ಶಿಕ್ಷಕರ ನೇಮಕಾತಿ ಹಗರಣ: ಶಿಕ್ಷಕಿ ಸುಜಾತಾ ಜಾಗದಲ್ಲಿ 20 ವರ್ಷಗಳಿಂದ ಕೆಲಸ ಮಾಡ್ತಿದ್ದಿದ್ದು ಆಕೆಯ ಸಹೋದರಿ ಸಂಗೀತಾ

|

Updated on: Oct 19, 2023 | 3:29 PM

ಪಶ್ಚಿಮ ಬಂಗಾಳ(West Bengal)ದ ಬಹುಕೋಟಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಯಲ್ಲಿ ಸಾಕಷ್ಟು ಹೊಸ ವಿಚಾರಗಳು ಬಹಿರಂಗಗೊಂಡಿವೆ. ಕೆಲವು ತಿಂಗಳಿನಿಂದ ಇಡೀ ಪಶ್ಚಿಮ ಬಂಗಾಳದಲ್ಲಿ ನೇಮಕಾತಿ ಹಗರಣದ್ದೇ ಮಾತು, ಹೈಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸರ್ಕಾರವು ಹಲವು ನಾಯಕರ ಕೆಂಗಣ್ಣಿಗೂ ಗುರಿಯಾಗುತ್ತಿದೆ.

ಶಿಕ್ಷಕರ ನೇಮಕಾತಿ ಹಗರಣ: ಶಿಕ್ಷಕಿ ಸುಜಾತಾ ಜಾಗದಲ್ಲಿ 20 ವರ್ಷಗಳಿಂದ ಕೆಲಸ ಮಾಡ್ತಿದ್ದಿದ್ದು ಆಕೆಯ ಸಹೋದರಿ ಸಂಗೀತಾ
ಶಿಕ್ಷಕರ ನೇಮಕಾತಿ ಹಗರಣ
Follow us on

ಪಶ್ಚಿಮ ಬಂಗಾಳ(West Bengal)ದ ಬಹುಕೋಟಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಯಲ್ಲಿ ಸಾಕಷ್ಟು ಹೊಸ ವಿಚಾರಗಳು ಬಹಿರಂಗಗೊಂಡಿವೆ. ಕೆಲವು ತಿಂಗಳಿನಿಂದ ಇಡೀ ಪಶ್ಚಿಮ ಬಂಗಾಳದಲ್ಲಿ ನೇಮಕಾತಿ ಹಗರಣದ್ದೇ ಮಾತು, ಹೈಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸರ್ಕಾರವು ಹಲವು ನಾಯಕರ ಕೆಂಗಣ್ಣಿಗೂ ಗುರಿಯಾಗುತ್ತಿದೆ.

2004ರಲ್ಲಿ ವಟಾರ್ ಬ್ಲಾಕ್‌ನ ಸಾಹೇಬ್‌ಗಂಜ್ ನಂ.1 ಗ್ರಾಮ ಪಂಚಾಯತ್‌ನಲ್ಲಿರುವ ನೊಣದಂಗ ಶಿಶು ಶಿಕ್ಷಣ ಕೇಂದ್ರದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

ಸುಜಾತಾ ಎಂಬುವವರು ಶಿಕ್ಷಕಿಯಾಗಿ ಕೆಲಸಕ್ಕೆ ನೇಮಕಗೊಂಡಿದ್ದರು, ಆದರೆ ಕಳೆದ 20 ವರ್ಷಗಳಿಂದ ಅವರ ಸಹೋದರಿ ಸಂಗೀತಾ ಎಂಬುವವರು ಶಿಕ್ಷಕಿಯಾಗಿ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಅಕ್ರಮ ಬೆಳಕಿಗೆ ಬರಬೇಕಾದರೆ 20 ವರ್ಷವೇ ಹಿಡಿಯಿತು ಎಂಬುದು ವಿಪರ್ಯಾಸ.

ಮತ್ತಷ್ಟು ಓದಿ: ಶಿಕ್ಷಕರ ನೇಮಕಾತಿ ಹಗರಣದಲ್ಲಿ ಯಾರೆಲ್ಲ ಭಾಗಿ? ಸಿಐಡಿ ವರದಿ ಹೇಳಿದ್ದೇನು?

ಸಂಗೀತಾ ನೇಮಕದಲ್ಲಿ ಕೆಲವು ಅವ್ಯವಹಾರಗಳು ಪತ್ತೆಯಾಗಿದ್ದವು. ಆದರೆ, ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳನ್ನು ಹಿಡಿಯಲು ಎರಡು ದಶಕಗಳಿಗೂ ಹೆಚ್ಚು ಕಾಲ ಬೇಕಾಯಿತು ಎಂಬ ಪ್ರಶ್ನೆ ನಾನಾ ವಲಯಗಳಿಂದ ಏಳಲಾರಂಭಿಸಿದೆ.
ಮೂಲಗಳ ಪ್ರಕಾರ, ಸುಜಾತಾ 2004 ರಲ್ಲಿ ಆ ಮಕ್ಕಳ ಶಿಕ್ಷಣ ಕೇಂದ್ರದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು.
ಆದರೆ ಸುಜಾತಾ ಅವರ ಬದಲಿಗೆ ಅವರ ಸಹೋದರಿ ಸಂಗೀತಾ ಭಟ್ಟಾಚಾರ್ಯ 20 ವರ್ಷಗಳಿಂದ ಆ ಮಕ್ಕಳ ಶಿಕ್ಷಣ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಸಂಭಾವನೆ ಪಡೆಯುತ್ತಿದ್ದಾರೆ.

ಈ ಸುದ್ದಿ ತಿಳಿದ ತಕ್ಷಣ ಬ್ಲಾಕ್‌ನಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ಬಿಡಿಒ ಅರುಣ್ ಕುಮಾರ್ ಬಿಸ್ವಾಸ್ ಅವರು ನೇಮಕಾತಿಯಲ್ಲಿ ತಪ್ಪು ಕಂಡುಬಂದಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಉನ್ನತ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಪಂಚಾಯತ್ ಸಮಿತಿಯ ಅಧ್ಯಕ್ಷ ವಾಸುದೇವ್ ಯಶ್ ಹೇಳಿದ್ದಾರೆ.

ಮತ್ತೊಂದೆಡೆ, 2004ರಲ್ಲಿ ಸಿಪಿಎಂ ಆಡಳಿತಾವಧಿಯಲ್ಲಿ ಈ ನಿಯಮ ರೂಪಿಸಲಾಗಿತ್ತು. ಆಡಳಿತಾತ್ಮಕ ಮಟ್ಟದಲ್ಲಿ ತನಿಖೆ ಆರಂಭಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಆ ಬಳಿಕ ಸಿಪಿಎಂ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಹಿಳೆಯ ವೇತನದಲ್ಲಿ ಪಕ್ಷಗಳಿಗೂ ಪಾಲಿತ್ತು, ಹಾಗಾಗಿ ಈ ವಿಚಾರವನ್ನು ಮುಚ್ಚಿಟ್ಟಿದ್ದಾರೆ ಎಂದಿದ್ದಾರೆ. ಆದರೆ ಎಡಪಕ್ಷಗಳು ಆರೋಪಗಳನ್ನು ತಳ್ಳಿ ಹಾಕಿವೆ. ಸಿಪಿಎಂ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಎಂದು ಸಿಪಿಎಂ ಮುಖಂಡ ಸುಭಾಷ್ ಮಂಡಲ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ