Monsoon 2023: ತೀವ್ರಗೊಂಡ ಬಿಪರ್​ಜಾಯ್​ ಚಂಡಮಾರುತ, ಜೂನ್​ 9ಕ್ಕೆ ಕೇರಳಕ್ಕೆ ಮುಂಗಾರು ಮಾರುತ ಪ್ರವೇಶ

ಅರಬ್ಬಿ ಸಮುದ್ರದಲ್ಲಿ ಬಿಪರ್​ಜಾಯ್(Biperjoy) ಚಂಡಮಾರುತ ತೀವ್ರಗೊಳ್ಳುತ್ತಿದ್ದು, ಜೂನ್​ 9ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸುವ ನಿರೀಕ್ಷೆ ಇದೆ.

Monsoon 2023: ತೀವ್ರಗೊಂಡ ಬಿಪರ್​ಜಾಯ್​ ಚಂಡಮಾರುತ, ಜೂನ್​ 9ಕ್ಕೆ ಕೇರಳಕ್ಕೆ ಮುಂಗಾರು ಮಾರುತ ಪ್ರವೇಶ
ಮಳೆImage Credit source: India Today
Follow us
ನಯನಾ ರಾಜೀವ್
|

Updated on:Jun 07, 2023 | 2:26 PM

ಅರಬ್ಬಿ ಸಮುದ್ರದಲ್ಲಿ ಬಿಪರ್​ಜಾಯ್(Biperjoy) ಚಂಡಮಾರುತ ತೀವ್ರಗೊಳ್ಳುತ್ತಿದ್ದು, ಜೂನ್​ 9ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸುವ ನಿರೀಕ್ಷೆ ಇದೆ. ಚಂಡಮಾರುತ ಮತ್ತು ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದ್ದು, ಹೆಚ್ಚಿನ ಮಳೆಯಾಗಲಿದೆ. ಕರಾವಳಿ ಪ್ರದೇಶಗಳಲ್ಲಿ ಆರಂಭವಾದ ಬಿಪರ್‌ಜೋಯ್ ಚಂಡಮಾರುತವು ಪೂರ್ವ-ಮಧ್ಯ ಮತ್ತು ಆಗ್ನೇಯ ಅರಬ್ಬಿ ಸಮುದ್ರದ ಕಡೆಗೆ ಚಲಿಸುತ್ತಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಈ ಪ್ರದೇಶದಲ್ಲಿ ಮತ್ತೊಂದು ಚಂಡಮಾರುತವನ್ನು ನಿರೀಕ್ಷಿಸಲಾಗಿದೆ. ಬಿಪರ್‌ಜೋಯ್ ಗೋವಾದ ಪಶ್ಚಿಮ-ನೈಋತ್ಯಕ್ಕೆ 900 ಕಿಮೀ, ಮುಂಬೈನಿಂದ ನೈಋತ್ಯಕ್ಕೆ 1020 ಕಿಮೀ, ಪೋರಬಂದರ್‌ನಿಂದ 1090 ಕಿಮೀ ನೈಋತ್ಯ ಮತ್ತು ಕರಾಚಿಯಿಂದ ದಕ್ಷಿಣಕ್ಕೆ 1380 ಕಿಮೀ ದೂರದಲ್ಲಿದೆ.

ಬಿಪರ್‌ಜೋಯ್ ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಉಳಿಯಲಿದೆ ಎಂದು ಹೇಳಲಾಗುತ್ತಿದೆ. ಸೈಕ್ಲೋನಿಕ್ ಚಂಡಮಾರುತಕ್ಕೆ ಬಾಂಗ್ಲಾದೇಶವು ಬಿಪರ್​ಜಾಯ್ ಎಂದು ಹೆಸರಿಡಲಾಗಿದೆ.

ಮತ್ತಷ್ಟು ಓದಿ: Cyclone Biparjoy: ಅರಬ್ಬಿ ಸಮುದ್ರದಲ್ಲಿ ರೂಪುಗೊಂಡ ಬಿಪರ್​ಜಾಯ್ ಚಂಡಮಾರುತ, ಪ್ರಭಾವ ಹೇಗಿರುತ್ತೆ? ಸಂಪುರ್ಣ ಮಾಹಿತಿ ಇಲ್ಲಿದೆ

ಕೇರಳದಲ್ಲಿ ಮಾನ್ಸೂನ್ ವಿಳಂಬವಾಗಿದೆ. ಸ್ಕೈಮೆಟ್ ಪ್ರಕಾರ, ಜೂನ್ 8-9 ರೊಳಗೆ ಕೇರಳದಕ್ಕೆ ಮುಂಗಾರು ಮಾರುತಗಳು ಪ್ರವೇಶಿಸಲಿವೆ.

ಈ ಚಂಡಮಾರುತದಿಂದಾಗಿ ಪೂರ್ವ ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಗಂಟೆಗೆ 90 ಕಿಮೀ ವೇಗದಲ್ಲಿ ಗಾಳಿ ಬೀಸುತ್ತದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:24 pm, Wed, 7 June 23