ರಷ್ಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ಪ್ರಯಾಣಿಕರಿಗೆ ಸೌಕರ್ಯಗಳ ಕೊರತೆ: ಒಂದೇ ಕೋಣೆಯಲ್ಲಿ 20 ಮಂದಿ; ಆಹಾರ,ಶೌಚಕ್ಕೂ ಸಮಸ್ಯೆ

230 ಕ್ಕೂ ಹೆಚ್ಚು ಜನರಿದ್ದಾರೆ. ಸಾಕಷ್ಟು ಮಕ್ಕಳು ಮತ್ತು ವೃದ್ಧರು. ನಮ್ಮ ಬ್ಯಾಗ್‌ಗಳು ಇನ್ನೂ ವಿಮಾನದಲ್ಲಿವೆ. ನಮ್ಮನ್ನು ಬಸ್‌ಗಳಲ್ಲಿ ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಲಾಗಿದೆ. ಕೆಲವರನ್ನು ಶಾಲೆಗೆ ಕಳುಹಿಸಲಾಗಿದೆ. ಅಲ್ಲಿ ಅವರು ನೆಲದ ಮೇಲೆ ಹಾಸಿಗೆಗಳನ್ನು ಹಾಕಿ ಮಲಗಿದ್ದಾರೆ.

ರಷ್ಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ಪ್ರಯಾಣಿಕರಿಗೆ ಸೌಕರ್ಯಗಳ ಕೊರತೆ: ಒಂದೇ ಕೋಣೆಯಲ್ಲಿ 20 ಮಂದಿ; ಆಹಾರ,ಶೌಚಕ್ಕೂ ಸಮಸ್ಯೆ
ರಷ್ಯಾದಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರು
Follow us
ರಶ್ಮಿ ಕಲ್ಲಕಟ್ಟ
|

Updated on:Jun 07, 2023 | 3:40 PM

ದೆಹಲಿ: ರಷ್ಯಾದ (Russia) ಮಗದನ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಏರ್ ಇಂಡಿಯಾ (Air India) ವಿಮಾನದಲ್ಲಿ ಮಕ್ಕಳು ಮತ್ತು ವೃದ್ಧರು ಸೇರಿದಂತೆ ಹಲವು ಪ್ರಯಾಣಿಕರು ಭಾಷೆಯ ಸಮಸ್ಯೆ ಎದುರಿಸುತ್ತಿದ್ದು ಪರಿಚಯವಿಲ್ಲದ ಊರಲ್ಲಿ ಆಹಾರ, ಉಳಿದುಕೊಳ್ಳಲು ಸರಿಯಾದ ಜಾಗವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ಏರ್ ಇಂಡಿಯಾ ಫ್ಲೈಟ್, ಬೋಯಿಂಗ್ 777 (Boeing 777), ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ 216 ಪ್ರಯಾಣಿಕರು ಮತ್ತು 16 ಸಿಬ್ಬಂದಿಗಳೊಂದಿಗೆ ಪ್ರಯಾಣಿಸುತ್ತಿದ್ದಾಗ ಅದರ ಇಂಜಿನ್ ಒಂದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ತಕ್ಷಣವೇ ರಷ್ಯಾದ ಮಗದನ್‌ಗೆ ತಿರುಗಿಸಲಾಗಿತ್ತು. ರಷ್ಯಾದಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ತಾಂತ್ರಿಕ ದೋಷವನ್ನು ಸರಿಪಡಿಸಲಾಗುತ್ತಿದೆ ಎಂದು ಹೇಳಿದ್ದರು. ಇದೀಗ ರಷ್ಯಾದಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಯಾಣಿಕರನ್ನು ಬುಧವಾರ ಮುಂಬೈನಿಂದ ಮೀಸಲು ವಿಮಾನವೊಂದು ಕರೆತರಲಿದೆ ಎಂದು ಏರ್ ಇಂಡಿಯಾ ಇಂದು (ಜೂ. 7) ತಿಳಿಸಿದೆ.

ರಷ್ಯಾದಿಂದ ಎನ್‌ಡಿಟಿವಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ವಿಮಾನದಲ್ಲಿದ್ದ ಪ್ರಯಾಣಿಕ ಗಗನ್, ಪರಿಸ್ಥಿತಿಯನ್ನು ಸವಾಲಿನದ್ದು ಎಂದು ಅಲ್ಲಿನ ಸೌಲಭ್ಯಗಳ ಕೊರತೆಯನ್ನು ವಿವರಿಸಿದ್ದಾರೆ.

230 ಕ್ಕೂ ಹೆಚ್ಚು ಜನರಿದ್ದಾರೆ. ಸಾಕಷ್ಟು ಮಕ್ಕಳು ಮತ್ತು ವೃದ್ಧರು. ನಮ್ಮ ಬ್ಯಾಗ್‌ಗಳು ಇನ್ನೂ ವಿಮಾನದಲ್ಲಿವೆ. ನಮ್ಮನ್ನು ಬಸ್‌ಗಳಲ್ಲಿ ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಲಾಗಿದೆ. ಕೆಲವರನ್ನು ಶಾಲೆಗೆ ಕಳುಹಿಸಲಾಗಿದೆ. ಅಲ್ಲಿ ಅವರು ನೆಲದ ಮೇಲೆ ಹಾಸಿಗೆಗಳನ್ನು ಹಾಕಿ ಮಲಗಿದ್ದಾರೆ. ಶೌಚಾಲಯ ಸೌಲಭ್ಯಗಳು ಸರಿ ಇಲ್ಲ. ಎಲ್ಲದಕ್ಕೂ ಭಾಷಾ ಸಮಸ್ಯೆ ಇದೆ. ಇಲ್ಲಿ ಆಹಾರವು ತುಂಬಾ ಭಿನ್ನವಾಗಿದೆ. ಇಲ್ಲಿರುವ ಸಮುದ್ರಾಹಾರ (ಸೀಫುಡ್) ಮತ್ತು ಮಾಂಸಾಹಾರ ಕೆಲವರು ಬ್ರೆಡ್ ಮತ್ತು ಸೂಪ್ ಅನ್ನು ತಿನ್ನುತ್ತಾರೆ. ಅವರು (ರಷ್ಯಾದ ಅಧಿಕಾರಿಗಳು) ಒಳ್ಳೆಯವರಾಗಿದ್ದಾರೆ. ನಾವು ಕಾಲೇಜು ವಸತಿ ನಿಲಯದಲ್ಲಿರುವುದರಿಂದ ನಾವು ಅದೃಷ್ಟಶಾಲಿಗಳು. ನಾವು ಸುಮಾರು ಒಂದು ಗಂಟೆಯ ಹಿಂದೆ ವೈ-ಫೈ ಪಡೆದುಕೊಂಡಿದ್ದೇವೆ. ಆದ್ದರಿಂದ ನಾವು ನಮ್ಮ ಕುಟುಂಬಗಳೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಯಿತು ಎಂದು ಗಗನ್ ಹೇಳಿದ್ದಾರೆ.

ಕೆಲವು ಪ್ರಯಾಣಿಕರು ಅಲ್ಲೊಂದು ಶಾಲೆಯಲ್ಲಿದ್ದಾರೆ. ಅವರು ತರಗತಿಯ ಬೆಂಚುಗಳನ್ನು ಸರಿಸಿ ಅಲ್ಲೇ ಮಲಗಿದ್ದಾ ಒಂದು ಕೋಣೆಯಲ್ಲಿ ಸುಮಾರು 20 ಜನರಿದ್ದಾರೆ. ಅವರಿಗೆ ಸರಿಯಾದ ಆಹಾರ ವ್ಯವಸ್ಥೆ ಆಗಲಿಲ್ಲ ಎಂದು ಕೇಳ್ಪಟ್ಟೆ. ಅವರಿಗೆ ಕೋಕ್ ಮತ್ತು ಬ್ರೆಡ್ ನೀಡಲಾಗಿತು,. ಫ್ಲೈಟ್‌ನಲ್ಲಿ ನನ್ನ ಪಕ್ಕದಲ್ಲಿ 88 ವರ್ಷದ ವ್ಯಕ್ತಿಯೊಬ್ಬರು ಇದ್ದರು. ಅವರಂತಹ ಜನರು ಹೇಗೆ ಇದ್ದಾರೋ ಎಂಬುದು ನನಗೆ ಗೊತ್ತಿಲ್ಲ. ಇಬ್ಬರುಪುಟ್ಟ ಮಕ್ಕಳೊಂದಿಗೆ ಮಹಿಳೆಯೊಬ್ಬರು ಇದ್ದಾರೆ. ಅವರು ನಿಜವಾಗಿಯೂ ಕಷ್ಟಪಡುತ್ತಿದ್ದಾರೆ. ಇಲ್ಲಿರುವುದುದು ಮಾಂಸಾಹಾರ. ಇಲ್ಲಿರುವ ಅಧಿಕಾರಿಗಳು ಒಳ್ಳೆಯವರು, ಆದರೆ ಭಾಷೆಯ ಸಮಸ್ಯೆ ಇದೆ. ನಮಗೆ ಹೊರಗೆ ಹೋಗಲು ಅನುಮತಿ ಇಲ್ಲ. ನಾವು ಇಂದು ಈ ಹೊತ್ತಿಗೆ ವಿಮಾನದಲ್ಲಿ ಹೋಗುತ್ತೇವೆ ಎಂದು ನಮಗೆ ತಿಳಿಸಲಾಯಿತು ಎಂದು ಗಗನ್ ಹೇಳಿದ್ದಾರೆ.

ಇದನ್ನೂ ಓದಿ: Air India: ಸ್ಯಾನ್ ಫ್ರಾನ್ಸಿಸ್ಕೋಗೆ ಬದಲು ರಷ್ಯಾದಲ್ಲಿ ಇಳಿದ ವಿಮಾನ, ಭಾರತೀಯ ಪ್ರಯಾಣಿಕರಿಗಾಗಿ ವಿಶೇಷ ವಿಮಾನ ವ್ಯವಸ್ಥೆ

ಸಿಲುಕಿಕೊಂಡಿರು ಪ್ರಯಾಣಿಕರನ್ನು ಮಗದನ್‌ನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಸಾಗಿಸಲು ಮುಂಬೈನಿಂದ ಬದಲಿ ವಿಮಾನವನ್ನು ಕಳುಹಿಸಲಾಗುವುದು ಎಂದು ಏರ್ ಇಂಡಿಯಾ ಬುಧವಾರ ಹೇಳಿದೆ. ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ಒದಗಿಸುತ್ತಿದೆ. ಸ್ಥಳೀಯ ಹಾಸ್ಟೆಲ್‌ಗಳು ಮತ್ತು ಹೋಟೆಲ್‌ಗಳಲ್ಲಿ ಅವರಿಗೆ ವಸತಿ ಕಲ್ಪಿಸಲಾಗಿದೆ ಎಂದು ಭರವಸೆ ನೀಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Wed, 7 June 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್