ಜೂನ್ 2 ರಂದು ಒಡಿಶಾದಲ್ಲಿ ನಡೆದ ತ್ರಿವಳಿ ರೈಲು ಅಪಘಾತವನ್ನು ಮರೆಯಲು ನಮಗೆ ಇನ್ನೂ ಸಮಯ ಬೇಕಿದೆ. ಈ ನಡುವೆ ಮತ್ತೊಂದು ಸುದ್ದಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ವ್ಯಕ್ತಿಯೊಬ್ಬ ತನ್ನ ಗರ್ಲ್ ಫ್ರೆಂಡ್ ಜತೆ ಜಗಳವಾಡಿ ಕೋಪದಲ್ಲಿ ರೈಲ್ವೆ ನಿಲ್ದಾಣದ ಸಿಗ್ನಲ್ ಬಾಕ್ಸ್ನ್ನೇ ಒಡೆದು ಹಾಕಿದ್ದಾನೆ. ತಮಿಳುನಾಡಿನಲ್ಲಿ ಈ ಘಟನೆ ನಡೆದಿದೆ.
ಮಂಗಳವಾರ ರೈಲ್ವೇ ಅಧಿಕಾರಿಗಳು ತಿರುಪತ್ತೂರಿನಲ್ಲಿ ರೈಲು ಹಳಿಗಳನ್ನು ಪರಿಶೀಲಿಸಿದಾಗ ಸಿಗ್ನಲ್ ಬಾಕ್ಸ್ ಹಾಳಾಗಿರುವುದು ಕಂಡುಬಂದಿದೆ. ರೈಲ್ವೇ ಪೊಲೀಸ್ ಪಡೆ ಸ್ಥಳಕ್ಕಾಗಮಿಸಿದಾಗ ಗೋಕುಲ್ ಕುಡಿದ ಸ್ಥಿತಿಯಲ್ಲಿದ್ದರು.
ಆರ್‌ಪಿಎಫ್ ಮತ್ತು ಸರ್ಕಾರಿ ರೈಲ್ವೇ ಪೊಲೀಸ್‌ನ ಹಿರಿಯ ಅಧಿಕಾರಿಗಳು ಗೋಕುಲ್‌ನನ್ನು ವಿಚಾರಣೆಗೊಳಪಡಿಸಿದರು, ಅವರು ಆರಂಭದಲ್ಲಿ ಸಿಗ್ನಲ್ ಬಾಕ್ಸ್‌ಗೆ ಹಾನಿ ಮಾಡಿರುವುದನ್ನು ನಿರಾಕರಿಸಿದರು ಆದರೆ ನಂತರ ಅವರು ತಮ್ಮ ಗೆಳತಿಯೊಂದಿಗೆ ಜಗಳವಾಡಿದ ನಂತರ ಕೋಪಗೊಂಡಿದ್ದ ಸಂದರ್ಭದಲ್ಲಿ ಈ ರೀತಿ ನಡೆದುಕೊಂಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ವಿಚಾರಣೆ ನಡೆಯುತ್ತಿದೆ.
ಮತ್ತಷ್ಟು ಓದಿ: Breaking News Today Highlights: ಒಡಿಶಾ ರೈಲು ದುರಂತ: ಬೋಗಿಗಳ ತೆರವು ಕಾರ್ಯಾಚರಣೆಗೆ ಮುಂದಾದ ರೈಲ್ವೆ ಇಲಾಖೆ ಸಿಬ್ಬಂದಿ
ಇತ್ತೀಚೆಗೆ ಒಡಿಶಾದಲ್ಲಿ ನಡೆದಿದ್ದ ತ್ರಿವಳಿ ರೈಲು ಅಪಘಾತದಲ್ಲಿ 288 ಮಂದಿ ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಕೇವಲ ಆಸ್ಪತ್ರೆ ಮಾತ್ರವಲ್ಲದೆ ಬಾಲಸೋರ್ನ ಶಾಲೆಯನ್ನು ಕೂಡ ತಾತ್ಕಾಲಿಕ ಶವಾಗಾರವನ್ನಾಗಿ ಮಾಡಲಾಗಿದೆ. ಇನ್ನೂ 90 ಕ್ಕೂ ಅಧಿಕ ಮೃತದೇಹಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Wed, 7 June 23