ಇಲ್ಲಿರುವುದು ಒಂದೇ ಒಂದು ಶಿವಸೇನಾ, ಇದು ಎಲ್ಲರನ್ನೂ ಪ್ರತಿನಿಧಿಸುತ್ತದೆ ಎಂದ ಶಿಂಧೆ ಬಣ

ಮುಖ್ಯ ಸಚೇತಕರ ಆದೇಶವನ್ನು ಉಲ್ಲಂಘಿಸುವ ಯಾವುದೇ ನಾಯಕರ ವಿರುದ್ಧ ಕನಿಷ್ಠ ಎರಡು ವಾರಗಳವರೆಗೆ ಪಕ್ಷವು ಕ್ರಮ ಕೈಗೊಳ್ಳುವುದಿಲ್ಲ ಎಂದು ಶಿವಸೇನಾ ನಿನ್ನೆ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.

ಇಲ್ಲಿರುವುದು ಒಂದೇ ಒಂದು ಶಿವಸೇನಾ, ಇದು ಎಲ್ಲರನ್ನೂ ಪ್ರತಿನಿಧಿಸುತ್ತದೆ ಎಂದ ಶಿಂಧೆ ಬಣ
ಏಕನಾಥ್ ಶಿಂಧೆ
Follow us
ರಶ್ಮಿ ಕಲ್ಲಕಟ್ಟ
|

Updated on: Mar 01, 2023 | 3:02 PM

ಮುಂಬೈ: ಉದ್ಧವ್ ಠಾಕ್ರೆ (Uddhav Thackeray) ಅವರ ಶಿವಸೇನಾ (Shiv Sena) ಗುಂಪಿನೊಂದಿಗಿನ ಜಗಳ ನಡುವೆ ವಿಧಾನಸಭೆಗೆ ಹಾಜರಾಗಲು ಎಲ್ಲಾ ಪಕ್ಷದ ನಾಯಕರು ತಮ್ಮ ಕರೆಯನ್ನು ಅನುಸರಿಸಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde)ಅವರ ಶಿವಸೇನಾ ಬಣ ಹೇಳಿದೆ. ಕಳೆದ ವರ್ಷ ಠಾಕ್ರೆ ವಿರುದ್ಧ ಬಂಡಾಯವೆದ್ದು ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಹೊರಹಾಕಿದ ಶಿಂಧೆ ನೇತೃತ್ವದ ಬಣಕ್ಕೆ ಚುನಾವಣಾ ಆಯೋಗವು ಶಿವಸೇನಾ ಹೆಸರು ಮತ್ತು ಬಿಲ್ಲು-ಬಾಣ ಪಕ್ಷದ ಚಿಹ್ನೆಯನ್ನು ನೀಡಿದ ನಂತರ, ಶಿಂಧೆ ಬಣ ಶಿವಸೇನಾ ಆಗಿದ್ದು ಇದು ಎಲ್ಲಾ ಪಕ್ಷದ ನಾಯಕರನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದೆ.

“ಶಿವಸೇನಾ ಒಂದೇ ಇದೆ. ನಮ್ಮ ಬಳಿ ಪಕ್ಷದ ಹೆಸರು ಮತ್ತು ಚಿಹ್ನೆ ಇದೆ. ಎಲ್ಲರೂ ನಮ್ಮೊಂದಿಗೆ ಇರಬೇಕು ಮತ್ತು ನಾವು ಏನು ಹೇಳುತ್ತೇವೋ ಅದನ್ನು ಅನುಸರಿಸಬೇಕು. ಅವರು ಮಾಡದಿದ್ದರೆ, ಎರಡು ವಾರಗಳ ನಂತರ ನಾವು ಅವರೊಂದಿಗೆ ಏನು ಮಾಡಬೇಕೆಂದು ನೋಡುತ್ತೇವೆ.” ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆಯ ಮುಖ್ಯ ಸಚೇತಕ ಭರತ್ ಗೋಗವಾಲೆ ಹೇಳಿದ್ದಾರೆ.

ಮುಖ್ಯ ಸಚೇತಕರ ಆದೇಶವನ್ನು ಉಲ್ಲಂಘಿಸುವ ಯಾವುದೇ ನಾಯಕರ ವಿರುದ್ಧ ಕನಿಷ್ಠ ಎರಡು ವಾರಗಳವರೆಗೆ ಪಕ್ಷವು ಕ್ರಮ ಕೈಗೊಳ್ಳುವುದಿಲ್ಲ ಎಂದು ಶಿವಸೇನಾ ನಿನ್ನೆ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ. ಲೋಕಸಭೆಯಲ್ಲಿ ತಮ್ಮ ಮುಖ್ಯ ಸಚೇತಕರನ್ನು ಕೂಡ ಶಿವಸೇನಾ ಬದಲಾಯಿಸಲಿದೆ. ಶಿಂಧೆ ಶೀಘ್ರದಲ್ಲೇ ಹೆಸರನ್ನು ಘೋಷಿಸಲಿದ್ದಾರೆ ಎಂದು ಗೋಗಾವಾಲೆ ಹೇಳಿದರು.

“ನಾವು ಸದ್ಯಕ್ಕೆ ಯಾರ ವಿರುದ್ಧವೂ ಕ್ರಮ ಕೈಗೊಳ್ಳುವುದಿಲ್ಲ. ನಮ್ಮ ವಿಪ್ ಮಾತ್ರ ಎಲ್ಲರೂ ವಿಧಾನಸಭಾ ಅಧಿವೇಶನಕ್ಕೆ ಹಾಜರಾಗಬೇಕೆಂದು ಹೇಳುತ್ತದೆ” ಎಂದು ಅವರು ಎನ್‌ಡಿಟಿವಿಗೆ ತಿಳಿಸಿದರು. ಉದ್ಧವ್ ಠಾಕ್ರೆ ನೇತೃತ್ವದ ಬಣವಾದ ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆಯ ಅನೇಕ ಶಾಸಕರು “ನಮ್ಮೊಂದಿಗೆ ಸೇರಲು ಸಿದ್ಧರಾಗಿದ್ದಾರೆ” ಎಂದು ಗೋಗಾವಾಲೆ ಹೇಳಿದರು.

ಇದನ್ನೂ ಓದಿ: Delhi cabinet: ದೆಹಲಿ ಸರ್ಕಾರದಲ್ಲಿ ಸೌರಭ್ ಭಾರದ್ವಾಜ್ ಮತ್ತು ಅತಿಶಿಗೆ ಸಚಿವ ಸ್ಥಾನ

“ಅವರು ನಮ್ಮ ಬಳಿಗೆ ಬರುತ್ತಾರೆ, ನಾವು ಕಾದು ನೋಡುವ ಪರಿಸ್ಥಿತಿಯಲ್ಲಿದ್ದೇವೆ. ಇದೇ ಕಾರಣಕ್ಕಾಗಿಯೇ ಆದಿತ್ಯ ಠಾಕ್ರೆ ಸರ್ಕಾರ ಇಂದು, ನಾಳೆ, ನಾಳೆ ನಾಳೆ ಬೀಳುತ್ತದೆ ಎಂದು ಪ್ರತಿ ದಿನ ಹೇಳಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವ ನಾವು ಈಗ ಏಳು ತಿಂಗಳಿನಿಂದ ಸರ್ಕಾರವನ್ನು ನಡೆಸುತ್ತಿದ್ದೇವೆ. ಶರದ್ ಪವಾರ್ ಕೂಡ ಉದ್ಧವ್ ಠಾಕ್ರೆ ಅವರಿಗೆ ನಮ್ಮ ಸರ್ಕಾರ ಪತನವಾಗುವುದಿಲ್ಲ ಎಂದು ಹೇಳಿದ್ದಾರೆ. ಎಲ್ಲರೂ ಬಂದು ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ ಎಂದು ಶ್ ಗೋಗಾವಾಲೆ ಹೇಳಿದರು.

ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರು, ಶ ಶಿಂಧೆ ಅವರು “ಅಸಂವಿಧಾನಿಕ” ಸರ್ಕಾರವನ್ನು ಹೇಗೆ ನಡೆಸುತ್ತಿದ್ದಾರೆಂದು ಮಹಾರಾಷ್ಟ್ರದ ಜನರಿಗೆ ತಿಳಿದಿದೆ, ಅದು “ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ” ಎಂದು ಹೇಳಿದ್ದಾರೆ. ಶರದ್ ಪವಾರ್ ಅವರು ಉದ್ಧವ್ ಠಾಕ್ರೆ ತಂಡದ ಮಿತ್ರರಾಷ್ಟ್ರವಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮುಖ್ಯಸ್ಥರಾಗಿದ್ದಾರೆ.

ಉದ್ಧವ್ ಠಾಕ್ರೆ ಮತ್ತು ಅವರ ಸೇನಾ ಬಣದ ಇತರ ಪ್ರಮುಖ ನಾಯಕರು ತಮ್ಮ ನಿಷ್ಠಾವಂತರನ್ನು ಹಿಡಿದಿಟ್ಟುಕೊಳ್ಳಲು ರಾಜ್ಯಾದ್ಯಂತ ಸ್ಥಳೀಯ ಸೇನಾ ನಾಯಕರು ಮತ್ತು ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದಾರೆ. ಠಾಕ್ರೆ ಅವರ ಆರೋಪವೆಂದರೆ ಶಿಂಧೆ ಅವರು ಕಳೆದ ವರ್ಷ ಬಂಡಾಯದಲ್ಲಿ ಭಾಗವಹಿಸಿದ ಶಾಸಕರ ಗುಂಪಿನ ನಾಯಕ ಮಾತ್ರ, ಮಹಾರಾಷ್ಟ್ರದ ಜನರು ಬೆಂಬಲಿಸಿದ ನಾಯಕರಲ್ಲ ಎಂದಿದ್ದಾರೆ.

ಶಿಂಧೆ ಅವರ ಸ್ವಾಧೀನವನ್ನು ಕಾನೂನುಬಾಹಿರ ಎಂದು ತೀರ್ಪು ನೀಡಬೇಕೆಂದು ಬಯಸುತ್ತಿರುವ ಠಾಕ್ರೆಯವರ ಮನವಿಯನ್ನು ಸುಪ್ರೀಂಕೋರ್ಟ್ ಪರಿಶೀಲಿಸುತ್ತಿದೆ. ನಿನ್ನೆ ನಡೆದ ಅನಿರ್ದಿಷ್ಟ ವಿಚಾರಣೆಯ ನಂತರ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ