ತಮಿಳುನಾಡಿನಲ್ಲಿ ನಡೆದ ಎನ್‌ಸಿಸಿ ಶಿಬಿರದಲ್ಲಿ 12 ಮಂದಿ ವಿದ್ಯಾರ್ಥಿನಿಯರಿಗೆ ನೀಡಿದ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 13 ವರ್ಷದ ಬಾಲಕಿ ಮೇಲೆ ಎನ್‌ಟಿಕೆ ಪಕ್ಷದ ಕಾರ್ಯಕರ್ತ ಶಿವರಾಮನ್‌ನನ್ನು ಬಂಧಿಸಲಾಗಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಬರ್ಗೂರಿನ ಶಾಲೆಯ ಶಿಬಿರವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಎನ್‌ಟಿಕೆ ಕಾರ್ಯಕರ್ತ ಸೇರಿದಂತೆ 9 ಜನರನ್ನು ಬಂಧಿಸಲಾಗಿದೆ. ಆಗಸ್ಟ್ 9 ರಂದು ಶಾಲೆಯಲ್ಲಿ ವಿದ್ಯಾರ್ಥಿಗಳು ಎನ್‌ಸಿಸಿ ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದಲ್ಲಿ 12 ವರ್ಷದ ವಿದ್ಯಾರ್ಥಿ ಸೇರಿದಂತೆ 17 ವಿದ್ಯಾರ್ಥಿಗಳು ಇದ್ದರು ಮತ್ತು ಶಾಲೆಯ ಸಭಾಂಗಣದಲ್ಲಿ ಮಲಗಿದ್ದರು ಎಂದು ವರದಿಯಾಗಿದೆ.
ಆಗಸ್ಟ್ 16 ರಂದು ಬಾಲಕಿ ಅಸ್ವಸ್ಥಳಾಗಿದ್ದು, ಆಕೆಯ ಪೋಷಕರು ಆಕೆಯ ಆರೋಗ್ಯದ ಬಗ್ಗೆ ಕೇಳಿದಾಗ, ಶಿಬಿರದ ಭಾಗವಾಗಿದ್ದ ಶಿವರಾಮನ್ ತನ್ನನ್ನು ಎಬ್ಬಿಸಿ ಏಕಾಂತ ಸ್ಥಳಕ್ಕೆ ಕರೆದೊಯ್ದು ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಎನ್‌ಟಿಕೆಯಲ್ಲಿ ಪದಾಧಿಕಾರಿಯೂ ಆಗಿರುವ ಶಿವರಾಮನ್‌ರನ್ನು ಈ ಘಟನೆ ಬೆಳಕಿಗೆ ಬಂದ ನಂತರ ಪಕ್ಷದಿಂದ ಹೊರಹಾಕಲಾಯಿತು.
ಮತ್ತಷ್ಟು ಓದಿ: ಬೆಂಗಳೂರು: ಲಿಫ್ಟ್ ಕೇಳಿದ ಯುವತಿ ಮೇಲೆ ಎರಗಿ ಅತ್ಯಾಚಾರ ಎಸಗಿದ್ದ ಕಾಮುಕ ಅರೆಸ್ಟ್, ಸಿಸಿಟಿವಿ ಆಧರಿಸಿ ಆರೋಪಿ ಬಂಧನ
ಈ ಕುರಿತು ತನ್ನ ಶಾಲಾ ಶಿಕ್ಷಕ ಮತ್ತು ಪ್ರಾಂಶುಪಾಲ ಸತೀಶ್ ಕುಮಾರ್ ಅವರಿಗೆ ದೂರು ನೀಡಿದ್ದು, ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಾಲಕಿ ಆರೋಪಿಸಿದ್ದಾಳೆ. 12 ವರ್ಷದ ಬಾಲಕಿಯನ್ನು ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿ ಸತೀಶ್ ಕುಮಾರ್, ಶಿವರಾಮನ್, ಜೆನ್ನಿಫರ್, ಸ್ಯಾಮ್ಸನ್ ವೆಸ್ಲಿ, ಶಕ್ತಿವೇಲ್, ಸಿಂಧು, ಸತ್ಯ ಮತ್ತು ಸುಬ್ರಮಣಿಯನ್ನು ಬಂಧಿಸಿದ್ದಾರೆ. ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಪರಾರಿಯಾಗಿದ್ದ ಶಿವರಾಮನ್ ಮತ್ತು ಸುಧಾಕರ್ ಬಂಧನಕ್ಕೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಮೂಲಗಳ ಪ್ರಕಾರ, ಶಿವರಾಮನ್ ಐದಕ್ಕೂ ಹೆಚ್ಚು ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ತನಿಖೆಯ ವೇಳೆ ಪೊಲೀಸರಿಗೆ ತಿಳಿದುಬಂದಿದೆ. ವಿಶೇಷ ತಂಡ ಕೊಯಮತ್ತೂರಿನಲ್ಲಿ ಶಿವರಾಮನ್‌ನನ್ನು ಬಂಧಿಸಿದ್ದು, ಸುಧಾಕರ್‌ಗಾಗಿ ಹುಡುಕಾಟ ನಡೆಸುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ