AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡಿನ ತೇಣಿ ಜೈಲಿನಿಂದ 17 ವಿಚಾರಣಾಧೀನ ಕೈದಿಗಳು ಎಸ್ಕೇಪ್: ನಾಲ್ವರ ಬಂಧನ!

ತಮಿಳುನಾಡಿನ ತೇಣಿ ಜಿಲ್ಲೆಯ ತೆಕ್ಕಂಪಟ್ಟಿ ಉಪ ಜೈಲಿನಲ್ಲಿ ನಕಲಿ ಅನಾರೋಗ್ಯದ ನೆಪ ಒಡ್ಡಿ ಸಿಬ್ಬಂದಿ ಮೇಲೆ ದಾಳಿ ನಡೆಸಿದ 17 ವಿಚಾರಣಾಧೀನ ಕೈದಿಗಳು ಪರಾರಿಯಾಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಉಳಿದವರ ಪತ್ತೆಗೆ 17 ವಿಶೇಷ ಪಡೆಗಳನ್ನು ರಚಿಸಲಾಗಿದೆ. ನೆರೆ ರಾಜ್ಯ ಕೇರಳ ಗಡಿಯಲ್ಲೂ ಹೈ ಅಲರ್ಟ್ ಘೋಷಿಸಿ ಕಂಬಿಂಗ್ ನಡೆಸಲಾಗುತ್ತಿದೆ.

ತಮಿಳುನಾಡಿನ ತೇಣಿ ಜೈಲಿನಿಂದ 17 ವಿಚಾರಣಾಧೀನ ಕೈದಿಗಳು ಎಸ್ಕೇಪ್: ನಾಲ್ವರ ಬಂಧನ!
ಬಂಧಿಸಲ್ಪಟ್ಟ ಕೈದಿಗಳು
ಭಾವನಾ ಹೆಗಡೆ
|

Updated on:Oct 27, 2026 | 12:02 PM

Share

ಮುಖ್ಯಾಂಶಗಳು

  • ಸುಳ್ಳು ವೈದ್ಯಕೀಯ ನೆಪ ಹೇಳಿ ಸಿಬ್ಬಂದಿ ಮೇಲೆ ದಾಳಿ ನಡೆಸಿದ 17 ಕೈದಿಗಳು ಪರಾರಿ.
  • ನಾಲ್ವರನ್ನು ಬಂಧಿಸಿದ ತಮಿಳುನಾಡು ಪೊಲೀಸರು, 17 ವಿಶೇಷ ಪಡೆಗಳಿಂದ ತೀವ್ರ ಶೋಧ.
  • ಕೇರಳ ಗಡಿ ಭಾಗದ ಅರಣ್ಯಗಳಲ್ಲಿ ತಮಿಳುನಾಡು ಪೊಲೀಸರಿಂದ ತೀವ್ರ ಕಂಬಿಂಗ್ ಕಾರ್ಯಾಚರಣೆ.

ಚೆನ್ನೈ, ಅಕ್ಟೋಬರ್ 27: ತಮಿಳುನಾಡಿನ ತೇಣಿ ಜಿಲ್ಲೆಯ ತೆಕ್ಕಂಪಟ್ಟಿ ಉಪ ಜೈಲಿನಲ್ಲಿ ಸೋಮವಾರ ತಡರಾತ್ರಿ ಭೀಕರ ಜೈಲು ಬ್ರೇಕ್ ನಡೆದಿದ್ದು, ಒಟ್ಟು 17 ವಿಚಾರಣಾಧೀನ ಕೈದಿಗಳು ಸಿಬ್ಬಂದಿ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಕಳೆದ 30 ವರ್ಷಗಳಲ್ಲೇ ರಾಜ್ಯದಲ್ಲಿ ನಡೆದ ಅತ್ಯಂತ ದೊಡ್ಡ ಜೈಲು ಪರಾರಿ ಪ್ರಕರಣ ಇದಾಗಿದ್ದು, ಕರಾವಳಿ ಹಾಗೂ ನೆರೆ ರಾಜ್ಯ ಕೇರಳದ ಗಡಿ ಭಾಗಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ನಕಲಿ ಅನಾರೋಗ್ಯದ ನೆಪ ಒಡ್ಡಿ ಸಿಬ್ಬಂದಿ ಮೇಲೆ ಹಲ್ಲೆ

ಸೋಮವಾರ ರಾತ್ರಿ ಸುಮಾರು 10.30ರ ವೇಳೆಗೆ, ಜೈಲಿನಲ್ಲಿದ್ದ ಸಹ ಕೈದಿಯೊಬ್ಬನಿಗೆ ಫಿಟ್ಸ್ (ಮೂರ್ಛೆ ರೋಗ) ಬಂದಿದೆ ಎಂದು ಸಬೂಬು ಹೇಳಿ ಕೈದಿಗಳು ಜೈಲು ಸಿಬ್ಬಂದಿಯ ನೆರವು ಕೋರಿದ್ದರು. ಇದನ್ನು ನಂಬಿ ಭದ್ರತಾ ಸಿಬ್ಬಂದಿ ಜೈಲು ಕೊಠಡಿಯೊಳಗೆ ಪ್ರವೇಶಿಸುತ್ತಿದ್ದಂತೆ, ಅವರ ಮೇಲೆ ಕೈದಿಗಳು ಏಕಾಏಕಿ ಎರಗಿ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಈ ಗಲಾಟೆಯಲ್ಲಿ ಜೈಲು ಸಿಬ್ಬಂದಿ ಸೇರಿದಂತೆ ಮೂವರು ಗಾಯಗೊಂಡಿದ್ದು, ಅವರನ್ನು ತೇಣಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

LIVE TV

17 ಪ್ರತ್ಯೇಕ ತಂಡಗಳಿಂದ ಕಾರ್ಯಾಚರಣೆ, ಕೇರಳದಲ್ಲೂ ಹೈ ಅಲರ್ಟ್

ಘಟನೆ ತಿಳಿಯುತ್ತಿದ್ದಂತೆ ಎಚ್ಚೆತ್ತ ತಮಿಳುನಾಡು ಪೊಲೀಸರು ತಕ್ಷಣವೇ ಬಲೆ ಬೀಸಿದ್ದು, ಮಂಗಳವಾರ ಬೆಳಗಿನ ವೇಳೆಗೆ ಪರಾರಿಯಾಗಿದ್ದ ನಾಲ್ವರು ಕೈದಿಗಳಾದ ಸಿಲಂಬರಸನ್, ಪ್ರವೀಣ್ ಕುಮಾರ್, ರಾಜಾ ಸಿಕಂದರ್ ಮತ್ತು ರಾಜ್‌ಕುಮಾರ್ ಅವರನ್ನು ಬಂಧಿಸಿದ್ದಾರೆ. ಉಳಿದ 13 ಕೈದಿಗಳ ಪತ್ತೆಗೆ 17 ಪ್ರತ್ಯೇಕ ವಿಶೇಷ ಪೊಲೀಸ್ ಪಡೆಗಳನ್ನು ರಚಿಸಲಾಗಿದೆ. ತೇಣಿ ಜಿಲ್ಲೆಯು ಕೇರಳ ರಾಜ್ಯದ ಗಡಿಗೆ ಹೊಂದಿಕೊಂಡಿರುವುದರಿಂದ, ಕೇರಳದ ಇಡುಕ್ಕಿ ಜಿಲ್ಲೆ ಸೇರಿದಂತೆ ಗಡಿ ಅರಣ್ಯ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿಸಲಾಗಿದೆ.

1995ರಲ್ಲಿ ವೆಲ್ಲೂರು ಕೋಟೆಯಲ್ಲಿದ್ದ ಎಲ್‌ಟಿಟಿಇ (LTTE) ಶಂಕಿತರು ಸುರಂಗ ತೋಚಿ ಪರಾರಿಯಾದ ನಂತರ ನಡೆದ ಅತಿದೊಡ್ಡ ಜೈಲು ಬ್ರೇಕ್ ಇದಾಗಿದೆ. ಕಾನೂನು ಸಚಿವ ಸಿ.ಟಿ.ಆರ್. ನಿರ್ಮಲ್ ಕುಮಾರ್ ಅವರು ತನಿಖೆಗೆ ಆದೇಶಿಸಿದ್ದು, ಭದ್ರತಾ ಲೋಪ ಎಸಗಿದ ಜೈಲು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:59 am, Tue, 27 October 26

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More