‘ತಮಿಳುನಾಡು ಸರ್ಕಾರದ ಎಲ್ಲಾ ಸಚಿವರು ಉಪ ಮುಖ್ಯಮಂತ್ರಿಗಳೇ’: ಉದಯನಿಧಿ ಸ್ಟಾಲಿನ್

|

Updated on: Jul 20, 2024 | 7:59 PM

ಡಿಎಂಕೆ ಯುವ ಘಟಕದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ, ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ನಮ್ಮ ಸರ್ಕಾರದ ಎಲ್ಲಾ ಸಚಿವರು ಉಪ ಮುಖ್ಯಮಂತ್ರಿಗಳು ಎಂದು ನಾನು ಈ ಹಿಂದೆಯೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನೆ ಎಂದಿದ್ದಾರೆ.

ತಮಿಳುನಾಡು ಸರ್ಕಾರದ ಎಲ್ಲಾ ಸಚಿವರು ಉಪ ಮುಖ್ಯಮಂತ್ರಿಗಳೇ: ಉದಯನಿಧಿ ಸ್ಟಾಲಿನ್
ಉದಯನಿಧಿ ಸ್ಟಾಲಿನ್
Follow us on

ಚೆನ್ನೈ ಜುಲೈ 20: ಡಿಎಂಕೆ (DMK) ನೇತೃತ್ವದ ತಮಿಳುನಾಡು (Tamil nadu ) ಸರ್ಕಾರದ ಎಲ್ಲಾ ಸಚಿವರು ಉಪ ಮುಖ್ಯಮಂತ್ರಿಗಳು ಎಂದು ಪಕ್ಷದ ನಾಯಕ ಮತ್ತು ರಾಜ್ಯ ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಶನಿವಾರ ಹೇಳಿದ್ದಾರೆ. ಅವರ ತಂದೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ನೇತೃತ್ವದ ತಮಿಳುನಾಡು ಸರ್ಕಾರದಲ್ಲಿ  ಉದಯನಿಧಿ ಉಪ ಮುಖ್ಯಮಂತ್ರಿ ಹುದ್ದೆಗೆ ಬಡ್ತಿ ಹೊಂದಲಿದ್ದಾರೆ ಎಂಬ ಊಹಾಪೋಹಗಳ ನಡುವೆ ಅವರ ಈ ಹೇಳಿಕೆ ಬಂದಿದೆ.

ಡಿಎಂಕೆ ಯುವ ಘಟಕದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉದಯನಿಧಿ, ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ನಮ್ಮ ಸರ್ಕಾರದ ಎಲ್ಲಾ ಸಚಿವರು ಉಪ ಮುಖ್ಯಮಂತ್ರಿಗಳು ಎಂದು ನಾನು ಈ ಹಿಂದೆಯೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನೆ ಎಂದಿದ್ದಾರೆ.

ಮಾಜಿ ನಟ-ನಿರ್ಮಾಪಕ, ರಾಜ್ಯದ ಯುವ ಕಲ್ಯಾಣ ಮತ್ತು ಕ್ರೀಡಾ ಸಚಿವರು ಡಿಸೆಂಬರ್ 2022 ರಲ್ಲಿ ಸ್ಟಾಲಿನ್ ನೇತೃತ್ವದ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡರು. “ನನ್ನ ಪ್ರಕಾರ, ಯುವ ಘಟಕದ ಕಾರ್ಯದರ್ಶಿ ನನ್ನ ನೆಚ್ಚಿನ (ಹುದ್ದೆ)” ಎಂದು ಚೆಪಾಕ್-ತಿರುವಲ್ಲಿಕೇಣಿ ವಿಧಾನಸಭಾ ಕ್ಷೇತ್ರದ ಶಾಸಕ ಉದಯನಿಧಿ ಹೇಳಿದ್ದಾರೆ.

ಅದೇ ವೇಳೆ 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಸರ್ಕಾರ ಮರು ಆಯ್ಕೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. “2026 ರ ಚುನಾವಣೆ ನಮ್ಮ ಗುರಿಯಾಗಿದೆ. ಹಿಂದಿನ ಚುನಾವಣೆಯಂತೆ ನಾವು ಕೆಲಸ ಮಾಡಬೇಕು ಮತ್ತು ಗೆಲುವು ಸಾಧಿಸಬೇಕು. ನಮ್ಮ ನಾಯಕ, ಸಿಎಂ ಎಂ.ಕೆ.ಸ್ಟಾಲಿನ್ ಮತ್ತೊಮ್ಮೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 2026ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟವೇ ಗೆಲ್ಲಲಿದೆ.

ಪಕ್ಷದ ಬೆಂಬಲಿಗರು ಮತ್ತು ಅನುಯಾಯಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಬೇಕು ಮತ್ತು ದಿನಪತ್ರಿಕೆಗಳನ್ನು ಓದುವ ಮೂಲಕ ಅದರ ಚಟುವಟಿಕೆಗಳನ್ನು ಮುಂದುವರಿಸಬೇಕು ಎಂದು ಉದಯನಿಧಿ ಕರೆ ನೀಡಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ವಿದೇಶಾಂಗ ಕಾರ್ಯದರ್ಶಿಯ ನೇಮಕ; ಪಿಣರಾಯಿ ನಡೆಗೆ ಕಾಂಗ್ರೆಸ್, ಬಿಜೆಪಿ ಟೀಕೆ

‘ಉದಯನಿಧಿ ಅವರಿಗೆ ಬಡ್ತಿ ಮಾಡಿದರೆ ಡಿಎಂಕೆಗೆ ಅನುಕೂಲ’

ಈ ವಾರದ ಆರಂಭದಲ್ಲಿ ಡಿಎಂಕೆಯ ಹಿರಿಯ ಸದಸ್ಯರೊಬ್ಬರು ಮಾಡಿದ ಹೇಳಿಕೆಗಳು ಉದಯನಿಧಿ ಅವರ ‘ಬಡ್ತಿ’ ಕುರಿತು ಊಹಾಪೋಹಗಳಿಗೆ ಉತ್ತೇಜನ ನೀಡಿತು.. “ಮುಖ್ಯಮಂತ್ರಿ ಅವರು ತಮ್ಮ ಮಗನನ್ನು ಉಪನಾಯಕನನ್ನಾಗಿ ಮಾಡುವ ಬಗ್ಗೆ ನಿರ್ಧರಿಸಬೇಕು. ಇದು ನಮ್ಮ ಆಶಯವೂ ಹೌದು. ಆದರೆ ಅಂತಿಮವಾಗಿ ಪಕ್ಷದ ಅಧ್ಯಕ್ಷರಾಗಿ ಸಿಎಂ ನಿರ್ಧರಿಸಬೇಕು,” ಎಂದು ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌ಎಸ್ ಭಾರತಿ ಟೀಕಿಸಿದ್ದಾರೆ, ಉದಯನಿಧಿ ಅವರ ಪ್ರಚಾರವು 2026 ರಲ್ಲಿ ಪಕ್ಷಕ್ಕೆ ‘ಬೃಹತ್ ಲಾಭ’ವಾಗಲಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:56 pm, Sat, 20 July 24