ಲಿವಿಂಗ್​ ಟುಗೆದರ್​​ನಲ್ಲಿ ಏನಾಯ್ತೋ ಹೈದರಾಬಾದ್ ಟೆಕ್ಕಿ ಆಕಾಂಕ್ಷಾಳನ್ನು ಆಕೆಯ ಪ್ರಿಯಕರ ಹತ್ಯೆ ಮಾಡಿದ್ದ, ನಿಜವಾಗಿ ನಡೆದಿದ್ದೇನು?

ಅತ್ತ ಆಕಾಂಕ್ಷಾ ಮನೆಯಲ್ಲಿ ಮದುವೆ ಏರ್ಪಾಟು ನಡೆದಿತ್ತು. ಈಗ ತಮ್ಮ ಮಗಳ ಪ್ರಾಣವನ್ನೇ ಬಲಿಕೊಟ್ಟು, ಆತ್ಮಹತ್ಯೆಗೆ ಯತ್ನಿಸಿದಳು ಎಂದು ಹೇಳುತ್ತಿರುವ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಕಾಂಕ್ಷಾ ಪೋಷಕರು ಮನವಿ ಮಾಡಿದ್ದಾರೆ. ಬೆಂಗಳೂರು ಪೊಲೀಸರು ಅರ್ಪಿತ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಲಿವಿಂಗ್​ ಟುಗೆದರ್​​ನಲ್ಲಿ ಏನಾಯ್ತೋ ಹೈದರಾಬಾದ್ ಟೆಕ್ಕಿ ಆಕಾಂಕ್ಷಾಳನ್ನು ಆಕೆಯ ಪ್ರಿಯಕರ ಹತ್ಯೆ ಮಾಡಿದ್ದ, ನಿಜವಾಗಿ ನಡೆದಿದ್ದೇನು?
ಲಿವಿಂಗ್​ ಟುಗೆದರ್​​ನಲ್ಲಿ ಏನಾಯ್ತೋ ಹೈದರಾಬಾದ್ ಟೆಕ್ಕಿ ಆಕಾಂಕ್ಷಾಳನ್ನು ಆಕೆಯ ಪ್ರಿಯಕರ ಹತ್ಯೆ ಮಾಡಿದ್ದ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 07, 2023 | 4:40 PM

ಬೆಂಗಳೂರು: ದೆಹಲಿಯಲ್ಲಿದ್ದಾಗ ಆಕಾಂಕ್ಷಾ ಮತ್ತು ಅರ್ಪಿತ್​ ಪರಸ್ಪರ ಭೇಟಿಯಾದವರು. ಇಬ್ಬರೂ ಕೂಡ ಕೆಲವು ವರ್ಷಗಳ ಕಾಲ ಒಟ್ಟಿಗೆ ಸಹ ಜೀವನ ನಡೆಸುತ್ತಾ, ಒಟ್ಟಿಗೆ ವಾಸಿಸುತ್ತಿದ್ದರು (living together). ಆಕಾಂಕ್ಷಾಗೆ ಬೇರೆ ಕೆಲಸ ಸಿಕ್ಕಿದ್ದರಿಂದ ಬೆಂಗಳೂರಿಗೆ ಶಿಫ್ಟ್ ಆದಳು. ದೆಹಲಿ ಮೂಲದ ಪ್ರಿಯಕರ ಅರ್ಪಿತ್​​ ಆಕೆಯನ್ನು ಭೇಟಿಯಾಗಲು ಆಗಾಗ ಬೆಂಗಳೂರಿಗೆ ಬರುತ್ತಿದ್ದ. ಇದೇ ತಿಂಗಳ 5ರಂದು ಸಹ ಬೆಂಗಳೂರಿನ (Bengaluru) ಭೀಮಾನಗರದ ಅಪಾರ್ಟ್ ಮೆಂಟ್ ನಲ್ಲಿ (Jeevan Bheema Nagar police) ವಾಸವಿದ್ದ ಆಕಾಂಕ್ಷಾ ಬಳಿಗೆ ಅರ್ಪಿತ್ ಬಂದಿದ್ದಾನೆ. ಇಬ್ಬರ ನಡುವೆ ವಾಗ್ವಾದ ನಡೆಯಿತಂತೆ. ಆ ಸಿಟ್ಟಿನಲ್ಲಿ ಅರ್ಪಿತ್ ಆಕಾಂಕ್ಷಾಳನ್ನು ಕೊಂದಿದ್ದಾನೆ  (murder) ಎಂದು ಪೊಲೀಸರು ತಿಳಿಸಿದ್ದಾರೆ. ಆಕಾಂಕ್ಷಾಳ ದೇಹವನ್ನು ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿ, ಆತ್ಮಹತ್ಯೆ ಮಾಡಿಕೊಂಡಿರುವಂತೆ ಬಿಂಬಿಸಲು ಅರ್ಪಿತ್ ಪ್ರಯತ್ನಿಸಿದ್ದಾನೆ. ಆದರೆ ಅದು ಅವನೊಬ್ಬನಿಂದ ಸಾಧ್ಯವಾಗದ ಕಾರಣ ಮೃತದೇಹವನ್ನು ನೆಲದ ಮೇಲೆಯೇ ಬಿಟ್ಟು ಮನೆ ಬಾಗಿಲು ಹಾಕಿಕೊಂಡು ಓಡಿ ಹೋಗಿದ್ದಾನೆ.

ಕೆಲ ದಿನಗಳಿಂದ ಇಬ್ಬರ ನಡುವೆ ವೈಮನಸ್ಸು, ಆಗಾಗ ಜಗಳ ನಡೆಯುತ್ತಿತ್ತು ಎನ್ನುತ್ತಾರೆ ಆಕಾಂಕ್ಷಾ ಫ್ಲಾಟ್ ಮೇಟ್ ಗಳು. ಕೊನೆಗೆ ಇಬ್ಬರೂ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಹೀಗಿರುವಾಗ ಸೋಮವಾರ ಸಂಜೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಅರ್ಪಿತ್ ಕೋಪದ ಭರದಲ್ಲಿ ಗೆಳತಿ ಆಕಾಂಕ್ಷಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಹೈದರಾಬಾದ್​ ವರದಿ: ಪೆಡಪಡಳ್ಳಿ ಜಿಲ್ಲೆಯ ಗೋದಾವರಿ ಖಾನಿಯಲ್ಲಿ ನೆಲೆಸಿರುವ ಜ್ಞಾನೇಶ್ವರ್ ಅವರಿಗೆ ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ. ಹಿರಿಯ ಮಗಳು ಆಕಾಂಕ್ಷಾ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್​​ ಆಗಿ ಕೆಲಸ ಮಾಡುತ್ತಿದ್ದು, ಅಲ್ಲಿನ ಜೀವನ್ ಭೀಮಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಡಿಹಳ್ಳಿಯಲ್ಲಿ ವಾಸವಾಗಿದ್ದಳು. ಹೈದರಾಬಾದ್‌ನಲ್ಲಿಯೇ ಕೆಲಸದಲ್ಲಿವಾಗ ಆಕಾಂಕ್ಷಾಗೆ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅರ್ಪಿತ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಮುಂದೆ, ಸ್ನೇಹ ಪ್ರೇಮಕ್ಕೆ ತಿರುಗಿ ಆಕಾಂಕ್ಷಾ ಮತ್ತು ಅರ್ಪಿತ್ ಒಟ್ಟಿಗೆ ಇರಲು ಆರಂಭಿಸಿದ್ದರು. ಆ ಬಳಿಕ ಟೆಕ್ಕಿ ಆಕಾಂಕ್ಷಾ ಬೆಂಗಳೂರಿಗೆ ವರ್ಗಾವಣೆಯಾಗಿದ್ದಳು. ವಾರಾಂತ್ಯದ ವೇಳೆಗಳಲ್ಲಿ ಆಕಾಂಕ್ಷಾಳನ್ನು ಭೇಟಿಯಾಗಲು, ಅರ್ಪಿತ್ ಬೆಂಗಳೂರಿಗೆ ಹೋಗುತ್ತಿದ್ದ ಎಂದು ಗೊತ್ತಾಗಿದೆ.

ಸೋಮವಾರ ಇಬ್ಬರ ನಡುವೆ ಜಗಳ ನಡೆದಿದ್ದು, ಕೋಪಗೊಂಡ ಅರ್ಪಿತ್ ಆಕಾಂಕ್ಷಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದು, ಪರಾರಿಯಾಗಿದ್ದಾನೆ. ಮಂಗಳವಾರ ಬೆಳಗ್ಗೆ ಕೊಠಡಿಗೆ ಬಂದಾಗ ಆಕಾಂಕ್ಷಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು ಎಂದು ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಬುಧವಾರ ಬೆಳಗ್ಗೆ ಆಕಾಂಕ್ಷಾ ಅವರ ಪಾರ್ಥಿವ ಶರೀರ ಗೋದಾವರಿಖಾನೆ ತಲುಪಿದ್ದು, ಕುಟುಂಬಸ್ಥರು ಅಂತಿಮ ಸಂಸ್ಕಾರ ನೆರವೇರಿಸಿದರು.

ಇತ್ತ ಆಕಾಂಕ್ಷಾ ಮನೆಯಲ್ಲಿ ಮದುವೆ ಏರ್ಪಾಟು ನಡೆದಿತ್ತು. ಅದರ ಮಧ್ಯೆಯೇ ಆಕಾಂಕ್ಷಾಳ ಅನಿರೀಕ್ಷಿತ ಸಾವು ಕುಟುಂಬಸ್ಥರನ್ನು ತೀವ್ರ ದುಃಖದಲ್ಲಿ ಮುಳುಗಿಸಿದೆ. ತಮ್ಮ ಮಗಳ ಪ್ರಾಣವನ್ನೇ ಬಲಿಕೊಟ್ಟು, ಆತ್ಮಹತ್ಯೆಗೆ ಯತ್ನಿಸಿದಳು ಎಂದು ಹೇಳುತ್ತಿರುವ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಕಾಂಕ್ಷಾ ಪೋಷಕರು ಮನವಿ ಮಾಡಿದ್ದಾರೆ. ಬೆಂಗಳೂರು ಪೊಲೀಸರು ಅರ್ಪಿತ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:35 pm, Wed, 7 June 23

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ