16 ಕಿಮೀ ದುರ್ಗಮ ಹಾದಿ ಕ್ರಮಿಸಿ ಕುಗ್ರಾಮದಲ್ಲಿರುವ ಬುಡಕಟ್ಟು ಜನರಿಗೆ ಔಷಧಿ ತಲುಪಿಸಿದ ತೆಲಂಗಾಣ ಆರೋಗ್ಯ ಅಧಿಕಾರಿ

ತಾಂಡಾ ತಲುಪುವುದು ಅಷ್ಟೇನು ಸುಲಭವಲ್ಲ. ಇದಕ್ಕಾಗಿ ಅವರು ಮೂರು ಬೆಟ್ಟಗಳನ್ನು ಮತ್ತು ರಭಸದಿಂದ ಹರಿಯುವ ಹೊಳೆ ದಾಟಬೇಕಿತ್ತು. ಮುಂಗಾರು ಮಳೆ ಬೇರೆ. ಆದರೆ ಅಪ್ಪಯ್ಯ ಹಿಂದೇಟು ಹಾಕಲಿಲ್ಲ. ಬುಡಕಟ್ಟು ಜನರಿಗೆ ಹೇಗಾದರೂ ಮಾಡಿ ಔಷಧಿ ಒದಗಿಸಬೇಕು ಎಂದು ಅವರು ದೃಢ ನಿಶ್ಚಯ ಮಾಡಿದ್ದರು.ಔಷಧಿಗಳನ್ನು ತಲುಪಿಸುವುದು ಮಾತ್ರವಲ್ಲ, ನಾಗರಿಕ ಸೇವೆಗಳಿಗೆ ಹತ್ತಿರವಿರುವ ಸುರಕ್ಷಿತ ಮೈದಾನಗಳಿಗೆ ಸ್ಥಳಾಂತರಿಸಲು ಸಣ್ಣ ಸಮುದಾಯವನ್ನು ಮನವೊಲಿಸಲು ಅವರು ಬಯಸಿದ್ದರು.

16 ಕಿಮೀ ದುರ್ಗಮ ಹಾದಿ ಕ್ರಮಿಸಿ ಕುಗ್ರಾಮದಲ್ಲಿರುವ ಬುಡಕಟ್ಟು ಜನರಿಗೆ ಔಷಧಿ ತಲುಪಿಸಿದ ತೆಲಂಗಾಣ ಆರೋಗ್ಯ ಅಧಿಕಾರಿ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on: Jul 20, 2024 | 6:34 PM

ಹೈದರಾಬಾದ್ ಜುಲೈ 20: ತೆಲಂಗಾಣದ  (Telangana) ಮುಲುಗಿನ ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (DMHO) ಅಲ್ಲೆಂ ಅಪ್ಪಯ್ಯ (Allem Appaiah) ಅವರು ವಾಜೇಡು ಮಂಡಲದ ಕುಗ್ರಾಮವೊಂದಕ್ಕೆ ಔಷಧಿ ತಲುಪಿಸಲು ಪ್ರಯಾಣಿಸಿದ್ದು 16 ಕಿಮೀ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ದುರ್ಗಮ ಹಾದಿಯಿರುವ ಭೂಪ್ರದೇಶದ ನಡುವೆ ಸಣ್ಣ ತಾಂಡದಲ್ಲಿ ವಾಸಿಸುವ ಗುತ್ತಿ ಕೋಯಾ ಬುಡಕಟ್ಟಿನ 11 ಬುಡಕಟ್ಟು ಕುಟುಂಬಗಳಿಗೆ ಔಷಧಗಳು, ಸೊಳ್ಳೆ ಪರದೆಗಳು ಮತ್ತು ಅಗತ್ಯ ವಸ್ತುಗಳನ್ನು ಅಲ್ಲೆಂ ಅಪ್ಪಯ್ಯ ತಲುಪಿಸಿದ್ದಾರೆ.

ಮುಲುಗುವಿನಿಂದ ತಮ್ಮ ಪ್ರಯಾಣ ಆರಂಭಿಸಿದ್ದ ಅಪ್ಪಯ್ಯ,ವಾಜೇಡು ತಲುಪಿದ ನಂತರ ‘ತಾಂಡಾ’ ತಲುಪಲು 16 ಕಿಲೋಮೀಟರ್ ನಡೆದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ತಾಂಡಾ ತಲುಪುವುದು ಅಷ್ಟೇನು ಸುಲಭವಲ್ಲ. ಇದಕ್ಕಾಗಿ ಅವರು ಮೂರು ಬೆಟ್ಟಗಳನ್ನು ಮತ್ತು ರಭಸದಿಂದ ಹರಿಯುವ ಹೊಳೆ ದಾಟಬೇಕಿತ್ತು. ಮುಂಗಾರು ಮಳೆ ಬೇರೆ. ಆದರೆ ಅಪ್ಪಯ್ಯ ಹಿಂದೇಟು ಹಾಕಲಿಲ್ಲ. ಬುಡಕಟ್ಟು ಜನರಿಗೆ ಹೇಗಾದರೂ ಮಾಡಿ ಔಷಧಿ ಒದಗಿಸಬೇಕು ಎಂದು ಅವರು ದೃಢ ನಿಶ್ಚಯ ಮಾಡಿದ್ದರು. ಔಷಧಿಗಳನ್ನು ತಲುಪಿಸುವುದು ಮಾತ್ರವಲ್ಲ, ನಾಗರಿಕ ಸೇವೆಗಳಿಗೆ ಹತ್ತಿರವಿರುವ ಸುರಕ್ಷಿತ ಮೈದಾನಗಳಿಗೆ ಸ್ಥಳಾಂತರಿಸಲು ಸಣ್ಣ ಸಮುದಾಯವನ್ನು ಮನವೊಲಿಸಲು ಅವರು ಬಯಸಿದ್ದರು.

ಕುಗ್ರಾಮದಲ್ಲಿ ಪ್ರಸ್ತುತ ಚಿಕ್ಕ ಮಕ್ಕಳು ಸೇರಿದಂತೆ ಕೇವಲ 39 ಜನರು ವಾಸಿಸುತ್ತಿದ್ದಾರೆ. ಸಾಮಾನ್ಯ ಕಾಯಿಲೆಗಳಿಗೆ ಅಥವಾ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸಹಾಯವನ್ನು ಪಡೆಯುವುದು ವಿಶೇಷವಾಗಿ ಮುಂಗಾರು ಮಳೆ ಸಮಯದಲ್ಲಿ ದೊಡ್ಡ ಸವಾಲೇ ಆಗಿದೆ. ಇಲ್ಲಿಯವರೆಗೆ 151 ರಲ್ಲಿ 11 ಕುಟುಂಬಗಳು ಮಾತ್ರ ಬೆಟ್ಟಗಳಲ್ಲಿ ತಮ್ಮ ಮನೆಯನ್ನು ತ್ಯಜಿಸಲು ಮತ್ತು ವರ್ಷಗಳಲ್ಲಿ ಬಯಲು ಪ್ರದೇಶಕ್ಕೆ ಹೋಗಲು ಒಪ್ಪಿಕೊಂಡಿವೆ. ಆದರೆ, ಉಳಿದ 30 ಮಂದಿಯ ಮನವೊಲಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ.

ಆದರೆ ಅಪ್ಪಯ್ಯ ಅವರ ಭೇಟಿಯ ನಂತರ ಉಳಿದ ಕುಟುಂಬಗಳು ಈಗ ರಸ್ತೆಗಳ ಬಳಿ ವಸತಿ ಮತ್ತು ಸಾಗುವಳಿ ಮಾಡಲು ಭೂಮಿಯನ್ನು ಒದಗಿಸಿದರೆ ಸ್ಥಳಾಂತರಕ್ಕೆ ಒಪ್ಪುವುದಾಗಿ ಹೇಳಿದ್ದಾರೆ.  ಮೊಬೈಲ್ ಸಂಪರ್ಕ ಕಡಿಮೆ ಇರುವ ಈ ತಾಂಡಾಕ್ಕೆ ಭೇಟಿ ನೀಡುವ ಆರೋಗ್ಯ ಕಾರ್ಯಕರ್ತರು ಎದುರಿಸುತ್ತಿರುವ ಸಂಕಷ್ಟ ಅಪ್ಪಯ್ಯನವರ ಈ ಕಾರ್ಯದಿಂದ ಹೊರ ಜಗತ್ತಿಗೆ ತಿಳಿಯುವಂತಾಗಿದೆ.

ಇದನ್ನೂ ಓದಿ: ಕೋವಿಡ್-19 ಭಾರತೀಯರ ಜೀವಿತಾವಧಿಯನ್ನು 2.6 ವರ್ಷ ಕಡಿತಗೊಳಿಸಿದೆ; ಅಧ್ಯಯನ ವರದಿ ತಳ್ಳಿದ ಸರ್ಕಾರ 

ರಾಜ್ಯ ಆರೋಗ್ಯ ಸಚಿವ ದಾಮೋದರ ರಾಜ ನರಸಿಂಹ ಅವರು ಅಪ್ಪಯ್ಯ ಮತ್ತು ತಂಡವು ಅಂಚಿನಲ್ಲಿರುವ ಸಮುದಾಯಗಳನ್ನು ತಲುಪಲು ಮತ್ತು ಅವರ ಅಗತ್ಯಗಳನ್ನು ನೇರವಾಗಿ ಪರಿಹರಿಸಲು ಕೈಗೊಂಡ ಕಾರ್ಯಗಳನ್ನು ಶ್ಲಾಘಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ