷ್ಠಿಗಳ ಮೂಲಕ, ಅಣ್ಣಾಮಲೈ ನಿಯಮಿತವಾಗಿ ಸುದ್ದಿಯಲ್ಲಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಎಐಎಡಿಎಂಕೆ ವಿರುದ್ಧವೂ ಸೇರಿದಂತೆ ಅವರ ಹೇಳಿಕೆಗಳು ವಿವಾದಕ್ಕೀಡಾಗಿದ್ದವು.

ರಾಜ್ಯ ಬಿಜೆಪಿ ಘಟಕದಲ್ಲೂ ಅವರಿಗೆ ಟೀಕಾಕಾರರಿದ್ದಾರೆ. ಅವರು ಪಕ್ಷವನ್ನು ಬೆಳೆಸಿದ ಮತ್ತು ಕೆಲಸ ಮಾಡುತ್ತಿರುವ ಬಹಳಷ್ಟು ಅನುಭವಿಗಳು ಮತ್ತು ಕಾರ್ಯಕರ್ತರನ್ನು ಬದಿಗೆ ಸರಿಸಿದ್ದಾರೆ ಎಂದು ಬಿಜೆಪಿಯ ಮತ್ತೊಬ್ಬ ನಾಯಕರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಎಐಎಡಿಎಂಕೆ ಜೊತೆಗಿನ ಮೈತ್ರಿಯನ್ನು ಪಕ್ಷವು ಮುಂದುವರಿಸಿದರೆ ಈ ವರ್ಷದ ಆರಂಭದಲ್ಲಿ ಮುಚ್ಚಿದ ಬಾಗಿಲಿನ ಬಿಜೆಪಿ ಸಭೆಯಲ್ಲಿ ಅಣ್ಣಾಮಲೈ ರಾಜಕೀಯ ತ್ಯಜಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ವರದಿಯಾಗಿದೆ. ಸಂದರ್ಶನವೊಂದರಲ್ಲಿ, ಅವರು ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ಅವರ ಶಿಕ್ಷೆಯ ಕುರಿತು ಮಾತನಾಡಿದರು. ಜೂನ್‌ನಲ್ಲಿ ಅವರ ವಿರುದ್ಧ ನಿರ್ಣಯವನ್ನು ಅಂಗೀಕರಿಸಲು ಎಐಎಡಿಎಂಕೆಯನ್ನು ಪ್ರೇರೇಪಿಸಿದರು. ಅಂದಿನಿಂದ ಎಐಎಡಿಎಂಕೆ ತನ್ನನ್ನು ಅಧಿಕಾರಕ್ಕೆ ತರುವಂತೆ ಬಿಜೆಪಿ ನಾಯಕತ್ವವನ್ನು ಕೇಳುತ್ತಿತ್ತು ಎನ್ನಲಾಗಿದೆ. 2021ರಲ್ಲಿ ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ, ಅವರು ದ್ರಾವಿಡ ರಾಜಕಾರಣಿ ಎಂದು ಕರೆಯಲು ಬಯಸುವುದಿಲ್ಲ ಎಂದು ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ