Tamil Nadu: ಶಾಲಾ ವಿದ್ಯಾರ್ಥಿಗಳ ಮೇಲೆ ಕಾರು ಹತ್ತಿಸಿದ ಕಾಲೇಜು ವಿದ್ಯಾರ್ಥಿ, ಸ್ಥಳದಲ್ಲೇ ಮೂವರು ಸಾವು

|

Updated on: Mar 01, 2023 | 2:46 PM

ಕಾಲೇಜು ವಿದ್ಯಾರ್ಥಿಯೊಬ್ಬ 3 ಶಾಲಾ ವಿದ್ಯಾರ್ಥಿಗಳ ಮೇಲೆ ಕಾರು ಹರಿಸಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.

Tamil Nadu: ಶಾಲಾ ವಿದ್ಯಾರ್ಥಿಗಳ ಮೇಲೆ ಕಾರು ಹತ್ತಿಸಿದ ಕಾಲೇಜು ವಿದ್ಯಾರ್ಥಿ, ಸ್ಥಳದಲ್ಲೇ ಮೂವರು ಸಾವು
ಸಾಂದರ್ಭಿಕ ಚಿತ್ರ
Follow us on

ಕಾಲೇಜು ವಿದ್ಯಾರ್ಥಿಯೊಬ್ಬ 3 ಶಾಲಾ ವಿದ್ಯಾರ್ಥಿಗಳ ಮೇಲೆ ಕಾರು ಹರಿಸಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ. ತಮಿಳುನಾಡಿನ ತಿರುಪತ್ತೂರ್​ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ, ಹೆದ್ದಾರಿಯಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ರಫೀಕ್, ವಿಜಯ್ ಹಾಗೂ ಸೂರ್ಯನ ಮೇಲೆ ಕಾರು ಹರಿಸಲಾಗಿದೆ.

ಕಾಲೇಜು ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಯಳಗಿರಿ ಬೆಟ್ಟಕ್ಕೆ ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದಾಗ ವಾಣಿಯಂಬಾಡಿ ಬಳಿಯ ಸರ್ವೀಸ್​ ಲೇನ್​ನಲ್ಲಿ ನಿಯಂತ್ರಣ ತಪ್ಪಿ ಸೈಕಲ್​ಗೆ ಕಾರು ಡಿಕ್ಕಿ ಹೊಡೆದಿದೆ.

ಮತ್ತಷ್ಟು ಓದಿ: ಧಾರವಾಡ: ಲಾರಿ-ಕಾರು ನಡುವೆ ಭೀಕರ ಅಪಘಾತ, ಐವರು ಸ್ಥಳದಲ್ಲೇ ದುರ್ಮರಣ

ಹಿರಿಯ ಪೊಲೀಸ್ ಅಧಿಕಾರಿ ಎಂ.ಎಸ್.ಮುತ್ತುಸಾಮಿ ಅವರು ಎನ್‌ಡಿಟಿವಿಗೆ ಮಾಹಿತಿ ನೀಡಿದ್ದು, ಚಾಲಕ ಕುಡಿದಿರಲಿಲ್ಲ ಮತ್ತು ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಸಾವಿಗೆ ಕಾರಣ ಎನ್ನಲಾಗಿದೆ.

ವಿದ್ಯಾರ್ಥಿಗಳ ದುರಂತ ಸಾವಿಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ್ದಾರೆ .

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ