ತಮಿಳುನಾಡಿನಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆಗೆ ನಗರದ ಸುತ್ತಾಮುತ್ತ ಜಲಾವೃತಗೊಂಡಿದ್ದು, ನವೆಂಬರ್ 11ರವರೆಗೂ ಮಳೆ ಆರ್ಭಟ ಮುಂದುವರಿಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಆರು ವರ್ಷದ ಬಳಿಕ ತಮಿಳುನಾಡಿನಲ್ಲಿ ಭಾರಿ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಜನ ವಸತಿ ಪ್ರದೇಶಗಳು ಮುಳುಗಡೆಯಾಗಿವೆ. ರಸ್ತೆಯಲ್ಲಿ ನೀರು ಹರಿಯುತ್ತಿರುವ ಕಾರಣ ವಾಹನ ಸವಾರರು ಪರದಾಡುತ್ತಿದ್ದಾರೆ. ಇನ್ನು ಮಳೆ ಬಿಟ್ಟುಬಿಡದೆ ಸುರಿಯುತ್ತಿರುವುದರಿಂದ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಮುಂದಿನ 2 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸತತ ಎರಡನೇ ದಿನವೂ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚೆನ್ನೈನಲ್ಲಿ ಭಾರಿ ಮಳೆಯಿಂದ ನಗರದ ಹಲವು ಪ್ರದೇಶಗಳು ಜಲಾವೃತವಾಗಿವೆ. ವಾಹನ ಸವಾರರು ಪರದಾಡುತಿದ್ದಾರೆ. ಪ್ರವಾಹ ಪೀಡಿತರಿಗೆ ಸುಮಾರು 3.36 ಲಕ್ಷ ಆಹಾರ ಪ್ಯಾಕೆಟ್‌ಗಳನ್ನು ಪೂರೈಸಿದೆ. 15 ಮನೆಗಳಲ್ಲಿ ಅಡುಗೆ ಮಾಡಲಾಗುತ್ತಿದೆ. ಚೆನ್ನೈನ ಎಲ್ಲಾ 200 ವಿಭಾಗಗಳಲ್ಲಿ ವೈದ್ಯಕೀಯ ಶಿಬಿರಗಳು ಮತ್ತು ಲಸಿಕೆ ಶಿಬಿರಗಳನ್ನು ಸಹ ಆಯೋಜಿಸಲಾಗಿದೆ.
ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಚೆನ್ನೈ ನಗರದ ರಾಯಪುರಂ ಮತ್ತು ಬಂದರು ಪ್ರದೇಶಗಳಲ್ಲಿ ಪ್ರವಾಹ ಪೀಡಿತರಿಗೆ ಅಗತ್ಯ ವಸ್ತುಗಳನ್ನು ಮತ್ತು ಆಹಾರವನ್ನು ವಿತರಿಸಿದರು.
Tamil Nadu CM MK Stalin distributes relief material and food to the needy people in Royapuram and harbour areas of rain-affected Chennai city
(Source: Tamil Nadu government) pic.twitter.com/6YpXymxI3r
— ANI (@ANI) November 8, 2021
ಭಾರೀ ಮಳೆಯಿಂದ ಚೆನ್ನೈನ ಕೆಲವು ಭಾಗಗಳಲ್ಲಿ ನೀರು ನಿಂತಿದೆ. ಕೊರಟ್ಟೂರು ಪ್ರದೇಶದಲ್ಲಿ ಇಂದು ಬೆಳಿಗ್ಗೆ ನೀರು ನಿಂತಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ನವೆಂಬರ್ 9ರಿಂದ11 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಅಂತ ಐಎಮ್ಡಿ ತಿಳಿಸಿದೆ.
#WATCH | Tamil Nadu: Water logging in parts of Chennai, following heavy rainfall here, affects normal life. Visuals from Korattur area this morning.
Heavy rainfall expected in coastal areas of Andhra Pradesh and Tamil Nadu from 9-11th Nov due to northeast monsoon, as per IMD. pic.twitter.com/E5ZaWH3KCM
— ANI (@ANI) November 8, 2021
ಚೆನ್ನೈ ನಾಗರಿಕ ಸಂಸ್ಥೆಯು ಪ್ರವಾಹ ಪೀಡಿತರಿಗೆ ಊಟವನ್ನು ನೀಡಿದೆ. ಸುಮಾರು 65,000 ಊಟದ ಪ್ಯಾಕೆಟ್‌ಗಳನ್ನು ಹಸ್ತಾಂತರ ಮಾಡಲಾಗಿದೆ.
24 ಗಂಟೆಗಳಲ್ಲಿ ಚೆನ್ನೈ ಜಿಲ್ಲೆಯ ಪೆರಂಬೂರ್‌ನಲ್ಲಿ 14 ಸೆಂ.ಮೀ ಮಳೆಯಾಗಿದೆ. ಚೆಂಗಲ್ಪಟ್ಟು ಜಿಲ್ಲೆಯ ಚೆಯ್ಯೂರ್ ಮತ್ತು ಮಧುರಾಂತಗಂನಲ್ಲಿ ತಲಾ 13 ಸೆಂ.ಮೀ, ಚೆನ್ನೈನ ತೊಂಡಯಾರ್‌ಪೇಟ್‌ನಲ್ಲಿ 10 ಸೆಂ.ಮೀ., ಅಯ್ಯನವರಂ, ಚೆನ್ನೈ ಕಲೆಕ್ಟರೇಟ್ ಮತ್ತು ಗುಮ್ಮಿಡಿಪೂಂಡಿಯಲ್ಲಿ ತಲಾ 9 ಸೆಂ.ಮೀ ಮಳೆಯಾಗಿದೆ ಎಂದು ತಿಳಿದುಬಂದಿದೆ.
ಚೆನ್ನೈನಲ್ಲಿ ಕಳೆದ 24 ಗಂಟೆಗಳಲ್ಲಿ 134.29 ಮಿಮೀ ಮಳೆಯಾಗಿರುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಸ್ತೆಗಳು ಸಂಪೂರ್ಣ ಜಲಾವೃಗೊಂಡಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮನೆಗಳು ಮುಳುಗಡೆಯಾಗಿವೆ.
ಇಂದು ಚೆನ್ನೈ, ವಿಲ್ಲುಪುರಂ, ಕಡಲೂರು, ನಾಗಪಟ್ಟಣಂ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಪುದುಚೇರಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆಂಧ್ರಪ್ರದೇಶದ ಕರಾವಳಿ ಭಾಗ, ತಮಿಳುನಾಡಿನಲ್ಲಿ ನವೆಂಬರ್ 11 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯಿದೆ. ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆಯಿದ್ದು, ತಮಿಳುನಾಡಿನ ಹಲವು ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಶನಿವಾರ ರಾತ್ರಿ 23 ಸೆಂಟಿ ಮೀಟರ್ ಮಳೆಯಾಗಿದ್ದು, ಚೆನ್ನೈ ತತ್ತರವಾಗಿದೆ.
ತಮಿಳುನಾಡಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಮಹಾ ಮಳೆಗೆ ಚೆನ್ನೈ ಮಹಾನಗರ ತತ್ತರಿಸಿದೆ. ಕಳೆದ 12 ಗಂಟೆ ಅವಧಿಯಲ್ಲಿ ಭಾರಿ ಮಳೆಯಾಗಿದೆ. ಚೆನ್ನೈನ ಹಲವು ರಸ್ತೆಗಳು ಕೆರೆಗಳಂತಾಗಿವೆ. ಚೆಂಬರಂ ಬಾಕ್ಕಂ, ಪೊಂಡಿ, ಪುಳಲ್ ಡ್ಯಾಂಗಳು ಭರ್ತಿಯಾದ ಹಿನ್ನೆಲೆ ನೀರು ಬಿಡುಗಡೆ ಮಾಡಲಾಗಿದೆ.
9ರಿಂದ 11 ರವರೆಗೆ ಆಂಧ್ರ ಮತ್ತು ತಮಿಳುನಾಡಿನ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ.
ಭಾರಿ ಮಳೆಗೆ ವಾಹನ ಸವಾರರು ತೀವ್ರ ಪರದಾಟ ಪಡುತ್ತಿದ್ದಾರೆ. ಚೆಂಬರಂ ಬಾಕ್ಕಂ, ಪೊಂಡಿ, ಪುಳಲ್ ಡ್ಯಾಂಗಳು ಭರ್ತಿಯಾದ ಹಿನ್ನೆಲೆ ನೀರು ಬಿಡುಗಡೆ ಮಾಡಲಾಗಿದೆ. ಚೆನ್ನೈನ ಉತ್ತರ, ದಕ್ಷಿಣ ಭಾಗದ ಹಲವೆಡೆ ಜಲಾವೃತಗೊಂಡಿವೆ.
ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಮಾತ್ರವಲ್ಲದೇ ಆದಷ್ಟು ಮನೆಯಲ್ಲೇ ಇರುವಂತೆ ಜನರಿಗೆ ಸೂಚನೆಯನ್ನೂ ನೀಡಿದೆ. 2015ರಿಂದ ಈಚೆಗೆ ಚೆನ್ನೈನಲ್ಲಿ ಇಷ್ಟು ಪ್ರಮಾಣದಲ್ಲಿ ಮಳೆ ಆಗಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ತಮಿಳುನಾಡಿನಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಮಳೆ ಹಾನಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ನಿಂದ ಮಾಹಿತಿ ಪಡೆದು, ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಮುಂದಿನ 2 ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಧಾರಾಕಾರ ಮಳೆಗೆ ಚೆನ್ನೈ ಮಹಾನಗರ ಸ್ತಬ್ಧವಾಗಿದೆ. ಚೆನ್ನೈ ಏರ್ಪೋರ್ಟ್ ರನ್ವೇ ಕೂಡ ಬಂದ್ ಆಗಿದ್ದು, ಚೆನ್ನೈ ಲೋಕಲ್ ಟ್ರೈನ್ಗಳು ಸ್ತಬ್ಧಗೊಂಡಿವೆ.
ಭಾರಿ ಮಳೆಗೆ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ತಿರುವಳ್ಳೂರ್, ಚೆಂಗಲ್ಪಟ್ಟು, ಕಾಂಚಿಪುರ ಸೇರಿ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ.
ಹಲವು ವರ್ಷಗಳ ನಂತರ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆಯ ಆರ್ಭಟಕ್ಕೆ ಜನ ಜೀವನ ಅಸ್ತವ್ಯಸ್ತವಾಗಿದ್ದು, ಭೀತಿ ಎದುರಾಗಿದೆ.
Published On - 10:48 am, Mon, 8 November 21