ಚೆನ್ನೈ: ಏನೇನೋ ಮಾಸ್ಟರ್ ಪ್ಲಾನ್ ಮಾಡಿ ಕಳ್ಳತನ ಮಾಡುವ ಎಷ್ಟೋ ಕಳ್ಳರಿದ್ದಾರೆ. ಆದರೆ, ತಮಿಳುನಾಡಿನ ತಿರುವಳ್ಳೂರಿನಲ್ಲಿ ಕುಡಿತದ ನಶೆಯಲ್ಲಿ ಮೈಮರೆತು ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಕಳ್ಳರು ಮದ್ಯದಂಗಡಿಯ ಗೋಡೆ ಕೊರೆದು, ಒಳಗೆ ನುಗ್ಗಿ ಅಲ್ಲಿದ್ದ ಮದ್ಯ ಸೇವಿಸಿದ್ದಾರೆ. ಕೊನೆಗೆ ಮೈಮೇಲೆ ಪ್ರಜ್ಞೆಯೇ ಇಲ್ಲದಂತೆ ಬಿದ್ದಿದ್ದ ಅವರನ್ನು ತಮಿಳುನಾಡಿನ ಪೊಲೀಸರು ಹೊರಗೆ ಎಳೆದು ತಂದಿದ್ದಾರೆ.
ಕದಿಯಲು ಹೋಗಿ, ಕುಡಿಯುತ್ತಾ ಕುಳಿತು ಸಿಕ್ಕಿಬಿದ್ದ ಈ ಇಬ್ಬರು ಕಳ್ಳರನ್ನು ಪಳ್ಳಿಕರಣೈ ನಿವಾಸಿ ಸತೀಶ್ ಮತ್ತು ವಿಲುಪುರಂ ಮೂಲದ ಮುನಿಯನ್ ಎಂದು ಗುರುತಿಸಲಾಗಿದೆ. ಇವರಿಬ್ಬರಿಂದ 14,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಕವರಾಯಪೆಟ್ಟೈನಲ್ಲಿರುವ ಸರ್ಕಾರಿ ಟಾಸ್ಮಾಕ್ ಮದ್ಯದ ಅಂಗಡಿಯ ಬಾಗಿಲು ಮುಚ್ಚಿದ ನಂತರ ಇಬ್ಬರು ಕಳ್ಳರು ಗೋಡೆ ಕೊರೆದು ಅದರೊಳಗೆ ಪ್ರವೇಶಿಸಿದ್ದರು.
Two men drilled a hole in the wall of a liquor shop & were boozing inside when caught redhanded by a patrol police in Thiruvallur district. The men had planned to steal the liquor bottles but decided to booze before taking off when they were caught @xpresstn @NewIndianXpress pic.twitter.com/zF9MoRjlUX
— Novinston Lobo (@NovinstonLobo) September 4, 2022
ಮದ್ಯದಂಗಡಿಯನ್ನು ಪ್ರವೇಶಿಸಲು ಗೋಡೆಗೆ ದೊಡ್ಡ ರಂಧ್ರವನ್ನು ಕೊರೆದ ಕಳ್ಳರು ಒಳಗೆ ಹೋದ ನಂತರ ಅಂಗಡಿಯಲ್ಲಿ ಇಟ್ಟಿದ್ದ ಮದ್ಯವನ್ನು ಕುಡಿಯಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ಅವರು ಪ್ರಜ್ಞೆಯನ್ನು ಕಳೆದುಕೊಂಡರು. ಅಷ್ಟರಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಗೋಡೆಯ ದೊಡ್ಡ ರಂಧ್ರ ಮತ್ತು ಒಳಗೆ ಮದ್ಯದ ಬಾಟಲಿಗಳೊಂದಿಗೆ ಕುಳಿತಿದ್ದ ಕಳ್ಳರಿಬ್ಬರನ್ನು ನೋಡಿ ಆಘಾತಕ್ಕೊಳಗಾದರು. ನಂತರ ಅವರಿಬ್ಬರನ್ನೂ ಅದೇ ರಂಧ್ರದ ಮೂಲಕ ಹೊರಗೆ ಎಳೆದುಕೊಂಡು ಬರಲಾಯಿತು.
I love the the way the police handled them. For ppl who dont understand, the police were saying things like ‘get out slowly n carefully.. Dont be scared’. After they got out, police were asking them how they made that hole. Matured and well trained policemen.
— Ny (@naveenceg) September 4, 2022
ಕಳ್ಳರನ್ನು ಪಳ್ಳಿಕರಣೈ ನಿವಾಸಿ ಸತೀಶ್ ಮತ್ತು ವಿಲುಪುರಂ ನಿವಾಸಿ ಮುನಿಯನ್ ಎಂದು ಗುರುತಿಸಲಾಗಿದೆ. ಮದ್ಯದಂಗಡಿ ಪ್ರದೇಶದ ಬಳಿಯೇ ಉಳಿದುಕೊಂಡು ಅವರಿಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳರು ಗೋಡೆಗೆ ದೊಡ್ಡ ರಂಧ್ರ ಮಾಡಿ ನಗದನ್ನು ದೋಚಲು ಮುಂದಾಗಿದ್ದರು ಎಂಬುದು ವೈರಲ್ ಆಗಿರುವ ವಿಡಿಯೋಗಳಿಂದ ತಿಳಿದು ಬಂದಿದೆ.
Published On - 3:46 pm, Mon, 5 September 22