ಬಿಜೆಪಿ ಮುಂದೊಂದು ದಿನ ರಾಮಮಂದಿರದ ಮೇಲೆ ಬಾಂಬ್ ಸ್ಫೋಟಿಸಿ ಮುಸ್ಲಿಮರನ್ನು ದೂಷಿಸುತ್ತದೆ: ಬಿಆರ್ ಪಾಟೀಲ್

ಹಿಂದೂ ಧರ್ಮದ ಬುನಾದಿಯನ್ನೇ ಪ್ರಶ್ನಿಸಲು ಹೊರಟ ಕಾಂಗ್ರೆಸ್ಸಿಗರು ಈಗಲೇ ರಾಮಮಂದಿರದ ಮೇಲೆ ಕಾಕದೃಷ್ಟಿ ಬೀರಿದ್ದಾರೆ.ರಾಮಮಂದಿರವನ್ನೇ ಅಲುಗಾಡಿಸಿ ಹಿಂದೂ-ಮುಸ್ಲಿಂ ದಂಗೆಯೆಬ್ಬಿಸಿ ಅದನ್ನು ಸರ್ಕಾರದ ತಲೆಗೆ ಕಟ್ಟಲು ಕಾಂಗ್ರೆಸ್ ಪಕ್ಷ ಈಗಾಗಲೇ ಸಜ್ಜಾಗಿರುವ ವಿಚಾರವನ್ನು ಸಚಿವರಾದ ಬಿ. ಆರ್. ಪಾಟೀಲರು ಬಾಯಿ ತಪ್ಪಿ ಹೇಳಿದ್ದಾರೆ ಎಂದು  ಬಿಜೆಪಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ವಿಡಿಯೊ ಶೇರ್ ಮಾಡಿದೆ.

ಬಿಜೆಪಿ ಮುಂದೊಂದು ದಿನ ರಾಮಮಂದಿರದ ಮೇಲೆ ಬಾಂಬ್ ಸ್ಫೋಟಿಸಿ ಮುಸ್ಲಿಮರನ್ನು ದೂಷಿಸುತ್ತದೆ: ಬಿಆರ್ ಪಾಟೀಲ್
ಬಿಆರ್ ಪಾಟೀಲ್
Follow us
|

Updated on: Sep 26, 2023 | 12:42 PM

ದೆಹಲಿ ಸೆಪ್ಟೆಂಬರ್ 26: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ (Lok sabha Election)  ಹಿಂದೂಗಳ ಮತಗಳನ್ನು ಸೆಳೆಯಲು ಬಿಜೆಪಿ ರಾಮಮಂದಿರದ (Ram Mandir) ಮೇಲೆ ಬಾಂಬ್ ಸ್ಫೋಟಿಸಿ ಮುಸ್ಲಿಂ ಸಮುದಾಯದ ಮೇಲೆ ದೂಷಿಸುವ ಸಾಧ್ಯತೆಗಳಿವೆ ಎಂದು ಕರ್ನಾಟಕದ ಕಾಂಗ್ರೆಸ್ (Congress) ಶಾಸಕ ಬಿಆರ್ ಪಾಟೀಲ್ (BR Patil) ಹೇಳಿದ್ದಾರೆ. ಕರ್ನಾಟಕದ ಆಳಂದದ ಕಾಂಗ್ರೆಸ್ ಶಾಸಕರಾಗಿರುವ ಪಾಟೀಲ್, “2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವನ್ನು ಖಚಿತಪಡಿಸಿಕೊಳ್ಳಲು, ಬಿಜೆಪಿಯವರು ರಾಮ ಮಂದಿರದ ಮೇಲೆ ಬಾಂಬ್ ಹಾಕಿ ಮುಸ್ಲಿಮರನ್ನು ದೂರುತ್ತಾರೆ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮ X ನಲ್ಲಿ ಪಾಟೀಲ್ ಹೇಳಿಕೆಯ ವಿಡಿಯೊವನ್ನು ಹಂಚಿಕೊಂಡ ಬಿಜೆಪಿಯ ಕರ್ನಾಟಕ ಘಟಕ , ಕಾಂಗ್ರೆಸ್ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮು ಉದ್ವಿಗ್ನತೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. ಹಿಂದೂ ಧರ್ಮದ ಬುನಾದಿಯನ್ನೇ ಪ್ರಶ್ನಿಸಲು ಹೊರಟ ಕಾಂಗ್ರೆಸ್ಸಿಗರು ಈಗಲೇ ರಾಮಮಂದಿರದ ಮೇಲೆ ಕಾಕದೃಷ್ಟಿ ಬೀರಿದ್ದಾರೆ.ರಾಮಮಂದಿರವನ್ನೇ ಅಲುಗಾಡಿಸಿ ಹಿಂದೂ-ಮುಸ್ಲಿಂ ದಂಗೆಯೆಬ್ಬಿಸಿ ಅದನ್ನು ಸರ್ಕಾರದ ತಲೆಗೆ ಕಟ್ಟಲು ಕಾಂಗ್ರೆಸ್ ಪಕ್ಷ ಈಗಾಗಲೇ ಸಜ್ಜಾಗಿರುವ ವಿಚಾರವನ್ನು ಸಚಿವರಾದ ಬಿ. ಆರ್. ಪಾಟೀಲರು ಬಾಯಿ ತಪ್ಪಿ ಹೇಳಿದ್ದಾರೆ ಎಂದು  ಹೇಳಿದೆ.

ರಾಮ ಮಂದಿರದ ವಿಷಯದಲ್ಲಿ ರಾಜಕೀಯ ಜಟಾಪಟಿ

2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಮುಂದಿನ ವರ್ಷ ಜನವರಿಯಲ್ಲಿ ಅಯೋಧ್ಯೆಯ ರಾಮಮಂದಿರವನ್ನು ಭಕ್ತರಿಗಾಗಿ ತೆರೆಯಲಾಗುವುದು. ಬಹುನಿರೀಕ್ಷಿತ ದೇವಾಲಯದ ಉದ್ಘಾಟನೆಯು ಆಡಳಿತಾರೂಢ ಬಿಜೆಪಿಗೆ ಮೈಲುಗಲ್ಲು ಎಂದು ನಿರೀಕ್ಷಿಸಲಾಗಿದೆ. ತನ್ನ ಸರ್ಕಾರದ ವೈಫಲ್ಯಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿ ಬಿಜೆಪಿ ರಾಮಮಂದಿರವನ್ನು ಬಳಸುತ್ತಿದೆ ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಆರೋಪಿಸಿದೆ. ಇತ್ತ, ಕಾಂಗ್ರೆಸ್​​ನಿಂದಾಗಿ ಮಂದಿರ ನಿರ್ಮಾಣಕ್ಕೆ ಅಡ್ಡಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ರಾಮಮಂದಿರ-ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಮಹತ್ವದ ತೀರ್ಪಿನ ನಂತರ ಆಗಸ್ಟ್ 2020 ರಲ್ಲಿ ರಾಮಮಂದಿರ ನಿರ್ಮಾಣ ಪ್ರಾರಂಭವಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5, 2020 ರಂದು ದೇವಾಲಯದ ಶಂಕುಸ್ಥಾಪನೆ ಮಾಡಿದರು.

ಇದನ್ನೂ ಓದಿ:  Rozgar Mela 2023: 9ನೇ ಉದ್ಯೋಗ ಮೇಳ, 51 ಸಾವಿರ ಯುವಕ-ಯುವತಿಯರಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ

ರಮೇಶ್ ಬಿಧುರಿ-ಡ್ಯಾನಿಶ್ ಅಲಿ ವಿವಾದ

ಸಂಸತ್​​ನಲ್ಲಿ ಬಿಎಸ್‌ಪಿ ಸದಸ್ಯ ಡ್ಯಾನಿಶ್ ಅಲಿ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧುರಿ ಕೋಮುದ್ವೇಷದ ಹೇಳಿಕೆಗಳ ಬಗ್ಗೆ ಭಾರೀ ಆಕ್ರೋಶದ ನಡುವೆ ಕಾಂಗ್ರೆಸ್ ಶಾಸಕರ ಈ ಹೇಳಿಕೆಗಳು ಬಂದಿವೆ. ಭಾರೀ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಸದನದಲ್ಲಿ ಅಸಂವಿಧಾನಿಕ ಪದ ಬಳಕೆ ಮಾಡಿದ್ದಕ್ಕೆ ಬಿಜೆಪಿ ಬಿಧುರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಏತನ್ಮಧ್ಯೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಅಲಿ ಅವರು ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ಮೂಲಕ ಬಿಧುರಿ ಅವರನ್ನು ಪ್ರಚೋದಿಸಿದಾಗ ಅವರು ತಾಳ್ಮೆ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ವಾರ ಲೋಕಸಭೆಯಲ್ಲಿ ಚಂದ್ರಯಾನ-3 ಮಿಷನ್‌ನ ಯಶಸ್ಸಿನ ಚರ್ಚೆಯಲ್ಲಿ ರಮೇಶ್ ಬಿಧುರಿ ಅವರು ಬಿಎಸ್‌ಪಿ ಸಂಸದರ ವಿರುದ್ಧ ಕೋಮು ದ್ವೇಷದ ಮಾತುಗಳನ್ನಾಡಿದ್ದರು. ಬಿಧುರಿ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿ ವಿರೋಧ ಪಕ್ಷಗಳು ಬಿಜೆಪಿ ಮೇಲೆ ಒತ್ತಡ ಹೇರಿದ್ದವು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ