ಅತ್ಯಾಚಾರ ಆರೋಪಿಗೆ ‘ಕೈ’ ಟಿಕೆಟ್: ಪ್ರಶ್ನಿಸಿದಕ್ಕೆ ಕಾರ್ಯಕರ್ತೆ ಮೇಲೆ ಸ್ವಪಕ್ಷೀಯರಿಂದ ಹಲ್ಲೆ

|

Updated on: Oct 11, 2020 | 3:18 PM

ಲಕ್ನೋ: ಅತ್ಯಾಚಾರ ಆರೋಪಿಗೆ ಉಪಚುನಾವಣೆಯ ಟಿಕೆಟ್​ ಏಕೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದಕ್ಕೆ ಸ್ವಪಕ್ಷೀಯರಿಂದಲೇ ಕಾಂಗ್ರೆಸ್​ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆದಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. ಕಾಂಗ್ರೆಸ್​ ಕಾರ್ಯಕರ್ತೆ ತಾರಾ ಯಾದವ್​ ಮೇಲೆ ಆಕೆಯ ಪಕ್ಷದವರೇ ನಿನ್ನೆ ನಡೆದ ಮೀಟಿಂಗ್​ ವೇಳೆ ಹಲ್ಲೆ ನಡೆಸಿದ್ದಾರೆ. ಅತ್ಯಾಚಾರದ ಆರೋಪ ಹೊತ್ತಿರುವ ಮುಕುಂದ್​ ಭಾಸ್ಕರ್​ಗೆ ಟಿಕೆಟ್​ ನೀಡುವುದನ್ನು ಪ್ರಶ್ನಿಸಿದಕ್ಕೆ ತಾರಾ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಘಟನೆಯ ವಿಡಿಯೋ ಬೆಳಕಿಗೆ ಬಂದಿದ್ದು ಈ ಕುರಿತು ಸೂಕ್ತ […]

ಅತ್ಯಾಚಾರ ಆರೋಪಿಗೆ ‘ಕೈ’ ಟಿಕೆಟ್: ಪ್ರಶ್ನಿಸಿದಕ್ಕೆ ಕಾರ್ಯಕರ್ತೆ ಮೇಲೆ ಸ್ವಪಕ್ಷೀಯರಿಂದ ಹಲ್ಲೆ
Follow us on

ಲಕ್ನೋ: ಅತ್ಯಾಚಾರ ಆರೋಪಿಗೆ ಉಪಚುನಾವಣೆಯ ಟಿಕೆಟ್​ ಏಕೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದಕ್ಕೆ ಸ್ವಪಕ್ಷೀಯರಿಂದಲೇ ಕಾಂಗ್ರೆಸ್​ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆದಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. ಕಾಂಗ್ರೆಸ್​ ಕಾರ್ಯಕರ್ತೆ ತಾರಾ ಯಾದವ್​ ಮೇಲೆ ಆಕೆಯ ಪಕ್ಷದವರೇ ನಿನ್ನೆ ನಡೆದ ಮೀಟಿಂಗ್​ ವೇಳೆ ಹಲ್ಲೆ ನಡೆಸಿದ್ದಾರೆ.
ಅತ್ಯಾಚಾರದ ಆರೋಪ ಹೊತ್ತಿರುವ ಮುಕುಂದ್​ ಭಾಸ್ಕರ್​ಗೆ ಟಿಕೆಟ್​ ನೀಡುವುದನ್ನು ಪ್ರಶ್ನಿಸಿದಕ್ಕೆ ತಾರಾ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಘಟನೆಯ ವಿಡಿಯೋ ಬೆಳಕಿಗೆ ಬಂದಿದ್ದು ಈ ಕುರಿತು ಸೂಕ್ತ ಕ್ರಮ ಜರುಗಿಸಲು ಹಿರಿಯ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ ಆಗ್ರಹಿಸುತ್ತೇನೆ ಎಂದು ತಾರಾ ಹೇಳಿದ್ದಾರೆ.

ಒಂದು ಕಡೆ ನಮ್ಮ ಪಕ್ಷದ ನಾಯಕರು ಹತ್ರಾಸ್​ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಇಲ್ಲಿ ಅತ್ಯಾಚಾರದ ಆರೋಪ ಹೊತ್ತಿರುವವನಿಗೆ ಪಕ್ಷವು ಉಪಚುನಾವಣೆಯ ಟಿಕೆಟ್​ ನೀಡಲು ಮುಂದಾಗಿದೆ. ಇದು ತಪ್ಪು ನಿರ್ಧಾರ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತದೆ. ಹಾಗಾಗಿ, ಇದನ್ನು ಪ್ರಶ್ನಿಸಿದೆ ಎಂದು ತಾರಾ ಯಾದವ್​ ಹೇಳಿದ್ದಾರೆ.

Published On - 3:09 pm, Sun, 11 October 20