ಅಕ್ರಮವಾಗಿ ನಿರ್ಮಿಸಿದ್ದನ್ನು ಕೆಡವಿದ್ದೇವೆ; ವೈಎಸ್‌ಆರ್‌ಸಿಪಿ ಪಕ್ಷದ ಕಚೇರಿ ನೆಲಸಮ ಕಾರ್ಯ ಸಮರ್ಥಿಸಿಕೊಂಡ ಟಿಡಿಪಿ
ನೀರಾವರಿ ಇಲಾಖೆಯ ಎರಡು ಎಕರೆ ಜಾಗದಲ್ಲಿ ವಿರೋಧ ಪಕ್ಷದ ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗುತ್ತಿದೆ ಎಂದು ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಸಿಆರ್‌ಡಿಎ) ಮತ್ತು ಮಂಗಳಗಿರಿ ತಾಡೆಪಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಟಿಎಂಸಿ) ಪೌರಾಯುಕ್ತರಿಗೆ ದೂರು ನೀಡಲಾಗಿದೆ ಎಂದು ಟಿಡಿಪಿ ಹೇಳಿದೆ.

ಅಮರಾವತಿ ಜೂನ್ 22: ಗುಂಟೂರು ಜಿಲ್ಲೆಯ ತಾಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿರುವ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (YSRCP) ಕಚೇರಿಯನ್ನು ನೀರಾವರಿ ಇಲಾಖೆಯ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದರಿಂದ ಅದನ್ನು ಕೆಡವಲಾಗಿದೆ ಎಂದು ತೆಲುಗು ದೇಶಂ ಪಕ್ಷ (TDP) ಶನಿವಾರ ಹೇಳಿದೆ. ಎನ್ ಚಂದ್ರಬಾಬು ನಾಯ್ಡು (N Chandrababu Naidu) ನೇತೃತ್ವದ ಆಡಳಿತ ಪಕ್ಷದ ಪ್ರಕಾರ ಟಿಡಿಪಿ ಮುಖಂಡರೊಬ್ಬರ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ನೀರಾವರಿ ಇಲಾಖೆಯ ಎರಡು ಎಕರೆ ಜಾಗದಲ್ಲಿ ವಿರೋಧ ಪಕ್ಷದ ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗುತ್ತಿದೆ ಎಂದು ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಸಿಆರ್‌ಡಿಎ) ಮತ್ತು ಮಂಗಳಗಿರಿ ತಾಡೆಪಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಟಿಎಂಸಿ) ಪೌರಾಯುಕ್ತರಿಗೆ ದೂರು ನೀಡಲಾಗಿದೆ. “ಇದನ್ನು ಅನುಸರಿಸಿ, ವೈಎಸ್‌ಆರ್‌ಸಿಪಿ ನಾಯಕರ ಈ ಅಕ್ರಮ ನಿರ್ಮಾಣಗಳ ನೆಲಸಮವನ್ನು ಎಂಟಿಎಂಸಿ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆಸಲಾಗಿದೆ” ಎಂದು ಟಿಡಿಪಿ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಪಕ್ಷದ ಕಚೇರಿ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಲು ಸಿಎಂ ಆಗಿ ತಮ್ಮ ಅಧಿಕಾರವನ್ನು ‘ದುರುಪಯೋಗ’ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. “ಜಗನ್ ಮೋಹನ್ ರೆಡ್ಡಿ ಅವರು ಈ ಎರಡು ಎಕರೆಯಲ್ಲಿ ಕಚೇರಿ ನಿರ್ಮಿಸುವ ಮೂಲಕ ನೆರೆಯ 15 ಎಕರೆಯನ್ನು ಆಕ್ರಮಿಸಲು ಯೋಜಿಸಿದ್ದರು. ಈ ಎರಡು ಎಕರೆಯನ್ನು ವೈಎಸ್‌ಆರ್‌ಸಿಪಿಗೆ ಹಸ್ತಾಂತರಿಸಲು ನೀರಾವರಿ ಇಲಾಖೆ ಅನುಮತಿ ನೀಡಿಲ್ಲ ಎಂದು ಈಗ ಸ್ಪಷ್ಟಪಡಿಸಲಾಗಿದೆ,” ಎಂದು ಟಿಡಿಪಿ ಆರೋಪಿಸಿದೆ.
ಇದನ್ನೂ ಓದಿ: ನಿರ್ಮಾಣ ಹಂತದಲ್ಲಿರುವ ವೈಎಸ್‌ಆರ್‌ಸಿಪಿ ಕಚೇರಿ ನೆಲಸಮ; ಚಂದ್ರಬಾಬು ನಾಯ್ಡು ವಿರುದ್ಧ ಜಗನ್ ಗರಂ
ಏತನ್ಮಧ್ಯೆ, ನಿರ್ಮಾಣ ಹಂತದಲ್ಲಿರುವ ತಮ್ಮ ಪಕ್ಷದ ಕಚೇರಿ ಕೆಡವಿದ್ದರ ಬಗ್ಗೆ ಪ್ರತಿಕ್ರಿಯಿಸಿದ ವೈಎಸ್ ಜಗನ್ ಮೋಹನ್ ರೆಡ್ಡಿ, ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ‘ಸೇಡಿನ ರಾಜಕೀಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದಾರೆ’ ಮತ್ತು ‘ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಇಂಥಾ ನಡೆಯನ್ನು ಸ್ಥಗಿತಗೊಳಿಸುವಂತೆ ಹೈಕೋರ್ಟ್‌ನ ಆದೇಶದ ಹೊರತಾಗಿಯೂ ಟಿಡಿಪಿ ನೇತೃತ್ವದ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಸರ್ಕಾರವು ಕಟ್ಟಡವನ್ನು ನೆಲಸಮಗೊಳಿಸಿದೆ ಎಂದು YSCRP ಆರೋಪಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



