ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ವರದಿಯೊಂದು ತಮಿಳುನಾಡು, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರವು 2021-22ರಲ್ಲಿ ಒಟ್ಟು ದೇಶೀಯ ಪ್ರವಾಸಿ ಭೇಟಿಗಳಲ್ಲಿ 65.41% ರಷ್ಟು ಪಾಲು ಹೊಂದಿದೆ ಎಂದು ಹೇಳುತ್ತದೆ.
ಪ್ರವಾಸೋದ್ಯಮ ಸಚಿವಾಲಯ ಬಿಡುಗಡೆ ಮಾಡಿದ ಭಾರತೀಯ ಪ್ರವಾಸೋದ್ಯಮ ಅಂಕಿಅಂಶಗಳು 2022 ರ ಪ್ರಕಾರ ತಮಿಳುನಾಡಿನ ಮಾಮಲ್ಲಪುರಂ (Mamallapuram), ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು (Unesco world heritage site) ವರ್ಗೀಕರಿಸಲ್ಪಟ್ಟಿದೆ. ಜೊತೆಗೆ ವಿದೇಶಿ ಪ್ರವಾಸಿಗರ ಭೇಟಿ ಸಂಖ್ಯೆಯಲ್ಲಿ ತಾಜ್ ಮಹಲ್ (Taj Mahal) ಅನ್ನು ಸೋಲಿಸಿದೆ.
ವರದಿಯ ಪ್ರಕಾರ 2021-22ರಲ್ಲಿ 1,44,984 ವಿದೇಶಿ ಪ್ರವಾಸಿಗರು ಚೆನ್ನೈನಿಂದ 60 ಕಿಮೀ ದೂರದಲ್ಲಿರುವ ಮಾಮಲ್ಲಪುರಂಗೆ ಬಂದಿದ್ದಾರೆ. ಟಿಕೆಟ್ ಪ್ರವೇಶದ ಲೆಕ್ಕದಲ್ಲಿ ಟಾಪ್ 10 ಅತ್ಯಂತ ಜನಪ್ರಿಯ ಮತ್ತು ಕೇಂದ್ರೀಯ ಸಂರಕ್ಷಿತ ಸ್ಮಾರಕಗಳಿಗೆ ಭೇಟಿ ನೀಡಿದ ವಿದೇಶಿಯರಲ್ಲಿ ಈ ಸಂಖ್ಯೆ 45.50 ಪ್ರತಿಶತದಷ್ಟಿದೆ.
ಆಗ್ರಾದಲ್ಲಿರುವ ತಾಜ್ ಮಹಲ್ 38,922 ವಿದೇಶಿ ಸಂದರ್ಶಕರೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಒಟ್ಟು 12.21 ಪ್ರತಿಶತವನ್ನು ಭೇಟಿಕಾರರನ್ನು ಹೊಂದಿದೆ. ಕೇಂದ್ರದ ಪಟ್ಟಿಯಲ್ಲಿರುವ ಟಾಪ್ 10 ಸ್ಮಾರಕಗಳಲ್ಲಿ ಆರು ತಮಿಳುನಾಡಿನಲ್ಲಿವೆ. ಅವುಗಳೆಂದರೆ ಹುಲಿ-ತಲೆಯ, ಬಂಡೆಗಲ್ಲುಗಳಿಂದ ಕತ್ತರಿಸಿದ ದೇವಾಲಯ ಮತ್ತು ಚೆಂಗಲ್ಪಟ್ಟು ಜಿಲ್ಲೆಯ ಕರಾವಳಿ ಕುಗ್ರಾಮವಾದ ಸಾಳುವಂಕುಪ್ಪಂನಲ್ಲಿರುವ ಇತರ ಎರಡು ಸ್ಮಾರಕಗಳು, ಗಿಂಗಿ ಜಿಲ್ಲೆಯ ಬಳಿಯ ಗಿಂಗಿ ಕೋಟೆ, ಕನ್ಯಾಕುಮಾರಿ ಜಿಲ್ಲೆಯ ವಟ್ಟಕೊಟ್ಟೈ ಕೋಟೆ, ತಿರುಮಯಂ ಕೋಟೆ, ಬಂಡೆಯಿಂದ ಬಂಡೆಗಲ್ಲುಗಳಿಂದ ಕೆತ್ತಿದ ಜೈನ ದೇವಾಲಯ ಮತ್ತು ಪುದುಕೊಟ್ಟೈ ಜಿಲ್ಲೆಯ ಸಿಟ್ಟನವಾಸಲ್.
13,598 ವಿದೇಶಿ ಪ್ರವಾಸಿಗರನ್ನು ಹೊಂದಿರುವ ಆಗ್ರಾ ಕೋಟೆ (ಉತ್ತರ ಪ್ರದೇಶ). 8.456 ಸಂದರ್ಶಕರನ್ನು ಹೊಂದಿರುವ ಕುತುಬ್ ಮಿನಾರ್ (ದೆಹಲಿ) ಮತ್ತು 5,579 ಭೇಟಿಕಾರರನ್ನು ಹೊಂದಿರುವ ಕೆಂಪು ಕೋಟೆ (ದೆಹಲಿ) ಪಟ್ಟಿಯಲ್ಲಿರುವ ಇತರ ಕೆಲವು ಸ್ಮಾರಕಗಳಾಗಿವೆ.
2021 ರಲ್ಲಿ ದೇಶೀಯ ಪ್ರವಾಸಿಗರು ಭೇಟಿ ನೀಡಿದ ಮೊದಲ ಐದು ರಾಜ್ಯಗಳು ತಮಿಳುನಾಡು (115.33 ಮಿಲಿಯನ್), ಉತ್ತರ ಪ್ರದೇಶ (109.70 ಮಿಲಿಯನ್), ಆಂಧ್ರ ಪ್ರದೇಶ (93.27 ಮಿಲಿಯನ್) ಎಂದು ವರದಿ ಹೇಳಿದೆ. ಕರ್ನಾಟಕ (81.33 ಮಿಲಿಯನ್) ಮತ್ತು ಮಹಾರಾಷ್ಟ್ರ (43.56 ಮಿಲಿಯನ್).
“ದೇಶದ ಒಟ್ಟು ದೇಶೀಯ ಪ್ರವಾಸಿ ಭೇಟಿಗಳಲ್ಲಿ ಈ ಐದು ರಾಜ್ಯಗಳು ಶೇಕಡಾ 65.41 ರಷ್ಟನ್ನು ಹೊಂದಿವೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು indianexpress ವರದಿ ಮಾಡಿದೆ.